Advertisement

Shobha Karandlaje: 3 ಬಾರಿ ಎಂಪಿ, 2ನೇ ಬಾರಿ ಕೇಂದ್ರ ಸಚಿವೆ

01:35 AM Jun 10, 2024 | Team Udayavani |

ಬೆಂಗಳೂರು: 1966 ರ ಅ. 23ರಂದು ಮೋನಪ್ಪ ಗೌಡ ಪೂವಕ್ಕ ದಂಪತಿಯ ಪುತ್ರಿಯಾಗಿ ಜನನ. ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿ.ಎ. ವ್ಯಾಸಂಗ ಮಾಡಿದ ಅವರು, ಮಂಗ ಳೂರು ವಿವಿಯ ರೋಷನಿ ನಿಲಯದಿಂದ ಎಂಎಸ್‌ಡಬ್ಲ್ಯು ಹಾಗೂ ಮೈಸೂರಿನ ಕರ್ನಾಟಕ ಮುಕ್ತ ವಿವಿ ಯಿಂದ ಎಂ.ಎ. ಪದವಿ ಪಡೆದಿದ್ದಾರೆ.

Advertisement

ಆರೆಸ್ಸೆಸ್‌ , ಎಬಿವಿಪಿ ಹಿನ್ನೆಲೆಯಿಂದ ಬಂದ ಶೋಭಾ ಕರಂದ್ಲಾಜೆ, 1996 ರಲ್ಲಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯಾಗುವ ಮೂಲಕ ಬಿಜೆಪಿಯಲ್ಲಿ ಗುರುತಿಸಿಕೊಂಡರು.

ನಂತರ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ, ರಾಷ್ಟ್ರ ಕಾರ್ಯದರ್ಶಿ ಆದರು. 1998ರಲ್ಲಿ ಬಿಜೆಪಿ ಪೂರ್ಣಾವಧಿ ಕಾರ್ಯಕರ್ತೆ ಯಾಗಿ ಗುರುತಿಸಿ ಕೊಂಡರು. 2004ರಲ್ಲಿ ಮೊದಲ ಬಾರಿಗೆ ಕರ್ನಾಟಕ ವಿಧಾನಪರಿಷತ್‌ ಸದಸ್ಯೆಯಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದರು.

2008ರಲ್ಲಿ ಯಶವಂತ ಪುರ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆ ಯಾಗಿ ಮೊದಲ ಬಾರಿಗೆ ಗ್ರಾಮೀ ಣಾ ಭಿವೃದ್ಧಿ ಮತ್ತು ಪಂಚಾ ಯತ್‌ರಾಜ್‌ ಸಚಿವೆಯಾಗಿ ಕಾರ್ಯ ನಿರ್ವಹಿ ಸಿದರು. ಬಳಿಕ ಇಂಧನ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆಯ ಹೆಚ್ಚುವರಿ ಹೊಣೆ ಗಾರಿಕೆಯನ್ನೂ ಹೆಗಲ ಮೇಲೆ ಹೊತ್ತು ನಿಭಾಯಿಸಿ ದರು. 2014, 2019 ರಲ್ಲಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಆಯ್ಕೆ ಯಾದರು. 2019ರಲ್ಲಿ ಕೇಂದ್ರದಲ್ಲಿ ಮಂತ್ರಿಯೂ ಆದರು. ಇದೀಗ ಬೆಂಗಳೂರು ಉತ್ತರ ಕ್ಷೇತ್ರದಿಂದ ಗೆದ್ದು ಮತ್ತೊಮ್ಮೆ ಮೋದಿ ಸಂಪುಟದ ಸದಸ್ಯರಾದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next