Advertisement

ಶೋಭಾ ಆಪಾದನೆ ಮಾಡೋದಕ್ಕೇ ಹುಟ್ಟಿದ್ದಾರೆ:ಆಂಜನೇಯ

06:35 AM Feb 26, 2018 | Team Udayavani |

ಚಿತ್ರದುರ್ಗ: ಸಂಸದೆ ಶೋಭಾ ಕರಂದ್ಲಾಜೆ ಆಪಾದನೆ ಮಾಡುವುದಕ್ಕಾಗಿಯೇ ಹುಟ್ಟಿರಬಹುದು ಎನ್ನಿಸುತ್ತದೆ ಎಂದು ಸಮಾಜಕಲ್ಯಾಣ ಇಲಾಖೆ ಸಚಿವ ಎಚ್‌. ಆಂಜನೇಯ ಟೀಕಿಸಿದ್ದಾರೆ.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೋಭಾ ಕರಂದ್ಲಾಜೆ ಇಂಧನ ಸಚಿವೆಯಾಗಿದ್ದಾಗ ಸಾವಿರಾರು ಕೋಟಿ ರೂ. ಅವ್ಯವಹಾರ ಹಾಗೂ ಭೂಮಿ ಖರೀದಿ ಆರೋಪ ಅವರ ಮೇಲಿದೆ. ಜವಾಬ್ದಾರಿ ಸ್ಥಾನದಲ್ಲಿರುವವರು ದಾಖಲೆಗಳಿಲ್ಲದೆ ಆರೋಪ ಮಾಡಬಾರದು. ವಿದ್ಯುತ್‌ ಕಂಬ ಹಾಕದೆ, ಪರಿವರ್ತಕ ಅಳವಡಿಸದೆ, ವಿದ್ಯುತ್‌ ಖರೀದಿಸದೆ ಬಿಲ್‌ ಪಾವತಿ ಮಾಡಿದರೇ ಎಂದು ತಿರುಗೇಟು ನೀಡಿದರು.

ಶೋಭಾ ಕರಂದ್ಲಾಜೆ ವಿರುದ್ಧದ ಅವ್ಯವಹಾರ ಬಯಲಿಗೆಳೆಯುತ್ತೀರಾ, ಅವರೊಂದಿಗೆ ಸಾರ್ವಜನಿಕ ಚರ್ಚೆಗೆ ಬರುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಂಜನೇಯ, ಸಾರ್ವಜನಿಕ ಚರ್ಚೆಗೆ ಶೋಭಮ್ಮನವರಿಗೆ ಆಹ್ವಾನ ನೀಡುವಷ್ಟು ದೊಡ್ಡವರು ನಾವಲ್ಲ. ಅಲ್ಲದೆ ಅವರ ಹಗರಣಗಳನ್ನು ಹೊರ ತೆಗೆಯುವಷ್ಟು ಸಮಯವೂ ನಮಗಿಲ್ಲ. ನಾವು ಚುನಾವಣಾ ವರ್ಷದಲ್ಲಿದ್ದೇವೆ. ನಮ್ಮ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಡಲೇ ನಮಗೆ ಸಮಯ ಸಾಲುತ್ತಿಲ್ಲ ಎಂದರು. 

ಕೇಂದ್ರ ಸರ್ಕಾರವೇ ಅವರದು. ಅವರ ಹಿಡಿತದಲ್ಲೇ ಇರುವ ಸಿಬಿಐ, ಸಿಐಡಿ ಸೇರಿ ಯಾವುದೇ ತನಿಖಾ ಸಂಸ್ಥೆಯಿಂದಾದರೂ ಗಂಗಾಕಲ್ಯಾಣ ಯೋಜನೆಯಡಿಯ ಕಾರ್ಯಗಳನ್ನು ತನಿಖೆಗೆ ಒಳಪಡಿಸಲಿ ಎಂದು ಸವಾಲೆಸೆದರು.

Advertisement

Udayavani is now on Telegram. Click here to join our channel and stay updated with the latest news.

Next