Advertisement
“ಜನಾಂಗೀಯ ನಿಂದನೆ ಪಾಕ್ ತಂಡದ ಸಂಸ್ಕೃತಿ ಅಲ್ಲ’ ಎಂಬುದಾಗಿ ಅಖ್ತರ್ ಹೇಳಿದ್ದಾರೆ. ಈ ಮೂಲಕ ತನ್ನ ಹೇಳಿಕೆಯಿಂದಾಗಿರುವ ವಿವಾದವನ್ನು ತಗ್ಗಿಸುವ ಪ್ರಯತ್ನ ನಡೆಸಿದ್ದಾರೆ. ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಅಖ್ತರ್, “ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಸಂಪೂರ್ಣ ವಿಷಯಾಂತರ ಮಾಡಲಾಗಿದೆ. ಕನೇರಿಯ ಹಿಂದೂ ಎನ್ನುವ ಕಾರಣಕ್ಕೆ ಒಂದಿಬ್ಬರು ಆಟಗಾರರು ಅಂತಹ ನಿಲುವು ಹೊಂದಿದ್ದರು. ಹಾಗಂತ ತಂಡದ ಉಳಿದ ಆಟಗಾರರು ಯಾವತ್ತೂ ಕನೇರಿಯ ಅವರನ್ನು ಆ ರೀತಿಯಲ್ಲಿ ನೋಡಿರಲಿಲ್ಲ’ ಎಂದಿದ್ದಾರೆ.
ಈ ನಡುವೆ, ಕನೇರಿಯ ಹಣಕ್ಕಾಗಿ ಇಂಥ ಕೆಲಸ ಮಾಡಿದ್ದಾರೆ ಎಂಬ ಪಾಕ್ ಮಾಜಿ ಆಟಗಾರ ಜಾವೇದ್ ಮಿಯಾಂದಾದ್ ಹೇಳಿಕೆಗೆ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. “ಪಾಕ್ ತಂಡಕ್ಕಾಗಿ ನಾನು ಬೆವರು ಸುರಿಸಿ 10 ವರ್ಷ ಕ್ರಿಕೆಟ್ ಆಡಿದ್ದೇನೆ. ಹಣಕ್ಕಾಗಿ, ಪ್ರಚಾರಕ್ಕಾಗಿ ನಾನೆಂದೂ ಯಾವುದೇ ವಿಷಯವನ್ನು ದೊಡ್ಡದು ಮಾಡಿಲ್ಲ. ನನಗಾಗಿರುವ ಅನ್ಯಾಯವನ್ನು ಅಖ್ತರ್ ಹೇಳಿದ್ದಾರೆ. ಅದು ನಿಜ ಎನ್ನುವುದನ್ನು ನಾನೂ ಒಪ್ಪಿಕೊಂಡಿದ್ದೇನೆ. ಹಣಕ್ಕಾಗಿ ಮಾರಾಟವಾದ ಕ್ರಿಕೆಟಿಗರು ಸ್ಪಾಟ್ ಫಿಕ್ಸಿಂಗ್ ಮಾಡಿ ಈಗ ಮತ್ತೆ ರಾಷ್ಟ್ರೀಯ ತಂಡದ ಪರ ಆಡುತ್ತಿದ್ದಾರೆ…’ ಎಂದು ಕನೇರಿಯ ಮಿಯಾಂದಾದ್‌ಗೆ ತಿರುಗೇಟು ನೀಡಿದರು.