Advertisement

World Cup 2023; ನಮ್ಮನ್ನು ನಾಶಗೊಳಿಸಿದ ಭಾರತ ಕಪ್‌ ಗೆಲ್ಲಲು ಅರ್ಹ: ಶೋಯಿಬ್‌ ಅಖ್ತರ್‌

10:09 AM Oct 16, 2023 | Team Udayavani |

ಲಾಹೋರ್‌: ಒಂದೆಡೆ ರಮೀಜ್‌ ರಾಜ ಪಾಕಿಸ್ಥಾನದ ನಿರ್ವಹಣೆಗೆ ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೊಂದೆಡೆ ಅವರದೇ ನಾಡಿನ ಮಾಜಿ ವೇಗಿ ಶೋಯಿಬ್‌ ಅಖ್ತರ್‌, ಭಾರತ 2011ರ ಸಾಧನೆಯನ್ನು ಪುನರಾವರ್ತಿಸಿ ಕಪ್‌ ಗೆಲ್ಲಲು ಅರ್ಹವಾಗಿದೆ ಎಂದಿದ್ದಾರೆ.

Advertisement

“ನಮ್ಮ ತಂಡವನ್ನು ನಾಶಗೊಳಿಸಿದ ಭಾರತದ ಮೇಲೀಗ ನಂಬಿಕೆ ಮೂಡಲಾರಂಭಿಸಿದೆ. ಅದು 2011ರ ಇತಿಹಾಸವನ್ನು ಪುನರಾವರ್ತಿಸಲಿದೆ ಎಂಬುದು ನನ್ನ ಅನಿಸಿಕೆ. ರೋಹಿತ್‌ ಪಡೆ ಸೆಮಿಫೈನಲ್‌ನಲ್ಲಿ ಯಾವುದೇ ಗೊಂದಲಕ್ಕೆ ಒಳಗಾಗದೇ ಇದ್ದಲ್ಲಿ ಈ ವಿಶ್ವಕಪ್‌ ಖಂಡಿತ ಗೆಲ್ಲಲಿದೆ’ ಎಂಬುದಾಗಿ ಅಖ್ತರ್‌ ತಮ್ಮ ಯೂಟ್ಯೂಬ್‌ ಚಾನೆಲ್‌ ನಲ್ಲಿ ಹೇಳಿದರು.

“ಭಾರತ ತಂಡ ಅಮೋಘ ಪ್ರದರ್ಶನ ನೀಡುತ್ತಿದೆ. ಅವರು ನಮ್ಮನ್ನು ನಿರಾಸೆಗೊಳಿಸಿದರಷ್ಟೇ ಅಲ್ಲ, ನಮ್ಮನ್ನು ನಾಶಗೊಳಿಸಿದರು. ಭಾರತಕ್ಕೆ ಪಾಕ್‌ ತಂಡ ಶಾಲಾ ಮಕ್ಕಳ ತಂಡದಂತೆ ಕಂಡಿತು. ಪಾಕ್‌ ಆಟವನ್ನು ಕಂಡು ನನಗೆ ಸಹಿಸಲಾಗಲಿಲ್ಲ. ರೋಹಿತ್‌ ಶರ್ಮ ನಿರ್ದಯವಾಗಿ ಆಡಿದರು’ ಎಂದು ಶೋಯಿಬ್‌ ನೇರ ಅಭಿಪ್ರಾಯ ವ್ಯಕ್ತಪಡಿಸಿದರು.

ಸೋತ ಮೇಲೆ ಬಿಸಿಸಿಐ ಮೇಲೆ ಗೂಬೆ: ತೀರಾ ಕಳಪೆ ಪ್ರದರ್ಶನ ನೀಡಿದ ಪಾಕಿಸ್ಥಾನ ವಿಶ್ವಕಪ್‌ ನಲ್ಲಿ ಭಾರತದ ವಿರುದ್ಧ ಆಡಿದ ಎಲ್ಲ 8 ಪಂದ್ಯಗಳಲ್ಲಿ ಸೋಲಿನ ನಂಟನ್ನು ಬೆಳೆಸಿದ್ದು ಈಗ ಇತಿಹಾಸ. ಈ ಸೋಲಿನ ಬಳಿಕ ಪಾಕಿಸ್ಥಾನ ತಂಡದ ನಿರ್ದೇಶಕ ಮಿಕ್ಕಿ ಆರ್ಥರ್‌ ಬಿಸಿಸಿಐ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ.

ಪಾಕಿಸ್ಥಾನ ವೀಕ್ಷಕರ ಅನುಪಸ್ಥಿತಿ ತಂಡದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸುವ ವೇಳೆ ಅವರು ಬಿಸಿಸಿಐ ಮೇಲೆ ವಾಗ್ಧಾಳಿ ನಡೆಸಿದರು.

Advertisement

“ಇದು ಐಸಿಸಿ ಟೂರ್ನಿಯಂತೆ ಇರಲಿಲ್ಲ, ಬಿಸಿಸಿಐ ಆಯೋಜಿಸಿದ ದ್ವಿಪಕ್ಷೀಯ ಸರಣಿಯಂತಿತ್ತು. ಪಾಕಿಸ್ಥಾನದ ಅಭಿಮಾನಿಗಳಿಗೆ ಭಾರತಕ್ಕೆ ಆಗಮಿಸಲು ವೀಸಾ ನೀಡಲಿಲ್ಲ. ಇದು ತಂಡದ ಪ್ರದರ್ಶನಕ್ಕೆ ತುಸು ಹಿನ್ನಡೆ ಉಂಟುಮಾಡಿತು. ಹಾಗಂತ ಇದೊಂದು ಸಬೂಬಲ್ಲ. ತವರಿನ ಪ್ರೇಕ್ಷಕರ ಉಪಸ್ಥಿತಿಯೂ ತಂಡದ ಪ್ರದರ್ಶನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ ನಮ್ಮವರ ಆಟವನ್ನು ನಾನು ಕ್ಷಮಿಸುವು ದಿಲ್ಲ’ ಎಂಬುದಾಗಿ ಆರ್ಥರ್‌ ಪ್ರತಿಕ್ರಿಯಿಸಿದರು. ಪಾಕಿಸ್ಥಾನ ನಿರ್ಭೀತ ಪ್ರದರ್ಶನ ನೀಡಲು ವಿಫ‌ಲವಾಯಿತು ಎಂದರು

Advertisement

Udayavani is now on Telegram. Click here to join our channel and stay updated with the latest news.

Next