Advertisement

ಮಹಾರಾಷ್ಟ್ರ ಪೊಲೀಸರಿಗೆ ಅವಮಾನ: ಶಿವಸೇನೆ

06:44 PM Mar 16, 2021 | Team Udayavani |

ಮುಂಬಯಿ: ಕೈಗಾರಿಕೋದ್ಯಮಿ ಮುಖೇಶ್‌ ಅಂಬಾನಿ ನಿವಾಸದ ಬಳಿ ಕಾರಿನಿಂದ ಸ್ಫೋಟಕ ವಶಪಡಿಸಿಕೊಂಡಿದ್ದಕ್ಕಾಗಿ ಮುಂಬಯಿ ಪೊಲೀಸ್‌ ಅಧಿಕಾರಿ ಸಚಿನ್‌ ವಾಝೆ ಅವರನ್ನು ಎನ್‌ಐಎ ಬಂಧಿಸಿರುವುದು ಮಹಾರಾಷ್ಟ್ರ ಪೊಲೀಸರ ಅವಮಾನ ಎಂದು ಹೇಳಿದ ಶಿವಸೇನೆಯು ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿದೆ.

Advertisement

ಮಹಾರಾಷ್ಟ್ರ ಪೊಲೀಸರ ತನಿಖಾ ಸಾಮರ್ಥ್ಯಗಳು ಮತ್ತು ಶೌರ್ಯವನ್ನು ವಿಶ್ವಾದ್ಯಂತ ಶ್ಲಾ ಸುತ್ತಿರುವಾಗ, ಎನ್‌ಐಎ ಈ ಪ್ರಕರಣದ ತನಿಖೆ ನಡೆಸುವುದು ಆಶ್ಚರ್ಯಕರವಾಗಿದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ತಿಳಿಸಿದೆ. ಈ ಪ್ರಕರಣದಲ್ಲಿ  ವಾಝೆ ತಪ್ಪಿತಸ್ಥರಾಗಿದ್ದರೆ ಮುಂಬಯಿ ಪೊಲೀಸರು ಮತ್ತು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಅವರ ವಿರುದ್ಧ ಕ್ರಮಕೈಗೊಳ್ಳುವ ಸಾಮರ್ಥ್ಯ ಹೊಂದಿದೆ. ಆದರೆ ಅದು ಆಗಬೇಕೆಂದು ಕೇಂದ್ರ ತನಿಖಾ ಸಂಸ್ಥೆ (ಎನ್‌ಐಎ) ಬಯಸುವುದಿಲ್ಲ. ಅನ್ವಯ್‌ ನಾೖಕ್‌ ಆತ್ಮಹತ್ಯೆ ಪ್ರಕರಣದಲ್ಲಿ ವಾಝೆ ಅವರು ಪತ್ರಕರ್ತ ಅರ್ನಾಬ್‌ ಗೋಸ್ವಾಮಿಯನ್ನು ಬಂಧಿಸಿದ್ದರಿಂದ ಅವರು ಬಿಜೆಪಿ ಮತ್ತು ಕೇಂದ್ರದ ಹಿಟ್‌-ಲಿಸ್ಟ್ ನಲ್ಲಿದ್ದಾರೆ ಎಂದು ಶಿವಸೇನೆ ಆರೋಪಿಸಿದೆ.

ಎನ್‌ಐಎ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವುದು ಆಶ್ಚರ್ಯಕರವಾಗಿದೆ. ಎನ್‌ಐಎನಿಂದ ಬಂಧನವು ರಾಜ್ಯ ಪೊಲೀಸರ ಅವಮಾನ ಮತ್ತು ಉದ್ದೇಶಪೂರ್ವಕವಾಗಿದೆ. ಇದರ ಬಗ್ಗೆ ಸಂತೋಷ ವ್ಯಕ್ತಪಡಿಸುವವರು ರಾಜ್ಯದ ಸ್ವಾಯತ್ತತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಸಂಪಾದಕೀಯ ಆರೋಪಿಸಿದೆ

Advertisement

Udayavani is now on Telegram. Click here to join our channel and stay updated with the latest news.

Next