Advertisement

ಅ.17ಕ್ಕೆ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಪುತ್ರನ ನಿಶ್ಚಿತಾರ್ಥ, ಹುಡುಗಿ ಯಾರು ಗೊತ್ತಾ ?

12:43 PM Sep 17, 2024 | Team Udayavani |

ನವದೆಹಲಿ: ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಹಿರಿಯ ಪುತ್ರ ಕಾರ್ತಿಕೇಯ ಸಿಂಗ್ ಚೌಹಾಣ್ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ ಅದರಂತೆ ಮುಂದಿನ ತಿಂಗಳು ಅಕ್ಟೋಬರ್ 17ರಂದು ನಿಶ್ಚಿತಾರ್ಥ ನಡೆಯಲಿದೆಯಂತೆ.

Advertisement

ಈ ಕುರಿತು ಸ್ವತಃ ಕೇಂದ್ರ ಸಚಿವರೇ ಸಾಮಾಜಿಕ ಮಾಧ್ಯಮ X ನಲ್ಲಿ ಮಾಹಿತಿ ಹಂಚಿಕೊಂಡಿದ್ದು ನನ್ನ ಹಿರಿಯ ಮಗನಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು ಅದರಂತೆ ಕಾರ್ತಿಕೇಯನ ನಿಶ್ಚಿತಾರ್ಥವನ್ನು ಉದ್ಯಮಿ ಅನುಪಮ್ ಬನ್ಸಾಲ್ ಮತ್ತು ರುಚಿತಾ ಬನ್ಸಾಲ್ ಅವರ ಪುತ್ರಿ ಅಮಾನತ್ ಬನ್ಸಾಲ್ ಅವರೊಂದಿಗೆ ಅಕ್ಟೋಬರ್ 17ರಂದು ನಿಶ್ಚಿತಾರ್ಥ ನೆರವೇರಲಿದೆ ಅದಕ್ಕೆ ನಿಮ್ಮೆಲ್ಲರ ಆಶೀರ್ವಾದ, ಹಾರೈಕೆ ಬೇಕು ಎಂದು ಕೇಳಿಕೊಂಡಿದ್ದಾರೆ.

ಅಮಾನತ್ ಬನ್ಸಾಲ್ ಯಾರು?
ಶಿವರಾಜ್ ಅವರ ಹಿರಿಯ ಸೊಸೆ ಅಮಾನತ್ ಬನ್ಸಾಲ್ ದೇಶದ ಖ್ಯಾತ ಉದ್ಯಮಿಯೊಬ್ಬರ ಮಗಳು. ಅಮಾನತ್ ಬನ್ಸಾಲ್ ಅವರು ಉನ್ನತ ಶಿಕ್ಷಣವನ್ನು ವಿದೇಶದಲ್ಲೇ ಮಾಡಿದ್ದಾರೆ. ಅವರ ತಂದೆ ಅನುಪಮ್ ಬನ್ಸಾಲ್ ಲಿಬರ್ಟಿ ಶೂಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ತಾಯಿ ರುಚಿತಾ ಬನ್ಸಾಲ್ ಅವರು ಭಾರತದ ಮಹಿಳಾ ಉದ್ಯಮಿಗಳ ಒಕ್ಕೂಟದ ಹರಿಯಾಣ ಘಟಕದ ಸಂಸ್ಥಾಪಕರಾಗಿದ್ದಾರೆ. ಅಮಾನತ್ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಮನೋವೈಜ್ಞಾನಿಕ ಸಂಶೋಧನೆಯಲ್ಲಿ ಎಂಎಸ್ಸಿ ಮಾಡಿದ್ದಾರೆ.

4 ಬಾರಿ ಮುಖ್ಯಮಂತ್ರಿ:
ಶಿವರಾಜ್ ಸಿಂಗ್ ಚೌಹಾಣ್ ಅವರು 4 ಬಾರಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಈ ವರ್ಷದ ಜೂನ್‌ನಲ್ಲಿ ಮೋದಿ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು, ಇದು ಮೂರು ದಶಕಗಳ ಕಾಲದ ಅವರ ರಾಜಕೀಯ ಜೀವನದಲ್ಲಿ ಪ್ರಮುಖ ಮೈಲುಗಲ್ಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.