Advertisement

ಶಿವರಾಜ್‌ ಕುಮಾರ್‌ ಶಿವಪ್ಪ ಲುಕ್‌ ವೈರಲ್‌ ಕುತೂಹಲ ಹೆಚ್ಚಿಸಿದ ಚಿತ್ರ

01:05 PM Dec 15, 2020 | Suhan S |

ಸಿನಿಮಾ ಮಂದಿ ತಮ್ಮ ಸಿನಿಮಾದ ಲುಕ್‌ ಒಮ್ಮೆಲೇ ಬಹಿರಂಗವಾಗಬಾರದು ಎಂದು ಎಷ್ಟೆಲ್ಲಾ ಎಚ್ಚರ ವಹಿಸಿ ಶೂಟಿಂಗ್‌ ಮಾಡುತ್ತಿರುತ್ತಾರೆ. ಆದರೆ, ಯಾರೋ ಒಬ್ಬರ ಆತಿಯಾದ ಕುತೂಹಲದಿಂದ ಚಿತ್ರರಂಗದ ಪ್ಲ್ಯಾನ್‌ ಎಲ್ಲವೂ ತಲೆಕೆಳಗಾಗುತ್ತದೆ. ಬೇಡ ಬೇಡವೆಂದರೂ ಸಿನಿಮಾದಲ್ಲಿನ ಹೀರೋ ಲುಕ್‌ ಹೇಗೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತದೆ. ಈಗ “ಶಿವಪ್ಪ’ ಚಿತ್ರತಂಡಕ್ಕೂ ಇದೇ ತಲೆನೋವಾಗಿದೆ.

Advertisement

ಚಿತ್ರದಲ್ಲಿನ ಶಿವರಾಜ್‌ಕುಮಾರ್‌ ಲುಕ್‌ವೊಂದು ರಿವೀಲ್‌ ಆಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಚಿತ್ರದಲ್ಲಿ ಶಿವರಾಜ್‌ ಕುಮಾರ್‌ ಖೈದಿ ಗೆಟಪ್‌ನಲ್ಲಿರುವ ಜೊತೆಗೆ ಹೇರ್‌ ಸ್ಟೈಲ್‌ ಕೂಡಾ ಬದಲಾಗಿದೆ. ಸಖತ್‌ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇದನ್ನೂ ಓದಿ :ತೆರೆ ಮೇಲೆ ಬರಲಿದೆ ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಬಯೋಪಿಕ್

ಶಿವಣ್ಣನಿಂದ ಮತ್ತೂಂದು ಮಾಸ್‌ ಸಿನಿಮಾ ಬರೋದು ಗ್ಯಾರಂಟಿ ಎಂದು ಕುತೂಹಲ ಹೆಚ್ಚಿಸಿಕೊಂಡಿದ್ದಾರೆ. ಈ ಚಿತ್ರವನ್ನು ತಮಿಳಿನ ವಿಜಯ್‌ ಮಿಲ್ಟನ್‌ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣ ಮೂರು ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಧನಂಜಯ್‌ ಕೂಡಾ ಪ್ರಮುಖಪಾತ್ರ ಮಾಡುತ್ತಿದ್ದು, ಅಂಜಲಿ ಹಾಗೂ ಯಶಾ ಈ ಸಿನಿಮಾದ ನಾಯಕಿಯರು.

ಈಗಾಗಲೇ ಚಿತ್ರೀಕರಣಭರದಿಂದ ಸಾಗುತ್ತಿದೆ.ಈ ಚಿತ್ರವನ್ನು ಕೃಷ್ಣ ಸಾರ್ಥಕ್‌ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಅನೂಪ್‌ ಸೀಳಿನ್‌ ಸಂಗೀತವಿದೆ. ಸದ್ಯ ಶಿವರಾಜ್‌ಕುಮಾರ್‌ ನಟನೆಯ “ಭಜರಂಗಿ-2′ ಚಿತೀಕರಣಪೂರ್ಣಗೊಂಡಿದ್ದು, ಮಾರ್ಚ್‌ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಇದರ ನಡುವೆಯೇ ಶಿವಣ್ಣ ಹಾಗೂ ಹರ್ಷ ಕಾಂಬಿನೇಶನ್‌ನಲ್ಲಿ ಹೊಸ ಚಿತ್ರವೊಂದು ಬರಲಿದ್ದು, ಚಿತ್ರಕ್ಕೆ “ಮುತ್ತುರಾಯ’ ಎಂದು ಟೈಟಲ್‌ ಇಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next