ಗುಜರಾತ್: ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಅರಬ್ಬೀ ಸಮುದ್ರದಲ್ಲಿ 100 ಕೆಜಿಗೂ ಅಧಿಕ ಭಾರದ ಹರಳಿನ ಶಿವಲಿಂಗವೊಂದು ಮೀನುಗಾರರ ಬಲೆಗೆ ಬಿದ್ದಿದೆ.
ಭರೂಚ್ ಜಿಲ್ಲೆಯ ಜಂಬೂಸರ್ ತಾಲೂಕಿನ ಕವಿ ಗ್ರಾಮದ ಮೀನುಗಾರರ ಬಲೆಯಲ್ಲಿ 100 ಕೆಜಿಗೂ ಅಧಿಕ ತೂಕದ ಎರಡೂವರೆ ಅಡಿ ಎತ್ತರದ ಶಿವಲಿಂಗ ಕಂಡು ಅಲ್ಲಿನ ಜನರಲ್ಲಿ ಅಚ್ಚರಿ ಮೂಡಿಸಿದೆ.
ಛಗನ್ ಸೋಮ ವಘೇಲಾ ಅವರಿಗೆ ಸೇರಿದ ದೋಣಿಯಲ್ಲಿ ಕಾಳಿದಾಸ್ ವಘೇಲಾ, ಮಂಗಲ್ ಕಾಳಿದಾಸ್ ಫಕೀರಾ ಸೇರಿದಂತೆ ಸುಮಾರು 12 ಮಂದಿ ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ಬಲೆ ಹಾಕಿದ್ದರು ಈ ವೇಳೆ ಬಲೆಗೆ ಶಿವಲಿಂಗ ಸಿಲುಕಿದ್ದು ಮೀನುಗಾರರು ಬಲೆಯನ್ನು ಎಳೆಯಲು ಪ್ರಯತ್ನ ಪಟ್ಟಾಗ ಹೆಚ್ಚಿನ ಭಾರ ಇರುವುದು ಕಂಡುಬಂದಿದೆ ಕಠಿಣ ಪರಿಶ್ರಮದ ಬಳಿಕ ಬಲೆಯನ್ನು ಸಮುದ್ರ ದಡಕ್ಕೆ ತಂದು ನೋಡಿದಾಗ ಬಲೆಯಲ್ಲಿ ಶಿವಲಿಂಗ ಪತ್ತೆಯಾಗಿದೆ.
ಶಿವಲಿಂಗ ಸಿಕ್ಕಿರುವ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ನೋಡಲು ಹತ್ತಿರದ ಊರಿನಿಂದ ಜನ ತಂಡೋಪತಂಡವಾಗಿ ಭರೂಚ್ ಗೆ ಬರುತ್ತಿದ್ದು ಜನರನ್ನು ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸಲಾಗಿದೆ.
ವಿಚಾರ ತಿಳಿಯುತ್ತಿದ್ದಂತೆ ಭರೂಚ್ ಗೆ ತೆರಳಿದ ಜಿಲ್ಲಾಡಳಿತ ಈ ಶಿವಲಿಂಗವನ್ನು ಯಾವ ಶಿಲೆಯಿಂದ ನಿರ್ಮಿಸಲಾಗಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಇದನ್ನು ತಯಾರಿಸಿದ ಕಲ್ಲು ಹತ್ತಿರದ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ಎಂಬುದನ್ನು ಪತ್ತೆಹಚ್ಚುವ ಕಾರ್ಯ ನಡೆಸುತ್ತಿದ್ದಾರೆ.