Advertisement

ಬಿಜೆಪಿ ಅಭ್ಯರ್ಥಿ ಸೋಲಿಸಲು ಕಾರ್ಯಕರ್ತರು ಪಣ ತೊಡಿ

04:51 PM Mar 23, 2021 | Team Udayavani |

ದಾವಣಗೆರೆ: ಈ ಬಾರಿಯ ಪಾಲಿಕೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಠೇವಣಿ ಸಹ ದೊರೆಯದಂತೆ ಸೋಲಿಸಬೇಕು ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಕರೆ ನೀಡಿದರು.

Advertisement

ಮಹಾನಗರ ಪಾಲಿಕೆಯ 20ನೇ ವಾರ್ಡ್‌ನ ಭಾರತ್‌ ಕಾಲೋನಿಯ 4ನೇ ಕ್ರಾಸ್‌ನಲ್ಲಿ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮೀನಾಕ್ಷಿ ಜಗದೀಶ್‌ ಪರ ಮತಯಾಚಿಸಿದ ಅವರು, ಬಿಜೆಪಿಯವರ ಅಧಿ ಕಾರ ದಾಹದಿಂದ ಉಪ ಚುನಾವಣೆ ಎದುರಾಗಿದೆ. ವಾರ್ಡಿನ ಮತದಾರರು ನೀಡಿದ ತೀರ್ಪನ್ನು ಧಿ ಕ್ಕರಿಸಿದವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ಮಧ್ಯೆ ನೇರ ಹಣಾಹಣಿ ಇದೆ. ಕಳೆದ ಬಾರಿ ಪಕ್ಷದ ಅಭ್ಯರ್ಥಿಗೆ ದೊಡ್ಡ ಜಯಭೇರಿ ನೀಡಿದ್ದ ವಾರ್ಡಿನ ಜನತೆ ಈ ಬಾರಿ ಬಿಜೆಪಿ ಅಭ್ಯರ್ಥಿಗೆ ಠೇವಣಿಯೂ ಸಿಗದಂತೆ ಕಾಂಗ್ರೆಸ್‌ ಅಭ್ಯರ್ಥಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್‌ ಮಾತನಾಡಿ, ಭಾರತ್‌ ಕಾಲೋನಿ ವಾರ್ಡ್‌ನ ಎಲ್ಲರ ಆಶಯದಂತೆ ನಿಮ್ಮವರೇ ಆದ ಅಭ್ಯರ್ಥಿಗೆ ಪಕ್ಷ ಮಣೆ ಹಾಕಿದೆ. ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ಸ್ವಾಭಿಮಾನದ ಸಂಕೇತವಾಗಿ ಕಾಂಗ್ರೆಸ್‌ ಅಭ್ಯರ್ಥಿಯನ್ನ ಗೆಲ್ಲಿಸಬೇಕು ಎಂದು ಕೋರಿದರು.

ದಕ್ಷಿ ಣ ವಿಧಾನಸಭಾ ಬ್ಲಾಕ್‌ಕಾಂಗ್ರೆಸ್‌ ಅಧ್ಯಕ್ಷ ಅಯೂಬ್‌ ಪೈಲ್ವಾನ್‌ ಮಾತನಾಡಿ, ಅಚ್ಚೇ ದಿನ್‌ ಎಂದು ಹೇಳಿ ಅ ಧಿಕಾರಕ್ಕೆ ಬಂದಿರುವ ಬಿಜೆಪಿ ಜಾರಿಗೆ ತಂದಿರುವ ಜನ ವಿರೋ ಧಿ ನೀತಿಗಳ ವಿರುದ್ಧ ಮತ ಚಲಾಯಿಸಬೇಕು. ಈ ಮೂಲಕ ಈ ಭಾಗದ ಜನತೆ ಬಿಜೆಪಿ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ನಾಂದಿ ಹಾಡಬೇಕು ಎಂದರು.

Advertisement

ಮಹಾನಗರ ಪಾಲಿಕೆ ಸದಸ್ಯಕೆ. ಚಮನ್‌ಸಾಬ್‌ ಮಾತನಾಡಿ, ದೇಶದ ಜನತೆಗೆ ಸಮರ್ಪಕವಾಗಿ ಕೋವಿಡ್‌ ವ್ಯಾಕ್ಸಿನ್‌ ನೀಡದ ಬಿಜೆಪಿ ಸರ್ಕಾರ ಪಾಕಿಸ್ತಾನಕ್ಕೆ ಉಚಿತವಾಗಿ ಕೋವಿಡ್‌ ವ್ಯಾಕ್ಸಿನ್‌ ಕಳುಹಿಸುವ ಮೂಲಕ ದೇಶದ್ರೋಹ ಕೃತ್ಯ ಎಸಗಿದೆ ಎಂದು ದೂರಿದರು.

ಉದ್ಯಮಿ ಕೋಗುಂಡಿ ಬಕ್ಕೇಶಪ್ಪ ಮಾತನಾಡಿ,ಈ ಭಾಗದ ಜನತೆ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಬೆಂಬಲಿಸುತ್ತಿದ್ದಾರೆ. ಈಗಿನ ಉಪ ಚುನಾವಣೆಯಲ್ಲಿ ಸ್ಥಳೀಯರೇ ಆಗಿರುವ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸುವುದಾಗಿ ಭರವಸೆ ನೀಡಿದರು.

ಕಾಂಗ್ರೆಸ್‌ ಅಭ್ಯರ್ಥಿ ಮೀನಾಕ್ಷಿ ಜಗದೀಶ್‌, ವಾರ್ಡ್‌ ಕಾಂಗ್ರೆಸ್‌ ಅಧ್ಯಕ್ಷ ಶಂಕರ್‌, ಸ್ಥಳೀಯರಾದರಾಕಿ, ಲಕ್ಷ್ಮಮ್ಮ, ಜಗದೀಶ್‌, ಉದ್ಯಮಿ ಕೆ.ಜಿ.ಕೆ. ಚಿದಾನಂದ, ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ಎಸ್‌. ಮಲ್ಲಿಕಾರ್ಜುನ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶುಭಮಂಗಳ, ಅನ್ನಪೂರ್ಣಮ್ಮ, ಬಸಾಪುರ ಕೊಟ್ರಯ್ಯ, ವೆಂಕಟೇಶ್‌ ನಾಯ್ಕ, ಸೊಸೈಟಿ ವೆಂಕಟೇಶ ನಾಯ್ಕ, ರಘು, ಚಂದ್ರು, ಅಲೆಕ್ಸಾಂಡರ್‌ (ಜಾನು), ಮುನಿಸ್ವಾಮಿ, ವೀರೇಶ್‌, ರಾಜಶೇಖರ್‌ ಬೆಂಡಿಗೇರಿ, ದಾದು, ಮಾದೇಶಣ್ಣ, ಪೆರುಮಾಳ್‌, ಆನೆಕೊಂಡ ನಾಗರಾಜ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next