Advertisement
ಇತ್ತೀಚೆಗೆ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಆಯೋಜಿಸಿದ್ದ ಸದಾನಂದ ಸುವರ್ಣ ಪ್ರಾಯೋಜಿತ ಶಿವರಾಮ ಕಾರಂತ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಕೈಗಾದಲ್ಲಿ ಅಣು ಸ್ಥಾವರವನ್ನು ಸ್ಥಾಪಿಸಬೇಕೆಂದು ನಿರ್ಧರಿಸಿದ್ದ ಸಮಯದಲ್ಲಿ ಅದನ್ನು ಕಾರಂತರು ಕಟುವಾಗಿ ವಿರೋಧಿಸುತ್ತಿದ್ದರು. ಬಿ.ಎ.ಆರ್.ಸಿ. ಯ ವಿಜ್ಞಾನಿಗಳ ತಂಡ ಎಲ್ಲೆಡೆ ತೆರಳಿ ಪರಮಾಣು ಶಕ್ತಿಯ ವಿವಿಧ ಲಾಭಗಳ ಬಗ್ಗೆ ಮನವರಿಕೆ ಮಾಡುತ್ತಿದ್ದರು. ಆಗ ಕಾರಂತರು ತಾವೂ ಆ ಸ್ಥಳಗಳಿಗೆ ಹೋಗಿ ಪರಮಾಣು ಶಕ್ತಿಯ ವಿರುದ್ಧ ಗುಡುಗುತ್ತಿದ್ದರು. ಆಗ ಬಿ.ಎ.ಆರ್.ಸಿ. ಯ ಮುಖ್ಯಸ್ಥರಾಗಿದ್ದ ಕನ್ನಡಿಗರಾದ ರಾಜಾರಾಮಣ್ಣ ಮತ್ತು ಶ್ರೀನಿವಾಸರವರು ಕಾರಂತರ ಪರಿಚಯವಿದ್ದ ನನ್ನನ್ನು ಈ ವಿಷಯದಲ್ಲಿ ಅನುಸಂಧಾನ ಮಾಡಲು ಕಳಿಸಿದ್ದರು. ಆದರೆ ಪರಮಾಣು ಶಕ್ತಿಯನ್ನು ಹಾನಿಕಾರಕವೆಂದೇ ತೀರ್ಮಾನಿಸಿದ್ದ ಕಾರಂತರು ಬೇರೆಯವರ ಮಾತನ್ನು ಒಪ್ಪಲು ಸಿದ್ಧರಿರಲಿಲ್ಲ. ವೈಜ್ಞಾನಿಕವಾಗಿ ತಮ್ಮ ನಡುವೆ ಭಿನ್ನಾಭಿಪ್ರಾಯವಿದ್ದರೂ ತಮ್ಮ ನಡುವಿನ ಆಪ್ತತೆಗೆ ಯಾವ ಕುಂದೂ ಬರಲಿಲ್ಲ ಎಂದು ನಿಂಜೂರರು ನುಡಿದರು. ತೊಂಬತ್ತರ ದಶಕದ ಕೊನೆಯಲ್ಲಿ ಬಿ.ಎ.ಆರ್.ಸಿಯವರು ಏರ್ಪಡಿಸಿದ್ದ ವಿಜ್ಞಾನದ ಸಮ್ಮೇಳನಕ್ಕೆ ಆಹ್ವಾನವಿತ್ತಾಗ ತಮ್ಮ ತೊಂಬತ್ತೆ$çದರ ಇಳಿವಯಸ್ಸಿನಲ್ಲೂ ಹುರುಪಿನಿಂದ ಮುಂಬಯಿಗೆ ಬಂದ ಕಾರಂತರು ವಿಜ್ಞಾನದ ವಿಷಯದಲ್ಲಿ ನಿರರ್ಗಳವಾಗಿ ಭಾಷಣ ಮಾಡಿ ನೆರೆದಿದ್ದ ವಿಜ್ಞಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದ್ದರು. ಆ ಸಂದರ್ಭದಲ್ಲಿ ಕಾರಂತರಿಗೆ ಪ್ರವಾಸದ ಖರ್ಚು ಮತ್ತು ಮುಂಬಯಿ ಓಡಾಟದ ಖರ್ಚನ್ನು ನೀಡಿದಾಗ ”ತಾನು ಸೀನಿಯರ್ ಸಿಟಿಜನ್ ಆದ್ದರಿಂದ ವಿಮಾನದ ದರ ಕಡಿಮೆ ಇತ್ತು ಮತ್ತು ಮುಂಬಯಿಯ ತಿರುಗಾಟದ ಖರ್ಚನ್ನು ನಿಂಜೂರರು ನಿರ್ವಹಿಸುತ್ತಿರುವುದರಿಂದ ಆ ಹಣವನ್ನು ಅವರಿಗೇ ಕೊಡಿ” ಎಂದು ತಾವು ಖರ್ಚು ಮಾಡಿದ್ದಷ್ಟೇ ಹಣವನ್ನು ಸಂಚಾಲಕರಿಂದ ತೆಗೆದುಕೊಂಡರು. ಅವರು ಜೀವನದುದ್ದಕ್ಕೂ ಪ್ರತಿಪಾದಿಸಿಕೊಂಡು ಬಂದ ನಿಷ್ಠೆ ಮತ್ತು ಪ್ರಾಮಾಣಿಕತನದ ಅರಿವು ನಮಗಾಗಿದೆ ಎಂದು ನಿಂಜೂರರು ಈ ಘಟನೆಯ ಬಗ್ಗೆ ತಿಳಿಸಿದರು..
Related Articles
Advertisement