Advertisement
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೋಟ ಶಿವರಾಮ ಕಾರಂತರ ಹುಟ್ಟಹಬ್ಬದ ಪ್ರಯುಕ್ತ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಮಂಗಳೂರಿನಲ್ಲಿ ರವಿವಾರ ಜರಗಿದ ಸಮಾರಂಭದಲ್ಲಿ ತರಂಗ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ ಅವರಿಗೆ “ಕಾರಂತ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಸ್ವಾಮೀಜಿಯವರು ಅಶೀರ್ವಚನ ನೀಡಿದರು.
ಪ್ರಶಸ್ತಿ ಸ್ವೀಕರಿಸಿದ ಡಾ| ಸಂಧ್ಯಾ ಪೈ ಅವರು ಮಾತನಾಡಿ, ನಾವು ಎಳೆ ಯರಾಗಿದ್ದಾಗ ಹಿರಿಯರು ಕಥೆಗಳ ಮೂಲಕ ಮಕ್ಕಳಲ್ಲಿ ಪರಂಪರೆ, ಸಂಸ್ಕೃತಿಯ ಅರಿವು ಮೂಡಿ ಸುತ್ತಿ ದ್ದರು ಮತ್ತು ನೈತಿಕ ಮೌಲ್ಯಗಳನ್ನು ತುಂಬು ತ್ತಿದ್ದರು. ಆದರೆ ಪ್ರಸ್ತುತ ಅದು ಮರೆಯಾಗುತ್ತಿದೆ. ಬದುಕನ್ನು ಬದಲಾಯಿಸಲು ಸಾಧ್ಯವಿರುವುದು ಜೀವನದ ಮೌಲ್ಯಗಳನ್ನು ಅರ್ಥೈಸಿ ಕೊಂಡಾಗ. ಇಂತಹ ಉತ್ತಮ ಪರಂಪರೆಯನ್ನು ತರಂಗದ ಮೂಲಕ ಯಾಕೆ ಮರು ಆರಂಭಿಸಬಾರದು ಎಂಬ ಚಿಂತನೆ ನನ್ನಲ್ಲಿ ಮೂಡಿತು ಮತ್ತು ಆ ಪ್ರಯತ್ನ ಜನಮಾನಸವನ್ನು ಮುಟ್ಟಿತು ಎಂದು ಹೇಳಿದರು.
Related Articles
Advertisement
ತರಂಗ ವಾರಪತ್ರಿಕೆಗೆ ಮುಂದಿನ ಜನವರಿಗೆ 40 ವರ್ಷಗಳ ಸಂಭ್ರಮ. ತರಂಗದ ವ್ಯವಸ್ಥಾಪಕ ಸಂಪಾದಕಿ ಯಾಗಿ 25 ವರ್ಷಗಳನ್ನು ಪೂರೈಸುತ್ತಿ ದ್ದೇನೆ. ಸಂತೃಪ್ತ ಗೃಹಿಣಿಯಾಗಿದ್ದ ನನ್ನ ಬದುಕಿನಲ್ಲಿ ತರಂಗ ಹೊಸ ಚಿಂತನೆಯ ತರಂಗಗಳನ್ನು ಸೃಷ್ಟಿಸಿತು. ನಾನು ಇಂದು ಮಾಡಿರುವ ಸಾಧನೆ, ದೊರಕಿರುವ ಸಮ್ಮಾನಗಳಲ್ಲಿ ತರಂಗ ವಾರಪತ್ರಿಕೆಯ ಪಾತ್ರ ಮಹತ್ತರವಾ ದುದು ಎಂದ ಅವರು ಮಹಾನ್ ಸಾಹಿತಿ, ಸಾಧಕ ಡಾ| ಶಿವರಾಮ ಕಾರಂತರು ಒಂದು ಪಠ್ಯವಿದ್ದಂತೆ.ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿ ಯನ್ನು ಸ್ವೀಕರಿಸುತ್ತಿರುವುದು ನನ್ನಲ್ಲಿ ಧನ್ಯತೆಯನ್ನು ಮೂಡಿಸಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಸ್. ಯಡಪಡಿತ್ತಾಯ ಮಾತ ನಾಡಿ, ಡಾ| ಶಿವರಾಮ ಕಾರಂತರ ನಡೆ, ನುಡಿ, ಬದುಕು ನಮ್ಮೆಲ್ಲರ ಬದುಕಿಗೆ ಮಾರ್ಗದರ್ಶಿಯಾಗಿದೆ ಎಂದರು.
ಸಾಹಿತಿ ನಿತ್ಯಾನಂದ ಕಾರಂತ ಪೊಳಲಿ, ಶಾಸಕ ವೇದವ್ಯಾಸ ಕಾಮತ್, ಕರ್ಣಾಟಕ ಬ್ಯಾಂಕಿನ ಮಹಾ ಪ್ರಬಂಧಕ ನಾಗರಾಜ ರಾವ್ ಅವರು ಕಾರಂತರ ಸ್ಮರಣೆಗೈದರು.
ಮೇಯರ್ ಪ್ರೇಮಾನಂದ ಶೆಟ್ಟಿ ಅವರು ದೀಪ ಬೆಳಗಿದರು. ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಕಾರಂತ ಪ್ರಶಸ್ತಿ ಪುರಸ್ಕೃತರಾದ ಡಾ| ಸಂಧ್ಯಾ ಎಸ್. ಪೈ ಅವರನ್ನು ಅಭಿನಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿ ಕಾರಂತ ಹುಟ್ಟುಹಬ್ಬ ಮತ್ತು ಕಾರಂತ ಪ್ರಶಸ್ತಿ ಬಗ್ಗೆ ವಿವರಿಸಿದರು.
ಕೆ. ಮೋಹನ್ ರಾವ್ ಮೊಡಂಕಾಪು, ಡಾ| ಮಂಜುಳಾ ಶೆಟ್ಟಿ ಹಾಗೂ ಅಚ್ಯುತ ಚೇವಾರು ಅವರಿಗೆ ಕಲ್ಕೂರ ಅಭಿನಂದನಾ ಪುರಸ್ಕಾರ ಪ್ರದಾನ ಮಾಡಲಾಯಿತು. ಪ್ರಬಂಧ ಸ್ಪರ್ಧೆ, ಕಾರ್ಡಿನಲ್ಲಿ ಚಿತ್ರಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ದಯಾನಂದ ಕಟೀಲು ಪ್ರಶಸ್ತಿ ಪತ್ರ ವಾಚಿಸಿದರು. ಪ್ರೊ| ಜಿ.ಕೆ. ಭಟ್ ಸೇರಾಜೆ ವಂದಿಸಿದರು. ಮಂಜುಳಾ ಶೆಟ್ಟಿ, ಕವಿತಾ ಪಕ್ಕಳ ನಿರೂಪಿಸಿದರು.
ಕಾರಂತರ ಜತೆ ತರಂಗದ ಅವಿನಾಭಾವ ಸಂಬಂಧಡಾ| ಶಿವರಾಮ ಕಾರಂತರು ಮತ್ತು “ತರಂಗ’ದ ನಡುವೆ ಒಂದು ಅವಿನಾಭಾವ ಸಂಬಂಧವಿತ್ತು. ತರಂಗ ಪ್ರಾರಂಭದ ದಿನಗಳಲ್ಲಿ ಕಾರಂತರು ಕಾರಂತಜ್ಜನಾಗಿ ಮೂರು ವರ್ಷಗಳ ಕಾಲ ತರಂಗದ ಬಾಲವನದಲ್ಲಿ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಮುಖಪುಟದ ಲೇಖನಗಳನ್ನೂ ಬರೆಯುತ್ತಿದ್ದರು. ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು ಎಂದು ಡಾ| ಸಂಧ್ಯಾ ಎಸ್. ಪೈ ಸ್ಮರಿಸಿದರು.