ಬೆಂಗಳೂರು: ಕೋವಿಡ್ ಲಾಕ್ ಡೌನ್‌ನಿಂದ ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ಚಿತ್ರರಂಗದಿಂದ ಕಡೆಯಿಂದ ಹಲವರು ನೆರವಿನ ಹಸ್ತ ಚಾಚುತ್ತಿದ್ದಾರೆ. ಅನೇಕರು ತಮ್ಮದೇ ಸಮಾನ ಮನಸ್ಕರ ತಂಡ ಕಟ್ಟಿ ಕೊಂಡು ಸೋಂಕಿತರಿಗೆ ಆಕ್ಸಿಜನ್, ಆ್ಯಂಬುಲೆನ್ಸ್, ಔಷಧಿ ವ್ಯವಸ್ಥೆ ಮಾಡುತ್ತಿದ್ದರೆ, ಇನ್ನು ಕೆಲವರುಪ್ರತಿದಿನ ನಿರಾಶ್ರಿತರಿಗೆ, ಬಡವರಿಗೆ, ಕೋವಿಡ್ ವಾರಿಯರ್ಸ್ ಗೆ ಊಟ, ದಿನಸಿ ಕಿಟ್, ವ್ಯವಸ್ಥೆ ಹೀಗೆ ಹಲವು ರೀತಿ ನೆರವು ನೀಡುತ್ತಿದ್ದಾರೆ.
ಇದೀಗ, ಈ ಕಾರ್ಯಕ್ಕೆ ನಟ ಹ್ಯಾಟ್ರಿಕ್ ಹೀರೋ ಶಿವರಾಜ ಕುಮಾರ್ ಅಭಿಮಾನಿಗಳು ಕೂಡ ಸಾಥ್ ನೀಡಲು ಮುಂದಾಗಿದ್ದಾರೆ. ಹೌದು, ಮೊದಲಿಗೆ ಬೆಂಗಳೂರಿನ ನಾಗವಾರ ಪ್ರದೇಶದ ಸುತ್ತಮುತ್ತದಲ್ಲಿ ಕೋವಿಡ್ ಸಂಕಷ್ಟದಲ್ಲಿರುವ ಜನರಿಗೆ ನಟ ಶಿವರಾಜ್ ಕುಮಾರ್, ಗೀತಾ ಶಿವರಾಜಕುಮಾರ್‌ಹಾಗೂ
ಶಿವರಾಜ ಕುಮಾರ್ ಅಭಿಮಾನಿಗಳು ಸೇರಿಕೊಂಡು “ಆಸರೆ’ ಎಂಬ ಹೆಸರಿನಲ್ಲಿ ಸಹಾಯ ಮಾಡುತ್ತಿದ್ದಾರೆ. ನಾಗವಾರ ಸುತ್ತಮುತ್ತಲಿನಪ್ರದೇಶಗಳಲ್ಲಿ ಪ್ರತಿನಿತ್ಯ 500 ಜನರಿಗೆ ಊಟ, ತಿಂಡಿ, ಹಾಗೂ ಟೀ ವ್ಯವಸ್ಥೆಯನ್ನ ಮಾಡಲಾಗುತ್ತಿದೆ. ಈ ಕೆಲಸಕ್ಕಾಗಿ ವಿಶೇಷ ವಾಹನ ವ್ಯವಸ್ಥೆಯನ್ನು ಕೂಡ ಮಾಡಲಾಗಿದ್ದು, ಈ ವಾಹನದ ಮೂಲಕ ಅಗತ್ಯ ಆಹಾರವನ್ನು ಸರಬರಾಜು ಮಾಡಲಾಗುತ್ತಿದೆ. “ಆಸರೆ.. ಹಸಿದ ಹೊಟ್ಟೆಗೆಕೈ ತುತ್ತು’ ಎಂಬಹೆಸರಿನಲ್ಲಿ ನಡೆಯುತ್ತಿರುವ ಈ ಸಾಮಾಜಿಕ ಕಾರ್ಯವನ್ನುಇದೇ ತಿಂಗಳಕೊನೆಯವರೆಗೂ ನಡೆಸಲು ಯೋಜಿಸಲಾಗಿದೆ.
ಒಂದು ವೇಳೆ ಲಾಕ್‌ಡೌನ್ ಹೀಗೆ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಈ ಕಾರ್ಯವನ್ನು ಇನ್ನಷ್ಟು ದಿನ ವಿಸ್ತರಿಸಿ ಪ್ರತಿನಿತ್ಯ ಸುಮಾರು 1000 ಜನಕ್ಕೆ ಆಹಾರ ಒದಗಿಸಲು ಶಿವರಾಜ ಕುಮಾರ್ ದಂಪತಿಗಳು ಮತ್ತುಅಭಿಮಾನಿಗಳು ಯೋಜನೆ ರೂಪಿಸಿಕೊಂಡಿದ್ದಾರೆ ಎನ್ನಲಾಗಿದೆ.