Advertisement

Koppala: ಶಾಸಕರು ಸರ್ಕಾರದಿಂದ ಅಧಿಕೃತ ಪ್ರವಾಸ ಮಾಡುತ್ತಿಲ್ಲ: ತಂಗಡಗಿ

12:08 PM Nov 01, 2023 | Team Udayavani |

ಕೊಪ್ಪಳ: ದುಬೈಗೆ ಪ್ರವಾಸ ಮಾಡುವ ಕಾಂಗ್ರೆಸ್ ಶಾಸಕರು ಸರ್ಕಾರದಿಂದ ಅಧಿಕೃತ ಪ್ರವಾಸ ಮಾಡುತ್ತಿಲ್ಲ. ಅವರು ತಮ್ಮ ವಯಕ್ತಿಕ ನಿಮಿತ್ಯ ಪ್ರವಾಸ ಮಾಡುತ್ತಿರಬಹುದು ಎಂದು ಹಿಂದುಳಿದ ವರ್ಗಗಳ ಖಾತೆ ಸಚಿವ ಶಿವರಾಜ ತಂಗಡಗಿ ಅವರು ಹೇಳಿದರು.

Advertisement

ಕೊಪ್ಪಳದಲ್ಲಿ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಸುದ್ದಿಗಾರರ ಜೊತೆ ಮಾತನಾಡಿ, ಸರ್ಕಾರದಿಂದ ಅಧೀಕೃತ ಪ್ರವಾಸ ಮಾಡಲು ಸಿಎಂ ಸಿದ್ದರಾಮಯ್ಯ ಅವರು ಪ್ರವಾಸಕ್ಕೆ ಅನುಮತಿ ಕೊಟ್ಟಿಲ್ಲ. ಅವರು ವಯಕ್ತಿಕ ಪ್ರವಾಸ ಮಾಡುತ್ತಿರಬಹುದು. ನಾನು ಲಂಡನ್ ಗೆ ತೆರಳಬೇಕಿತ್ತು. ಆದರೆ ಕಾರ್ಯಕ್ರಮಗಳ ನಿಮಿತ್ಯ ಪ್ರವಾಸ ಮಾಡಲಾಗಿಲ್ಲ. ಅದಕ್ಕೂ ಸರ್ಕಾರಕ್ಕೂ ಸಂಬಂಧ ಇಲ್ಲ ಎಂದರು.

ಸಿಎಂ ಕುರ್ಚಿ ಸದ್ಯಕ್ಕೆ ಕಾಲಿ ಇಲ್ಲ. ಸರ್ಕಾರ ಅಸ್ಥಿರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ರಮೇಶ‌ ಜಾರಕಿಹೊಳೆ ಮಾತು ಲೆಕ್ಕಕ್ಕೆ ಇಲ್ಲ ಎಂದರು.

ಬರಕ್ಕೆ ಕೇಂದ್ರ ಸ್ಪಂದಿಸುತ್ತಿಲ್ಲ : ರಾಜ್ಯದಲ್ಲಿ ತೀವ್ರ ಬರ ಇದೆ. ನಾವು ನಿರಂತರ ಸಮಸ್ಯೆಗಳ ಬಗ್ಗೆ ಗಮನ ಹರಿಸಿದ್ದೇವೆ. ಬರ ಎಂದು ಸರ್ಕಾರ ಘೋಷಣೆ ಮಾಡಿದೆ. ಕೇಂದ್ರದ ಬರ ಅಧ್ಯಯನ ತಂಡ ಬಂದು ಅಧ್ಯಯನ ಮಾಡಿ ತೆರಳಿದೆ. ನಮ್ಮ ನಾಲ್ಕೈದು ಸಚಿವರು ಕೇಂದ್ರ ಸಚಿವರನ್ನು ಭೇಟಿ ಮಾಡಲು ತೆರಳಿದರೂ ಅವರಿಗೆ ಲಭ್ಯವಾಗುತ್ತಿಲ್ಲ. ಮೋದಿ ಸರ್ಕಾರ ರಾಜ್ಯದ ಬರದ ಬಗ್ಗೆ ಸ್ಪಂದನೆ ಮಾಡುತ್ತಿಲ್ಲ. ಸಿಎಂ ಅವರೇ ಮೋದಿ ಅವರಿಗೆ ಪತ್ರ ಬರೆದರೂ ಸ್ಪಂದನೆ ಮಾಡಿಲ್ಲ. ಬರದ ಬಗ್ಗೆ ಮಾತನಾಡುವ ಬದಲು ಅವರು ಬೇರೆ ಕಡೆ ಹೋಗುತ್ತಿದ್ದಾರೆ. ಕರ್ನಾಟಕ ಭಾರತದಲ್ಲೇ ಇದೆ. ಕರ್ನಾಟಕ ಭಾರತ ಬಿಟ್ಟು ಬೇರೆ ಎಲ್ಲೂ ಇಲ್ಲ. ನಿಯಮ ಮಾಡೋದು ಭಾರತ ಸರ್ಕಾರ. ಬರ ಪರಿಹಾರವನ್ನು ಕೇಂದ್ರ ಸರ್ಕಾರ NDRF ನಿಯಮಗಳಡಿ ಕೊಡಬೇಕು. ಈ ವರೆಗೂ ಪರಿಹಾರ ಕೊಟ್ಟಿಲ್ಲ. ಮೋದಿ ಸರ್ಕಾರವನ್ನ ಮಾಧ್ಯಮಗಳು ಪ್ರಶ್ನೆ ಮಾಡಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯವೂ ನಾಲ್ಕನೇ ಸ್ತಂಬ. ಮೋದಿ ಸರ್ಕಾರಕ್ಕೆ ಬರದ ಬಗ್ಗೆ ಕೇಳಲಿ. ಮೋದಿ ಸರ್ಕಾರ ಇದಕ್ಕೆ ಸ್ಪಂದಿಸಲಿ ಎಂದರು.

ಕರ್ನಾಟಕಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವರ್ಷವಿಡಿ ರಾಜ್ಯದ ತುಂಬ ಕಾರ್ಯಕ್ರಮ ಹಮ್ಮಿಕೊಂಡು ಕನ್ನಡದ ಕಂಪು ಮೂಡಿಸಲಿದ್ದೇವೆ. ಪ್ರತಿ ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆಸಲಿದ್ದೇವೆ. ನ.02 ರಂದು ಸಿಎಂ ಸಿದ್ದರಾಮಯ್ಯ ಅವರು ಹಂಪಿಯ ವಿರುಪಾಕ್ಷೇಶ್ವರನ ಸನ್ನಿಧಿಯಲ್ಲಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಆ ರಥ ಎಲ್ಲೆಡೆಯೂ ಸಾಗಿ ಬರಲಿದೆ ಎಂದರು.

Advertisement

ಇದನ್ನೂ ಓದಿ: Tyler Christopher: ಹೃದಯಸ್ತಂಭನದಿಂದ ಖ್ಯಾತ ನಟ ಟೈಲರ್ ಕ್ರಿಸ್ಟೋಫರ್ ನಿಧನ

Advertisement

Udayavani is now on Telegram. Click here to join our channel and stay updated with the latest news.

Next