Advertisement

ಬಿಜೆಪಿ ವಿರುದ್ಧ ಮುಗಿಬಿದ್ಧ ಕಾಂಗ್ರೆಸ್‌

04:33 PM Feb 14, 2021 | Team Udayavani |

ಗಂಗಾವತಿ: ಕೃಷಿ ಕಾಯ್ದೆ ತಿದ್ದುಪಡಿ, ಎಪಿಎಂಸಿ ಖಾಸಗೀಕರಣ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಸೇರಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ  ನೀತಿ ಖಂಡಿಸಿ ನಗರ ಮತ್ತು ಗ್ರಾಮೀಣ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರ್‌ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ್‌ ತಂಗಡಗಿ ಮಾತನಾಡಿ, ಸ್ವಾತಂತ್ರÂ ಬಂದ  ದೇಶವನ್ನು ಮುನ್ನಡೆಸಿದ ಕಾಂಗ್ರೆಸ್‌ ಪಕ್ಷ ಸ್ವಾವಲಂಬಿ ಭಾರತವನ್ನು ನಿರ್ಮಿಸಿದೆ. ಜನಸಾಮಾನ್ಯರ ಭಾರತ ಸೃಷ್ಟಿಸಿದೆ. ದೇಶದಲ್ಲಿ ರೈಲ್ವೇ, ವಿಮಾನ, ಬೃಹತ್‌ ಕೈಗಾರಿಕೆ, ವಿಶ್ವವಿದ್ಯಾಲಯ, ವೈದ್ಯಕೀಯ ಸಂಶೋಧನೆ, ಬಾಹ್ಯಾಕಾಶ ಸಂಶೋಧನೆ, ಕೃಷಿ ಅಭಿವೃದ್ಧಿ, ಡ್ಯಾಂಗಳ, ಬಂದರು ನಿರ್ಮಾಣ ಹೀಗೆ ವಿಶ್ವದಲ್ಲಿ ಭಾರತ ತಲೆ ಎತ್ತುವಂತೆ ಕಾಂಗ್ರೆಸ್‌ ಪಕ್ಷ ಆಡಳಿತ ನೀಡಿದೆ. ಆದರೆ ಎಂದೂ ಜಾತಿ, ಧರ್ಮ, ದೇವರ ಹೆಸರಿನಲ್ಲಿ ಕಾಂಗ್ರೆಸ್‌ ಆಡಳಿತ ನಡೆಸಿಲ್ಲ. ಆದರೆ 2014ರಿಂದ ಆಡಳಿತ ನಡೆಸಿದ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶದ ಮಾನ ಕಳೆದಿದೆ.

ದೇಶದ ಬೆನ್ನೆಲುಬಾಗಿದ್ದ ಕೃಷಿಕರು, ಕೈಗಾರಿಕೆಗಳ ಕಾರ್ಮಿಕರನ್ನು ಶೋಷಣೆ ಮಾಡಿ ಕೆಲ ಬಂಡವಾಳ ಶಾಹಿಗಳ ಜತೆ ಸೇರಿ ದೇಶವನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಲಾಭದಾಯಕವಾಗಿರುವ ರೈಲ್ವೆ, ವಿಮಾನಯಾನ, ಪೆಟ್ರೋಲಿಯಂ ಕಂಪನಿಗಳು, ಎಲ್‌ಐಸಿ, ಬಿಎಸ್‌ ಎನ್‌ಎಲ್‌, ವಿಶಾಖಪಟ್ಟಣ ಉಕ್ಕು ಕಾರ್ಖಾನೆ ಸೇರಿ ಪ್ರಮುಖ ಸಾರ್ವಜನಿಕ ವಲಯಗಳನ್ನು ಕೆಲ ಕಾರ್ಪೊರೇಟ್‌ ಕಂಪನಿಗಳಿಗೆ ಮಾರಾಟ ಮಾಡಲಾಗಿದೆ ಎಂದು ಹೇಳಿದರು.

ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡಿನಲ್ಲಿ ಜನರಿಗೆ ಉಪಯುಕ್ತ ಯೋಜನೆಗಳ ಕುರಿತು ಮಾತನಾಡದೇ ದೇವರ ಹೆಸರಿನಲ್ಲಿ ಜನರನ್ನು ರೊಚ್ಚಿಗೆಬ್ಬಿಸಿ ಮತ ಪಡೆಯುವ ಷಡ್ಯಂತ್ರ ಮಾಡಲಾಗುತ್ತದೆ. ಹಲವು ತಿಂಗಳಿಂದ ಕರಾಳ ಕೃಷಿ ಕಾಯ್ದೆ, ಭೂಸುಧಾರಣಾ ಕಾಯ್ದೆ, ಎಪಿಎಂಸಿ ಖಾಸಗೀಕರಣ ವಿರುದ್ಧ ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರನ್ನು ದೇಶದ್ರೋಹಿಗಳು ಎಂದು ಬಿಜೆಪಿಯವರು ಜರಿಯುತ್ತಿದ್ದಾರೆ. ಹೋರಾಟವನ್ನು ಹತ್ತಿಕ್ಕಲು ಗುಂಡಾವರ್ತನೆ ನಡೆಸಲಾಗುತ್ತಿದೆ. ಇವರಿಗೆ ಮುಂದಿನ ಚುನಾವಣೆಯಲ್ಲಿ ಜನತೆ ಸೂಕ್ತ ಉತ್ತರ ಕೊಡಲು ಕಾಯುತ್ತಿದ್ದಾರೆ ಎಂದರು.

ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ, ಲಲಿತಾರಾಣಿ, ಶಾಮೀದ್‌ ಮನಿಯಾರ್‌, ಸರ್ವೇಶ್‌ ಮಾಂತಗೊಂಡ, ರೆಡ್ಡಿ ಶ್ರೀನಿವಾಸ, ಮಹಮ್ಮದ್‌ ರμ, ಕೆ. ಅಂಬಣ್ಣ ನಾಯಕ, ಅಮರೇಶ ಗೋನಾಳ, ಫಕೀರಪ್ಪ ಎಮ್ಮಿ, ಬಸವರಾಜ ಮಳಿಮಠ, ರಾಜು ನಾಯಕ್‌, ಡ್ಯಾಗಿ ರುದ್ರೇಶ, ನೀಲಕಂಠಪ್ಪ, ವಿಶ್ವನಾಥ ಕೇಸರಟ್ಟಿ, ರಜೀಯಾಬೇಗಂ,ಅರ್ಜುನ ನಾಯಕ್‌, ಸೋಮನಾಥ ಬಂಡಾರಿ, ಗದ್ವಾಲ್‌ ಕಾಸೀಂಸಾಬ್‌, ರಾಚಪ್ಪ ಗುಂಜಳ್ಳಿ, ಆಶೋಕ ಜುಲೈನಗರ ಸೇರಿ ಅನೇಕರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next