ಹೆಬ್ರಿ : ಹಲವಾರು ಕಾರಣಿಕದ ಮೂಲಕ ಪ್ರಸಿದ್ಧಿ ಪಡೆದ ಶಿವಪುರ ಕೊರಗಜ್ಜನ ಕ್ಷೇತ್ರದಲ್ಲಿ ಈಗಾಗಲೇ ಕಳೆದ ತಿಂಗಳಲ್ಲಿ ಸನ್ನಿಧಾನದ ಸಮೀಪ ನೆಲದಲ್ಲಿ ಮೂಡಿಬರುತ್ತಿರುವ ನಾಗರ ಹಾವಿನ ಚಿತ್ರ ಅಚ್ಚರಿ ಮೂಡಿಸುತ್ತಿರುವ ಬೆನ್ನಲ್ಲೆ ಮೇ 29ರ ಮಧ್ಯಾಹ್ನ ಪೂಜೆ ಸಮಯ ನಿಜ ನಾಗರ ಹಾವು ಪ್ರತ್ಯಕ್ಷವಾದ ಘಟನೆ ನಡೆದಿದೆ.
ತೆಂಗಿನ ಮರದ ಸಮೀಪ ನಾಗರ ಹಾವಿನ ಚಿತ್ರ ಕಂಡು ಬಂದ ಜಾಗದಲ್ಲಿ ನಾಗರಹಾವು ಪ್ರತ್ಯಕ್ಷವಾಗಿ ಬಳಿಕ ದೈವಸ್ಥಾನ ಮೇಲ್ಛಾವಣಿ ಮೇಲೆ, ತೆಂಗಿನ ಮರದ ಮೇಲೆ ಸುತ್ತಾಡ ತೊಡಗಿದ್ದು ಭಕ್ತರಲ್ಲಿ ಅಚ್ಚರಿ ಮೂಡಿಸಿದೆ. ಈ ಹಿಂದೆ ಕಂಡು ಬಂದ ಚಿತ್ರ ಕೂಡ ಕೃಷ್ಣ ಸರ್ಪ ವಾಗಿದ್ದು ಇದೀಗ ಪ್ರತ್ಯಕ್ಷವಾದ ನಾಗರ ಹಾವು ಕೂಡ ಕೃಷ್ಣ ಸರ್ಪವೇ ಆಗಿದೆ .
ಕ್ಷೇತ್ರದ ಸನ್ನಿಧಾನದಲ್ಲಿ ಮೂಡಿಬಂದ ನಾಗರಹಾವಿನ ಚಿತ್ರದ ಬಗ್ಗೆ ಸಂದೇಹವನ್ನು ಬಗೆಹರಿಸಲು ನಿಜ ನಾಗರ ಹಾವು ಪ್ರತ್ಯಕ್ಷವಾಗಿ ಕೊರಗಜ್ಜನ ಪ್ರೇರಣೆಯಂತೆ ಕ್ಷೇತ್ರದಲ್ಲಿ ನಾಗ ರಕ್ತೇಶ್ವರಿಯ ಶಕ್ತಿ ಇರುವುದಾಗಿ ತೋರಿ ಬಂದಿದೆ ಎಂದು ಕ್ಷೇತ್ರದ ಧಮ೯ ದಶಿ೯ ಪುನೀತ್ ತಿಳಿಸಿದ್ದಾರೆ.
ಇದನ್ನೂ ಓದಿ : ಕಸಗುಡಿಸಿ ರಂಗೋಲಿ ಬಿಡಿಸಿದ ಪುರಸಭೆ ಅಧಿಕಾರಿಗಳು