ಮಣಿಪಾಲ : ಶಿವಪಾಡಿ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ನಡೆಯುವ ಅತಿ ರುದ್ರ ಮಹಾಯಾಗದಲ್ಲಿ ಗುರುವಾರ ವೈಭವದ ಶಿವಾರತಿ ನಡೆಯಿತು.
ವಾರಣಾಸಿಯ ಮೋಹಿತ್ ಪಂಡಿತ್ ಅವರ ತಂಡದಿಂದ ಸುಮಾರು 45 ನಿಮಿಷಗಳ ಕಾಲ ಶಿವಾರತಿ ವಿಶೇಷ ಶಿವಸ್ತೋತ್ರದ ಜತೆಗೆ ಮೂಡಿಬಂತು.
ತಂಡದಲ್ಲಿ 8 ಮಂದಿಯಿದ್ದು ಐವರು ಶಿವಾರತಿ ಬೆಳಗಿದರೆ ಇಬ್ಬರು ಡಮರುಗ ಬಾರಿಸಿದರು.
ಆರಂಭದಲ್ಲಿ ಅಗರಬತ್ತಿಯ ಆರತಿ ದೂಪ ಆರತಿ ಅನಂತರ ದೀಪಾರತಿ, ಪುನರ್ ದೀಪಾರತಿ ಅಂತಿಮವಾಗಿ ಪುಷ್ಪಾರಾತಿ ಹೀಗೆ ಶ್ರೀರುದ್ರ ದೇವರಿಗೆ ವಿಶೇಷವಾಗಿ ಶಿವಾರತಿ ಸಂಪನ್ನಗೊಂಡಿತು .
ಪ್ರಧಾನ ಅರ್ಚಕರಾದ ವಿನಾಯಕ ಉಡುಪ ಶಿವಾರತಿಗೆ ದೀಪ ಬೆಳಗಿಸಿ ಚಾಲನೆ ನೀಡಿದರು. ಈ ವೇಳೆ ಯಾಗ ಸಮಿತಿ ಅಧ್ಯಕ್ಷಶಾಸಕ ರಘುಪತಿ ಭಟ್, ದೇವಸ್ಥಾನ ಅಭಿವೃದ್ಧಿ ಟ್ರಸ್ಟಿನ ಅಧ್ಯಕ್ಷ ಮಹೇಶ್ ಠಾಕೂರ್ ಉಪಸ್ಥಿತರಿದ್ದರು.
Related Articles
ಮಾ. 3 ಮತ್ತು 4ರಂದು ಮತ್ತೆ ಶಿವಾರತಿ ನಡೆಯಲಿದೆ.
ಧಾರ್ಮಿಕ ಸಭೆ
.ಶಿವಾರತಿಯ ಬಳಿಕ ಧಾರ್ಮಿಕ ಸಭೆ ಯನ್ನು ಮಾಹಾರಾಷ್ಟ್ರದ ಡೈನಮಿಕ್ ಇಂಡಿಯಾ ಸಂಸ್ಥೆಯ ಗೋಪಾಲ್ ಚಕಿ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ| ಕೂಡ್ಲು ಮಾತನಾಡಿ ಕೃಷ್ಣಪ್ರಸಾದ್ ಮಹೇಶ್ ಠಾಕೂರ್ ಕಾರ್ಯಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ರಘುಪತಿ ಭಟ್, ಮಾಹೆಯ ಆಡಳಿತ ನಿರ್ದೇಶಕ ಮಹೇಶ್ ಪ್ರಭು, ಉದ್ಯಮಿ ಕಾರ್ತಿಕ್ ನಾಯಕ್, ಜೋಗಿ ಸಮಾಜದ ಅಧ್ಯಕ್ಷ ಪಿ. ಸುರೇಶ್ ಕುಮಾರ್ ಮುದ್ರಾಡಿ, ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶ ಕೊಡವೂರು, ಸದಸ್ಯರಾದ ಅರುಣ್ ಎಸ್. ಪೂಜಾರಿ, ಸಂತೋಷ್ ಜತ್ತನ್ನ ಗಿರಿಧರ ಆಚಾರ್ಯ, ದೇವಸ್ಥಾನದ ಟ್ರಸ್ಟಿಗಳಾದ ಶುಭಕರ ಸಾಮಂತ್, ದಿನೇಶ್ ಶ್ರೀಧ ಸಾಮಂತ್, ಸಮಿತಿಯ ಕೋಶಾಧಿಕಾರಿ ಸತೀಶ್ ಪಾಟೀಲ್ ಉಪಸ್ಥಿತರಿದ್ದರು.
ಮಹೇಶ್ ಠಾಕೂರ್ ಸ್ವಾಗತಿಸಿ, ದೀಪಿಕಾ ಪಾಟೀಲ್ ವಂದಿಸಿ, ಜ್ಯೋತಿ ಸಾಮಂತ್ ನಿರೂಪಿಸಿದರು.