Advertisement

Sandalwood; ತೋತಾಪುರಿ-2ಗೆ ಶಿವಣ್ಣನ ಸಾಥ್; ಸೆ.18ಕ್ಕೆ ಟ್ರೇಲರ್ ಬಿಡುಗಡೆ

03:04 PM Sep 17, 2023 | Team Udayavani |

ಜಗ್ಗೇಶ್‌- ಧನಂಜಯ್‌ ಮುಖ್ಯಭೂಮಿಕೆಯಲ್ಲಿರುವ “ತೋತಾಪುರಿ -2′ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗುತ್ತಿದೆ. ಸೆ.18ರಂದು ಬೆಳಗ್ಗೆ 9.19 ನಿಮಿಷಕ್ಕೆ ಚಿತ್ರದ ಟ್ರೇಲರ್‌ ಅನ್ನು ನಟ ಶಿವರಾಜ್‌ಕುಮಾರ್‌ ಬಿಡುಗಡೆ ಮಾಡಲಿದ್ದಾರೆ.

Advertisement

ನಟ ಡಾಲಿ ಧನಂಜಯ್‌ ಈ ಚಿತ್ರದಲ್ಲಿ ಜಗ್ಗೇಶ್‌ ಅವರ ಜೊತೆ ಇಡೀ ಸಿನಿಮಾದುದ್ದಕ್ಕೂ ಸಾಗಿಬಂದಿದ್ದಾರೆ. ಧನಂಜಯ್‌ ಹಾಗೂ ಜಗ್ಗೇಶ್‌ ಅವರ ಕ್ಯಾರೆಕ್ಟರ್‌ ಲುಕ್‌ ಗುರುಪೂರ್ಣಿಮೆಯ ದಿನ ಬಿಡುಗಡೆಯಾಗಿತ್ತು. ಮೊದಲ ಭಾಗದಲ್ಲಿ ನವರಸ ನಾಯಕ ಜಗ್ಗೇಶ್‌, ಅದಿತಿ ಪ್ರಭುದೇವ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಸದ್ಯದÇÉೇ ಚಿತ್ರತಂಡ ಸಿನಿಮಾದ ರಿಲೀಸ್‌ ಡೇಟ್‌ ಕೂಡ ಅನೌನ್ಸ್‌ ಮಾಡಲಿದ್ದು, ಚಿತ್ರಕ್ಕೆ ನಿರಂಜನ ಬಾಬು ಅವರ ಛಾಯಾಗ್ರಹಣ, ಅರುಣ್‌ ಆಂಡ್ರ್ಯೂ ಅವರ ಸಂಗೀತ ಸಂಯೋಜನೆಯಿದೆ.

“ನಮ್ಮ ನಿರೀಕ್ಷೆಯಂತೆಯೇ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಪ್ರೇಕ್ಷಕರಿಗೆ ಇಷ್ಟವಾಗುವ ಮನರಂಜನಾತ್ಮಕ ಕಂಟೆಂಟ್‌ ಚಿತ್ರದಲ್ಲಿದೆ. ಥೇಟರಿಗೆ ಬರುವ ಪ್ರೇಕ್ಷಕರಿಗೆ ಉತ್ತಮ ಮನರಂಜನೆಯ ಜೊತೆ ಪರಿಶುದ್ಧ ಹಾಸ್ಯದ ಹೂರಣವೂ ಇರುತ್ತದೆ’ ಎಂದು ನಿರ್ಮಾಪಕ ಕೆ.ಎ.ಸುರೇಶ್‌ ಹೇಳಿದ್ದಾರೆ.

ಉಳಿದಂತೆ ಚಿತ್ರದಲ್ಲಿ ದತ್ತಣ್ಣ, ಸುಮನ ರಂಗನಾಥ್‌, ವೀಣಾ ಸುಂದರ್‌, ಹೇಮಾದತ್‌ ಹೀಗೆ ಮೊದಲ ಭಾಗದಲ್ಲಿದ್ದ ಬಹುತೇಕ ಪಾತ್ರಗಳು ಮುಂದುವರಿದಿವೆ.

Advertisement

Udayavani is now on Telegram. Click here to join our channel and stay updated with the latest news.

Next