Advertisement

Multiplex Issue; ಎಚ್ಚೆತ್ತುಕೊಂಡ್ರೆ ಸರಿ, ಇಲ್ಲಾಂದ್ರೆ ಬೇರೆ ರೀತಿಯೇ ಆಗುತ್ತೆ!: ಶಿವಣ್ಣ

01:05 PM Oct 27, 2023 | Team Udayavani |

ಇತ್ತೀಚೆಗೆ ನಟ ಶಿವರಾಜ್‌ಕುಮಾರ್‌ ಅವರ “ಘೋಸ್ಟ್‌’ ಹಾಗೂ “ಲಿಯೋ’ ಒಂದೇ ದಿನ ತೆರೆಕಂಡವು. ಆದರೆ, ತಮಿಳು ಚಿತ್ರವಾದ “ಲಿಯೋ’ಗೆ ಕರ್ನಾಟಕದಲ್ಲಿ ಅತಿ ಹೆಚ್ಚು ಚಿತ್ರಮಂದಿರ, ಶೋಗಳನ್ನು ನೀಡಿ, ಕರ್ನಾಟಕದ ಸ್ಟಾರ್‌ ನಟರಾದ ಶಿವರಾಜ್‌ಕುಮಾರ್‌ “ಘೋಸ್ಟ್‌’ಗೆ ಕಡಿಮೆ ಶೋ ನೀಡಲಾಯಿತು. ಅದರಲ್ಲೂ ಕೆಲವು ಮಲ್ಟಿಪ್ಲೆಕ್ಸ್‌ಗಳಂತೂ “ಘೋಸ್ಟ್‌’ಗೆ ಮಾರ್ನಿಂಗ್‌ ಶೋ ಕೊಡಲೇ ಇಲ್ಲ. ಕನ್ನಡದ ಒಬ್ಬ ಸ್ಟಾರ್‌ ನಟನ ಸಿನಿಮಾಕ್ಕೆ ಇಂತಹ ಪರಿಸ್ಥಿತಿಯಾದರೆ ಹೊಸಬರ ಸಿನಿಮಾದ ಗತಿಯೇನು? ಎಂಬ ಪ್ರಶ್ನೆ ಸಹಜ.

Advertisement

ಈ ವಿಚಾರದ ಬಗ್ಗೆ ಶಿವಣ್ಣ ಖಡಕ್‌ ಆಗಿಯೇ ಮಾತನಾಡಿದ್ದಾರೆ. “ಇದು ಸಕ್ಸಸ್‌ಮೀಟ್‌. ಆ ವಿಚಾರದ ಬಗ್ಗೆ ನಾನು ಈಗ ಮಾತನಾಡಲ್ಲ. ಮಾತನಾಡೋ ಟೈಮ್‌ ಬಂದಾಗ ಮಾತಾಡ್ತೀನಿ. ಈಗಾಗಲೇ ಒಂದ್ಸರಿ ಮಾತನಾಡಿದ್ದೇನೆ. ಅದು ಎಲ್ಲರ ತಲೆಗೆ ಹೋಗಿರುತ್ತೆ ಅಂದ್ಕೋತ್ತೀನಿ. ಇನ್ನು ಹುಷಾರಾಗಿರುತ್ತಾರೆ ಅಂತ ನಂಬಿದ್ದೇನೆ. ಇಲ್ಲಾಂದ್ರೆ ಮುಂದೆ ಬೇರೆ ರೀತಿಯೇ ಆಗುತ್ತೆ. ಈ ಬಾರಿ ಸುಮ್ಮನೆ ಇರಬಾರದು. ನಾವು ನಾವು ನ್ಯಾಯ ಕೇಳುತ್ತಿದ್ದೇವೆ. ನಮಗೆ ಜಾಸ್ತಿ ಕೊಡಿ ಅವರಿಗೆ ಕಡಿಮೆ ಕೊಡಿ ಅಂತ ಕೇಳ್ತಾ ಇಲ್ಲ. ಎಲ್ಲರಿಗೂ ಸಮಾನವಾಗಿ ಕೊಡಿ. ಎಲ್ಲಾ ಭಾಷೆಗಳಿಗೂ ಕೊಡಿ. ಆದರೆ ಕನ್ನಡಕ್ಕೆ ಮೊದಲ ಆದ್ಯತೆ ಕೊಡಿ ಎಂದು ಕೇಳುತ್ತಿದ್ದೇವೆ’ ಎಂದು ಖಡಕ್‌ ಆಗಿ ಹೇಳಿದ್ದಾರೆ.

ಇನ್ನು ಪರಭಾಷಾ ಚಿತ್ರಗಳು ಕರ್ನಾಟಕದಲ್ಲಿ ಟಿಕೆಟ್‌ ದರ ಹೆಚ್ಚಿಸುವ ಕುರಿತು ಪ್ರತಿಕ್ರಿಯಿಸಿದ ಶಿವಣ್ಣ, “ಟಿಕೆಟ್‌ ವಿಚಾರದಲ್ಲೂ ಅಷ್ಟೇ ಮಂಡಳಿ, ವಿತರಕರು, ಸರ್ಕಾರ ಕುಳಿತು ಮಾತನಾಡಿದರೆ ಇದು ಬಗೆಹರಿಯುತ್ತೆ. ಟಿಕೆಟ್‌ ವಿಚಾರದಲ್ಲಿ ಭೇದಭಾವ ಇರಬಾರದು’ ಎಂದಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next