ಬೆಂಗಳೂರು: ಪುನೀತ್ ರಾಜ್‌ಕುಮಾರ್ ಅವರ ಡ್ರೀಮ್ ಪ್ರಾಜೆಕ್ಟ್ ‘ಗಂಧದಗುಡಿ’ ಟೀಸರ್ ಬಿಡುಗಡೆಗೆ ನಟ ಶಿವರಾಜ್ ಕುಮಾರ್ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಆಹ್ವಾನ ನೀಡಿದರು.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ನಿವಾಸಕ್ಕೆ ಶಿವರಾಜ್ ಕುಮಾರ್ ಆಗಮಿಸಿದರು. ಡಿಸೆಂಬರ್ 6 ರಂದು ಟೀಸರ್ ಬಿಡುಗಡೆಯಾಗಲಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನವೆಂಬರ್ 1 ರಂದು ಗಂಧದಗುಡಿ ಟೀಸರ್ ಬಿಡುಗಡೆಯಾಗಬೇಕಿತ್ತು. ಇದೇ ವಿಚಾರವಾಗಿ ಸಿಎಂ ಭೇಟಿಗೆ ಪುನೀತ್ ರಾಜ್‌ಕುಮಾರ್ ಸಮಯ ಕೇಳಿದ್ದರು. ಆದರೆ ಪುನೀತ್ ರಾಜ್ ಕುಮಾರ್ ಹಠಾತ್ ನಿಧನದಿಂದ ಎಲ್ಲವೂ ಬುಡಮೇಲಾಗಿತ್ತು.
ಇದನ್ನೂ ಓದಿ:ಡಿ.6ಕ್ಕೆ ಪುನೀತ್ ರಾಜ್ ಕುಮಾರ್ ಡ್ರೀಮ್ ಪ್ರಾಜೆಕ್ಟ್ ಟೀಸರ್ ಬಿಡುಗಡೆ
ಇದೀಗ ಡಿಸೆಂಬರ್ 6 ರಂದು ಗಂಧದಗುಡಿ ಟೀಸರ್ ಬಿಡುಗಡೆ ಮಾಡಲು ಪಿಆರ್ ಕೆ ಪ್ರೊಡಕ್ಷನ್ ಸಿದ್ದವಾಗಿದೆ. ಶುಕ್ರವಾರ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಬಿಡುಗಡೆ ದಿನಾಂಕ ಘೋಷಿಸಿದ್ದರು.
ಈ ಹಿನ್ನೆಲೆಯಲ್ಲಿ ನಟ ಶಿವರಾಜ್ ಕುಮಾರ್ ಸಿಎಂ ಭೇಟಿ ಮಾಡಿ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.