Advertisement

ಶಿವಣ್ಣ ಮಹಾನ್‌ ಶಿಕ್ಷಣ ಶಿಲ್ಪಿ: ಸಿದ್ಧಲಿಂಗ ಶ್ರೀ

04:50 PM Aug 22, 2022 | Team Udayavani |

ದಾವಣಗೆರೆ: ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮೂಲಕ ಜ್ಞಾನದ ದೀಪ ಹಚ್ಚಿರುವಂತಹ ಎಂ.ಎಸ್‌. ಶಿವಣ್ಣ ಅವರು ಮಹಾನ್‌ ಶಿಕ್ಷಣ ಶಿಲ್ಪಿ ಎಂದು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಬಣ್ಣಿಸಿದರು.

Advertisement

ಭಾನುವಾರ ತಾಲೂಕಿನ ಆನಗೋಡು ಗ್ರಾಮದಲ್ಲಿ ಸಿದ್ಧಗಂಗಾ ವಿದ್ಯಾಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಣ ಶಿಲ್ಪಿ ಎಂ.ಎಸ್‌. ಶಿವಣ್ಣ ಅವರ ಪುಣ್ಯ ಸ್ಮರಣೋತ್ಸವ ಮತ್ತು ಶಿಲಾ ಮಂಟಪ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಶಿವಣ್ಣನವರು ಬರಿಗೈಯಲ್ಲೇ ದಾವಣಗೆರೆಗೆ ಬಂದು ಅನೇಕ ಸಮಸ್ಯೆಗಳ ನಡುವೆಯೂ ಶಿಕ್ಷಣ ಸಂಸ್ಥೆ ಪ್ರಾರಂಭಿಸಿ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಾಮ್ರಾಜ್ಯವನ್ನೇ ನಿರ್ಮಾಣ ಮಾಡಿದ್ದಾರೆ ಎಂದರು.

ಅನ್ನ, ಅಕ್ಷರ, ತ್ರಿವಿಧ ದಾಸೋಹಕ್ಕೆ ಹೆಸರಾಗಿರುವ ಸಿದ್ಧಗಂಗೆಯ ಹೆಸರನ್ನು ಶಿವಣ್ಣನವರು ತಮ್ಮ ಬದ್ಧತೆ, ಕತೃìತ್ವ ಶಕ್ತಿಯಿಂದ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಶಾಶ್ವತ ಹಾಗೂ ಅಜರಾಮರವಾಗಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಸಿದ್ಧಗಂಗಾ ವಿದ್ಯಾಸಂಸ್ಥೆಯ ಮೂಲಕ ಹೊತ್ತಿಸಿರುವ ಜ್ಞಾನದ ದೀಪ ಎಂದಿಗೂ ಆರುವುದೇ ಇಲ್ಲ. ನಿರಂತರವಾಗಿ ಸಮಾಜ ಮತ್ತು ಜನಸಾಮಾನ್ಯರಿಗೆ ಬೆಳಕು ನೀಡುತ್ತಲೇ ಇರುತ್ತದೆ ಎಂದು ತಿಳಿಸಿದರು.

ಶಿಕ್ಷಣದ ಮೂಲಕ ಕ್ರಾಂತಿಯನ್ನೇ ಉಂಟು ಮಾಡಿದ ಮಹತ್ತರ ಕಾರ್ಯ ಮಾಡಿದ ಶಿವಣ್ಣ ಅವರಿಗೆ ಹಿರಿಯ ಗುರುಗಳಾದ ನಡೆದಾಡುವ ದೇವರು ಡಾ| ಶಿವಕುಮಾರ ಸ್ವಾಮೀಜಿಯವರು ಶಕ್ತಿಯಾಗಿ ನಿಂತರು. ಶಿವಣ್ಣ ಅವರು ಒಬ್ಬ ಸಾಮಾನ್ಯ ಮಹಿಳೆಗೆ ನ್ಯಾಯ ಒದಗಿಸುವುದಕ್ಕಾಗಿ 18 ದಿನಗಳ ಕಾಲ ನಿರಂತರ ಉಪವಾಸ ಮಾಡಿದಂತಹ ನಿದರ್ಶನವಿದ್ದು, ಈಗಿನ ಕಾಲದಲ್ಲಿ ಕಾಣಲು ಸಿಗುವುದಿಲ್ಲ. ಸಮಾರಂಭದಲ್ಲಿ ಬಿಡುಗಡೆ ಮಾಡಿರುವ “ಶೂನ್ಯದಿಂದ ಶಿಖರಕ್ಕೆ’ ಮತ್ತು
“ಅಜರಾಮರ’ ಎಂಬ ಕೃತಿಗಳು ಶೀರ್ಷಿಕೆಗಳು ಶಿವಣ್ಣ ಅವರ ವ್ಯಕ್ತಿತ್ವ ಮತ್ತು ಸಾಧನೆಗೆ ಅನ್ವರ್ಥವಾಗುವಂತಿವೆ ಎಂದು ಬಣ್ಣಿಸಿದರು.

ಸಂಸ್ಥೆ ಕಾರ್ಯದರ್ಶಿ ಡಾ| ಡಿ.ಎಸ್‌. ಜಯಂತ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣ ಸಂಸ್ಥೆ ಸ್ಥಾಪಿಸಿದ ಆರಂಭದ ದಿನಗಳಲ್ಲಿ ಎದುರಾದ ಸಮಸ್ಯೆಗಳು, ಅವುಗಳನ್ನು ಶಿವಣ್ಣ ಎದುರಿಸಿದ ರೀತಿ ಕುರಿತು ವಿವರಿಸಿದರು. ಶಾಸಕ ಎಸ್‌.ಎ. ರವೀಂದ್ರನಾಥ್‌ ಅವರು ಸಾಹಿತಿ ಡಿ.ಸಿ. ಚಂಪಾ ಬರೆದಿರುವ ಶಿವಣ್ಣ ಅವರ ಜೀವನ ಸಾಧನೆ ಕುರಿತ “ಶೂನ್ಯದಿಂದ ಶಿಖರಕ್ಕೆ’ ಕಾದಂಬರಿ, ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು ಸಿದ್ಧಗಂಗಾ ಸಂಸ್ಥೆ ಮುಖ್ಯಸ್ಥೆ ಜಸ್ಟಿನ್‌ ಡಿ’ಸೌಜ ಸಂಪಾದಿಸಿರುವ “ಅಜರಾಮರ’ ಕೃತಿ ಬಿಡುಗಡೆ ಮಾಡಿದರು. ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ| ಬಿ.ಡಿ. ಕುಂಬಾರ ಅಧ್ಯಕ್ಷತೆ ವಹಿಸಿದ್ದರು.

Advertisement

ಬೇಬಿ ಮಠದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಮಾಗಡಿ ರುದ್ರಮುನೇಶ್ವರ ಮಠದ ಡಾ| ಶ್ರೀ ಚಂದ್ರಶೇಖರ ಸ್ವಾಮೀಜಿ, ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಹೆಬ್ಟಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ, ಸಿದ್ಧಗಂಗಾ ಸಂಸ್ಥೆ ಮುಖ್ಯಸ್ಥೆ ಜಸ್ಟಿನ್‌ ಡಿ’ಸೌಜ, ಮೇಯರ್‌ ಜಯಮ್ಮ ಗೋಪಿ ನಾಯ್ಕ, ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್‌. ಶಿವಯೋಗಿಸ್ವಾಮಿ, ಮಾಜಿ ಶಾಸಕ ಎಚ್‌. ಎಸ್‌. ಶಿವಶಂಕರ್‌, ದೂಡಾ ಅಧ್ಯಕ್ಷ ಕೆ.ಎಂ. ಸುರೇಶ್‌, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಆನಗೋಡು ನಂಜುಂಡಪ್ಪ, ಎಂ.ಎಸ್‌. ಶಿವಣ್ಣ ಕುಟುಂಬದ ಎಲ್ಲ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾಲೇಜಿನ ನಿಕಟಪೂರ್ವ ಪ್ರಾಚಾರ್ಯ ಡಾ| ಎಸ್‌. ಪ್ರಸಾದ್‌ ಬಂಗೇರಾ ಅವರಿಗೆ ಪ್ರಥಮ ವರ್ಷದ “ಶಿಕ್ಷಣ ಶಿಲ್ಪಿ ಎಂ.ಎಸ್‌. ಶಿವಣ್ಣ ಸ್ಮಾರಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಬೇರೆ ಊರಿನಿಂದ ಬರಿಗೈಲಿ ಬಂದ ಶಿವಣ್ಣನವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ “ಶೂನ್ಯದಿಂದ ಶಿಖರಕ್ಕೆ’ ಶೀರ್ಷಿಕೆ ಅನ್ವರ್ಥವಾಗುತ್ತದೆ. ಅದೇ ರೀತಿ ಅವರು ಕಟ್ಟಿ ಬೆಳೆಸಿದ ಸಂಸ್ಥೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಜ್ಞಾನ ಪಡೆಯುವ ಮೂಲಕ ಅವರ ಹೆಸರು ಅಜರಾಮರವಾಗಿದೆ.

ಶ್ರೀ ಸಿದ್ಧಲಿಂಗ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next