Advertisement

ಶಿವಣ್ಣ-ಧನಂಜಯ್‌ ಜೊತೆಯಾಟ: ಬೈರಾಗಿಯಲ್ಲಿ ಟಗರು ಜೋಡಿ ಕಾದಾಟ

03:15 PM Jun 10, 2022 | Team Udayavani |

ಒಂದು ಜೋಡಿ ಯಾವುದೇ ಒಂದು ಸಿನಿಮಾದಲ್ಲಿ ಹಿಟ್‌ ಆದರೂ, ನಂತರ ಆ ಜೋಡಿಯ ಸಿನಿಮಾ ಮೇಲೆ ಅಭಿಮಾನಿಗಳು ಒಂದು ಕಣ್ಣಿಟ್ಟಿರುತ್ತಾರೆ. ಅದು ನಾಯಕ-ನಾಯಕಿ ಇರಲಿ ಅಥವಾ ಹೀರೋ-ವಿಲನ್‌ ಇರಲಿ. ಸದ್ಯ ಈ ರೀತಿ ಕುತೂಹಲದಿಂದ ಹಿಟ್‌ ಜೋಡಿಯೊಂದನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆ ಜೋಡಿ ಬೇರಾರು ಅಲ್ಲ, ಶಿವಣ್ಣ ಹಾಗೂ ಧನಂಜಯ್‌.

Advertisement

“ಟಗರು’ ಚಿತ್ರದಲ್ಲಿ ಶಿವಣ್ಣ ಹಾಗೂ ಧನಂಜಯ್‌ ಜೊತೆಯಾಗಿ ನಟಿಸುವ ಜೊತೆಗೆ ಅವರಿಬ್ಬರ ಕಾಂಬಿನೇಶನ್‌ ಹಿಟ್‌ ಆಗಿತ್ತು. ಈಗ ಮತ್ತೆ ಈ ಕಾಂಬಿನೇಶನ್‌ ಜೊತೆಯಾಗಿದೆ. ಅದು “ಬೈರಾಗಿ’ ಚಿತ್ರದ ಮೂಲಕ.

ಶಿವರಾಜ್‌ಕುಮಾರ್‌ ನಟನೆಯ 123ನೇ ಚಿತ್ರ “ಬೈರಾಗಿ’ಯಲ್ಲಿ ಶಿವಣ್ಣ ಜೊತೆ ಧನಂಜಯ್‌ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಇಲ್ಲೂ ಕೂಡಾ ಡಾಲಿ ನೆಗೆಟಿವ್‌ ಶೇಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ, ಚಿತ್ರದಲ್ಲಿ ಶಿವಣ್ಣ ಹಾಗೂ ಧನಂಜಯ್‌ ಹೈವೋಲ್ಟೇಜ್‌ ಫೈಟ್‌ ಅನ್ನು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಬಹುನಿರೀಕ್ಷೆ ಹುಟ್ಟು ಹಾಕಿರುವ ಚಿತ್ರಗಳಲ್ಲಿ “ಬೈರಾಗಿ’ ಕೂಡಾ ಒಂದು. ತುಂಬಾ ಗ್ಯಾಪ್‌ನ ಬಳಿಕ ಬರುತ್ತಿರುವ ಹಾಗೂ ಈ ವರ್ಷದ ಮೊದಲ ಶಿವಣ್ಣನ ಸಿನಿಮಾ ಆಗಿರುವುದರಿಂದ ಅಭಿಮಾನಿಗಳು ಕಾಯುತ್ತಿದ್ದಾರೆ.

ಇದನ್ನೂ ಓದಿ:ಶೇ.20 ಭೂಮಿಯಲ್ಲಿ 800 ಕೋಟಿ ಜನರ ವಾಸ: ಪರಿಸರವಾದಿ, ನಟ ಸುರೇಶ ಹೆಬ್ಳೀಕರ್‌ ಅಭಿಮತ 

ಇನ್ನು, ಈ ಚಿತ್ರದಲ್ಲಿ ಧನಂಜಯ್‌ಗಾಗಿಯೇ ಒಂದು ಇಂಟ್ರೋಡಕ್ಷನ್‌ ಫೈಟ್‌ ಕೂಡಾ ಇದೆಯಂತೆ. ಹಾಗಂತ ಅದು ಶಿವಣ್ಣ ಜೊತೆಯಲ್ಲ. ಬದಲಾಗಿ ಡಾಲಿ ಪಾತ್ರ ಪರಿಚಯಿಸುವ ಫೈಟ್‌ ಇದಾಗಿದ್ದು, ಅಭಿಮಾನಿಗಳಿಗೆ ಮಜಾ ಸಿಗುವುದರಲ್ಲಿ ಎರಡು ಮಾತಿಲ್ಲ. ವಿಜಯ್‌ ಮಿಲ್ಟನ್‌ ಈ ಚಿತ್ರದ ನಿರ್ದೇಶಕ.

Advertisement

ಈ ಚಿತ್ರದಲ್ಲಿ ಹಿರಿಯ ನಟ ಶಶಿ ಕುಮಾರ್‌, ಅನು ಪ್ರಭಾಕರ್‌, ಅಂಜಲಿ, ಯಶ ಶಿವಕುಮಾರ್‌ ಸೇರಿದಂತೆ ಅನೇಕರು ನಟಿಸಿದ್ದಾರೆ. “ಕೃಷ್ಣ ಕ್ರಿಯೇಶನ್ಸ್‌’ ಬ್ಯಾನರ್‌ ಅಡಿಯಲ್ಲಿ ಕೃಷ್ಣ ಸಾರ್ಥಕ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅನೂಪ್‌ ಸೀಳಿನ್‌ ಸಂಗೀತ ಚಿತ್ರಕ್ಕಿದ್ದು, ಈಗಾಗಲೇ ಬಿಡುಗಡೆಯಾಗಿರುವ ಎರಡು ಹಾಡುಗಳು ಹಿಟ್‌ಲಿಸ್ಟ್‌ ಸೇರಿವೆ.

ಜಿ.ಎಸ್.ಕಾರ್ತಿಕ ಸುಧನ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next