Advertisement

ಎಂ.ಬಿ.ಪಾಟೀಲ ಪುಸ್ತಕ ಬರೆದರೆ, ನಾನು ಡಿಕ್ಷನರಿ ತೆಗೆಯುತ್ತೇನೆ: ಶಿವಾನಂದ ಪಾಟೀಲ್

05:29 PM May 01, 2020 | keerthan |

ವಿಜಯಪುರ: ಜಿಲ್ಲೆಯ ಅಭಿವೃದ್ಧಿಗಾಗಿ ನಾನು ಅವರಿಗೆ ಕ್ಷೇತ್ರವನ್ನೇ ಬಿಟ್ಟುಕೊಟ್ಟೆ. ಅವರು ಪುಸ್ತಕ ಬರೆದರೆ ನಾನು ಡಿಕ್ಷನರಿ ತೆಗೆಯುತ್ತೇನೆ. ನಾನು ಸಹಕಾರ ನೀಡಲಿಲ್ಲ ಎಂದು ನನ್ನ ವಿರುದ್ಧ ಆರೋಪ ಮಾಡುವವರು ಬಹಿರಂಗ ಚರ್ಚೆಗೆ ಬರಲಿ ಎಂದು ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ ಅವರಿಗೆ ಶಿವಾನಂದ ಪಾಟೀಲ ಆಹ್ವಾನ ನೀಡಿದರು.

Advertisement

ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವನಬಾಗೇವಾಡಿ ಕ್ಷೇತ್ರದ ನೀರಾವರಿ ಮಾತ್ರವಲ್ಲ ಇಡೀ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಿರೀಕ್ಷೆ ಮೀರಿ ಸಹಕಾರ ನೀಡಿದ್ದೇನೆ. ಆದರೂ ನನ್ನ ವಿರುದ್ಧ ಮಾತನಾಡುವವರು ಬಹಿರಂಗ ಚರ್ಚೆಗೆ ಬರಲಿ ಎಂದು ಸ್ವಪಕ್ಷದ ಶಾಸಕ ಎಂ.ಬಿ.ಪಾಟೀಲ ಅವರಿಗೆ  ಆಹ್ವಾನ ನೀಡಿದ್ದಾರೆ.

ಜಿಲ್ಲೆಯ ನೀರಾವರಿ ಮೂಲ ಕನಸು ಕಂಡವರು ಸುಗಂಧಿ ಮುರಿಗೆಪ್ಪ ಹಾಗೂ ಹಿರಿಯರು. ಗುಲ್ಹಾಟೆ ಸಮಿತಿಗೆ ಜಿಲ್ಲೆಯ ನೀರಾವರಿ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟರು. ಪರಿಣಾಮ ಜಿಲ್ಲೆಯ ನೀರಾವರಿ ಯೋಜನೆಗಳು ಸಾಕಾರ ಗೊಳ್ಳಲು ಕಾರಣವಾಯಿತು. ಆದರೆ ಯಾರೋ ಒಬ್ಬರು ನನ್ನಿಂದಲೇ ಜಿಲ್ಲೆ ನೀರಾವರಿ ಕಂಡಿದೆ ಎಂಬ ಅಹಂಕಾರದ ಮಾತುಗಳನ್ನಾತ್ತಾರೆ. ಅವರಂತೆ ನನ್ನಿಂದಲೇ ನೀರಾವರಿ ಆಯ್ತು ಎಂದು ಹೇಳಿಕೊಳ್ಳುವ ಮೂರ್ಖತನ ನಾನು ಮಾಡಲಾರೆ ಎಂದು ವಾಗ್ದಾಳಿ ನಡೆಸಿದರು.

ಜಿಲ್ಲೆಗೆ ನೀರು ಬರಬೇಕು ಎಂದು ನಾನು ಸೇರಿದಂತೆ ಹಲವರು ನಿರೀಕ್ಷೆ ಮೀರಿ ಸಹಕಾರ ನೀಡಿದ್ದೇವೆ. ನನ್ನ ಕ್ಷೇತ್ರದಲ್ಲಿ ಸ್ವಂತ ಖರ್ಚಿನಿಂದ 7-8 ಲಕ್ಷ ರೂ. ಕೆಲಸ ಮಾಡಿದ್ದಾಗಿ ಹೇಳಿದ್ದಾರೆ. ಯಾರೊಬ್ಬರೂ ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುವ ಅಗತ್ಯವಿಲ್ಲ. ಖರ್ಚು ಮಾಡಿದ್ದರೆ ಹಣ ಮರಳಿ ಕೊಡಲು ಸಿದ್ಧನಿದ್ದೇನೆ. ನನ್ನ ಕ್ಷೇತ್ರದಲ್ಲಿ ಅವರು ಕೆಲಸ ಮಾಡುವುದು ಬೇಡ. ನಾನು ಅವರ ಕ್ಷೇತ್ರದಲ್ಲಿ ಕೈ ಹಾಕುವುದೂ ಸರಿಯಲ್ಲ ಎಂದರು.

ನಮ್ಮ ಈ ವೈರುದ್ಯ ನಮ್ಮ ಮಟ್ಟದಲ್ಲೇ ಮುಗಿಸಬೇಕು. ಆದರೆ ಅವರು ಮಕ್ಕಳು ಮೂಲಕ ಟ್ವೀಟ್ ನಂಥ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿಸುವ ಮಟ್ಟಕ್ಕೂ ಹೋಗಿದ್ದಾರೆ. ಇದು ಇಲ್ಲಿಗೆ ನಿಲ್ಲಬೇಕು. ನಮ್ಮ‌ ಮುಂದಿನ ಪೀಳಿಗೆಗಳಿಗೆ ಮುಂದುವರೆಯದಿರಲಿ ಎಂದರು.

Advertisement

ಎಂ.ಬಿ.ಪಾಟೀಲ ಅವರು ರಾಜಕಾರಣ ಸಣ್ಣತನಕ್ಕೆ ಇಳಿದಿದ್ದು, ನಾನು ಮಟ್ಡದ ರಾಜಕಾರಣಕ್ಕೆ ಇಳಿಯಲಾರೆ. ಆದರೆ ಇವರ ವರ್ತನೆ ಹೀಗೆ‌ ಮುಂದುವರೆದರೆ ಭವಿಷ್ಯದಲ್ಲಿ ಇವರ ಎಲ್ಲವನ್ನೂ ಬಹಿರಂಗ ಮಾಡದೇ ಬಿಡಲಾರೆ ಎಂದು ಎಚ್ಚರಿಸಿದರು.

ನಮಗೆ ಏನೆಲ್ಲ ಸಮಸ್ಯೆ ಆದರೂ ಸಹಿಸಿಕೊಂಡು ಸಿದ್ದರಾಮಯ್ಯ ಸರ್ಕಾರ ಸಹಕಾರ ನೀಡಿದೆವು. ನಮ್ಮ ಸಹನೆ, ಸಹಕಾರದಿಂದಲೇ ಸಿದ್ಧರಾಮಯ್ಯ ಸರ್ಕಾರ ಉಳಿದಿದೆ ಹಾಗೂ ಅಭಿವೃದ್ಧಿಗೂ ಅವಕಾಶ ಸಿಕ್ಕಿದೆ. ಎಂ.ಬಿ.ಪಾಟೀಲ ವಿರುದ್ಧ ಹೈಕಮಾಂಡ್ ಮಟ್ಟದಲ್ಲಿ ದೂರುವುದಿಲ್ಲ. ನನಗೆ ಯಾವುದೇ ಹೈಕಮಾಂಡ್ ಇಲ್ಲ, ನನ್ನ ಆತ್ಮವೇ ನನಗೆ ಹೈಕಮಾಂಡ್ ಎಂದು ಗುಡುಗಿದರು.

Advertisement

Udayavani is now on Telegram. Click here to join our channel and stay updated with the latest news.

Next