Advertisement

ಕೆರೆ ತುಂಬಿಸುವ ಯೋಜನೆ ಅತ್ಯಗತ್ಯ :ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

03:25 PM Sep 18, 2019 | Sriram |

ದಾವಣಗೆರೆ: ಬರಗಾಲ ಬಂದಾಗ ಸಾವಿರಾರು ಕೋಟಿ ನೀಡುವ ಬದಲಿಗೆ ಬರವೇ ಬರದಂತೆ ಕೆರೆಗಳ ತುಂಬಿಸುವ ಯೋಜನೆಗಳನ್ನು ಸರ್ಕಾರ ರೂಪಿಸುವುದು ಅತ್ಯಗತ್ಯ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

Advertisement

ದಾವಣಗೆರೆಯ ಎಸ್.ಎಸ್. ಕಲ್ಯಾಣ ಮಂಟಪದಲ್ಲಿ ನಡೆದ ಭಕ್ತಿ ಸಮರ್ಪಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ಹಾಸನ ತಾಲೂಕಿನ ಹಳೇಬೀಡುನಲ್ಲಿ ಈ ಬಾರಿಯ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಸಲಾಗುವುದು. 90 ಕೋಟಿ ವೆಚ್ಚದ ರಣಘಟ್ಟ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಎಸ್. ಬಿದರೆ, ನಿಡಘಟ್ಡ ಇತರೆ ಮೂರು ಕೆರೆ ತುಂಬಿಸುವ ಯೋಜನೆ ಸಾಕಾರಕ್ಕೆ ಶ್ರಮಿಸಲಾಗುವುದು ಎಂದು ಶ್ರೀಗಳು ತಿಳಿಸಿದರು.

ಇಂದು ಧರ್ಮ ಭಾಷಣದ ಸರಕಾಗಿದೆ. ಸಂಕಷ್ಟದಲ್ಲಿ ಇದ್ದವರಿಗೆ ನೆರವಾಗುವ ಮಾನವೀಯತೆ ನಿಜವಾದ ಧರ್ಮ ಎಂದು ಪ್ರತಿಪಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next