Advertisement

Shivamogga: ಆತಂಕ ತಂದಿದ್ದ ʼಚೀನಾ ಬೆಳ್ಳುಳ್ಳಿ’; ಸುರಕ್ಷಿತ ಎಂದ ಲ್ಯಾಬ್‌ ವರದಿ

12:07 AM Oct 30, 2024 | Esha Prasanna |

ಶಿವಮೊಗ್ಗ: ಭಾರೀ ಆತಂಕ ಸೃಷ್ಟಿಸಿದ್ದ “ಚೀನಾ ಬೆಳ್ಳುಳ್ಳಿ’ಯ ಪ್ರಯೋಗಾಲಯ (ಲ್ಯಾಬ್‌) ವರದಿ ಬಹಿರಂಗಗೊಂಡಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ. ಬೆಳ್ಳುಳ್ಳಿಯಲ್ಲಿ ರಾಸಾಯನಿಕ ಅಂಶಗಳು ನಿಗದಿತ ಮಾನದಂಡಕ್ಕಿಂತ ಒಳಗೆ ಇವೆ ಎಂದು ವರದಿ ಹೇಳಿದೆ.

Advertisement

ಚೀನದಿಂದ ದೊಡ್ಡ ಗಾತ್ರದ ಬೆಳ್ಳುಳ್ಳಿ ಬರುತ್ತಿದ್ದು, ಅದಕ್ಕೆ ಅತಿ ಹೆಚ್ಚು ರಾಸಾಯನಿಕ ಬಳಕೆ ಮಾಡಲಾಗುತ್ತದೆ. ದೀರ್ಘ‌ ಕಾಲದವರೆಗೆ ಕೆಡುವುದಿಲ್ಲ. ಇದನ್ನು ತಿಂದರೆ ಕಿಡ್ನಿ, ಲಿವರ್‌ಗೆ ತೊಂದರೆಯಾಗುತ್ತದೆ ಎಂಬ ಆರೋಪಗಳು ಇದ್ದವು. ಆರೋಪದ ಬೆನ್ನಲ್ಲೇ ಕೇಂದ್ರ ಸರಕಾರ ಬೆಳ್ಳುಳ್ಳಿ ನಿಷೇಧ ಮಾಡಿತ್ತು. ಶಿವಮೊಗ್ಗದ ಭಾರತ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು, ಶಿವಮೊಗ್ಗದ 8 ಕಡೆ ದಾಳಿ ನಡೆಸಿದ್ದರು. ಅನುಮಾನ ಬಂದ ಮೂರು ಕಡೆ ಸ್ಯಾಂಪಲ್‌ ಪಡೆದು ಬೆಂಗಳೂರಿನ ಎಫ್‌ಎಸ್‌ಎಸ್‌ಐ ಲ್ಯಾಬ್‌ಗೆ  ಕಳುಹಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆಹಾರ ಸುರಕ್ಷೆ ಮತ್ತು ಗುಣಮಟ್ಟದ ಪ್ರಾಧಿಕಾರದ ಅಧಿಕಾರಿ ಡಾ|ಹರೀಶ್‌, ಲ್ಯಾಬ್‌ ವರದಿಯಲ್ಲಿ ರಾಸಾಯನಿಕ ಅಂಶಗಳು ನಿಗದಿತ ಮಾನದಂಡಕ್ಕಿಂತ ಒಳಗಿದೆ ಎಂದು ಹೇಳಿದೆ. ಜಪ್ತಿ ಮಾಡಿದ ಬೆಳ್ಳುಳ್ಳಿಯನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next