Advertisement

ಖಾಸಗಿ ಒಡೆತನಕ್ಕೆ ಆಸ್ತಿ ಮಾರಾಟ ಮಾಡಲು ವಿರೋಧ

03:00 PM Aug 27, 2021 | Shreeraj Acharya |

ಶಿವಮೊಗ್ಗ: ರಾಷ್ಟ್ರೀಯ ಹಣಗಳಿಕೆ ನೀತಿ (ಎನ್‌. ಎಂ. ಪಿ) ಯೋಜನೆಯಡಿ ¨ ದೇಶ¨ ‌ ಆರು ಲಕ್ಷ ಕೋಟಿ ರೂ. ಆಸ್ತಿಯನ್ನು ಖಾಸಗಿ ಒಡೆತನಕ್ಕೆ ಮಾರಾಟ ಮಾಡಲು ಹೊರಟಿರುವ ‌ ಕೇಂದ್ರ ಸ‌ರ್ಕಾರದ ನೀತಿಯನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್‌ ನಿಂದ  ನ‌ಗರದ ರೈಲ್ವೇ ನಿಲ್ದಾಣದಲ್ಲಿ ರೈಲ್ವೆ ತಡೆಗೆ ಯತ್ನಿಸಿದ ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.

Advertisement

¨ ದೇಶದಲ್ಲಿ ಅಚ್ಚೇ ದಿನ್‌ ತರುತ್ತೇನೆಂದು ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರ್ಕಾರ ¨ದೇಶದ ಸಾರ್ವಜನಿಕ ವಲಯದ ಆಸ್ತಿಗಳನ್ನು ರಾಷ್ಟ್ರೀಯ ಹಣ ಗ‌ಳಿಕೆಯ ನೀತಿಯಡಿಯಲ್ಲಿ ಸರಿ ಸುಮಾರು 6 ಲಕ್ಷ  ಕೋಟಿಯ ಆಸ್ತಿಯನ್ನು ಕಾರ್ಪೋರೆಟ್‌ ಕಂಪೆನಿಗಳಿಗೆ ಮಾರಾಟ ಮಾಡಲು ಹುನ್ನಾರ ನಡೆಸುತ್ತಿರುವುದು ತೀವ್ರ ಖಂಡನಿಯ ಎಂದು ಪ್ರತಿಭಟನಾಕಾರ‌ರು ಆಕ್ರೋಶ ‌ ವ್ಯಕ್ತಪಡಿಸಿದರು.

ಇದನ್ನೂ ಓದಿ : ‘ಹೀಗೆ ಬಂದು ಹಾಗೆ ಹೋದ್ರು’..: ಐದು ನಿಮಿಷಕ್ಕೆ ಸೀಮಿತವಾಯ್ತು ಗೃಹ ಸಚಿವರ ಘಟನಾ ಸ್ಥಳ ಭೇಟಿ

ಈಗಾಗಲೇ ಎನ್‌.ಎಂ.ಪಿ. ಅಡಿಯಲ್ಲಿ 26, 700ರ‌ಷ್ಟು ರಾಷ್ಟ್ರೀಯ ಹೆದ್ದಾರಿಗಳೂ 150 ರೈಲು, 400 ರೈಲ್ವೆ ಸ್ಟೇಷನ್‌, 25 ವಿಮಾನ ನಿಲ್ದಾಣ,9 ಬಂದರುಗಳು , ಎರಡು ರಾಷ್ಟ್ರೀಯ ಕ್ರೀಡಾಂಗ‌ಣಗಳು, ವಿದ್ಯುತ್‌ ಘಟಕ ಗಳು, ಟೆಲಿಕಾಂ ನೆಟ್ ವರ್ಕ್ ಗಳು ಹೀಗೆ 13 ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡಿ ಅದಾನಿ- ಅಂಬಾನಿ ಅಂತಹ ‌ ಕಾರ್ಪೋರೆಟ್‌ ಕಂಪೆನಿಗಳಿಗೆ ದೇಶದ ‌‌ ಜನರನ್ನು ಅಡಿಯಾಳಾಗಿ ಮಾಡಲು ಹೊರಟಿರುವುದರಲ್ಲಿ ಬಿಜೆಪಿ ಸರ್ಕಾರದ ಸರ್ವಾಧಿಕಾರಿ, ಜನವಿರೋಧಿ ನೀತಿ ಎದ್ದು ಕಾಣುತ್ತದೆ.

ಕೂಡ‌ಲೇ ರಾಷ್ಟ್ರಪತಿಗಳು ಇಂತಹ ¨ದೇಶವಿರೋಧಿ ಯೋಜನೆಗಳಿಗೆ ಕಡಿವಾಣ ಹಾಕಿ ಕಾರ್ಪೋರೆಟ್‌ ಕಂಪೆನಿಗಳಿಗೆ ಶಾಮೀಲಾಗಿರುವ‌ ಇಂತಹ ¨ ದ‌ಳ್ಳಾಳಿ ಹಾಗೂ ದುರಾಳತನದ ಬಿಜೆಪಿ ಸರ್ಕಾರವನ್ನು ವಜಾ ಮಾಡಬೇಕೆಂದು ಆಗ್ರಹಿಸಿದರು.

Advertisement

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಪಕ್ಷದ ಎಚ್‌.ಎಸ್‌. ಸುಂದರೇಶ್‌,‌ ಕೆ.ಬಿ. ಪ್ರಸನ್ನ ಕುಮಾರ್‌, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಪಿ. ಗಿರೀಶ್‌, ಯುವ ‌ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಕುಮಾರ್‌, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್‌, ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಯಮುನಾ  ‌ಸಂಗೇಗೌಡ, ಪಾಲಿಕೆ  ಸ‌ದಸ್ಯ ಎಚ್‌.ಸಿ. ಯೋಗೀಶ್‌, ಬಿ. ಲೋಕೇಶ್‌, ಇ.ಟಿ. ನಿತಿನ್‌. ಎಸ್‌. ಆರ್‌. ಕಿರಣ್‌, ಟಿ.ವಿ. ರಂಜಿತ್‌, ರಂಗೇಗೌಡ, ಎಸ್‌. ತಂಗರಾಜ್‌, ಸುವ‌ರ್ಣ ನಾಗರಾಜ್‌, ಕವಿತಾ ರಾಘವೇಂದ್ರ, ಶಶಿಕುಮಾರ್‌ ಸಿರಿಗೆರೆ, ಎಂ. ರಾಹುಲ್‌, ಕಲೀಮ್‌ ಸಿರಿಗೆರೆ, ನಿಖೀಲ್‌ ಮೂರ್ತಿ, ಸಚಿನ್‌ ಸಿಂಧೆ, ಸುಹಾಸ್‌ ಗೌಡ ‌, ಕೆ.ಎಲ್‌. ಪವನ್‌, ರಾಕೇಶ್‌, ಚಿನ್ಮಯ್‌ ರಾಹುಲ್‌ ಸೀಗೆಹಟ್ಟಿ, ಅಕ್ಷರ್‌, ಶಾರುಖ್‌,  ಸೈಫುಲ್ಲಾ,  ನಂದನ್ ಸೇರಿ ಇತರರು ಇದ್ದರು.

ಇದನ್ನೂ ಓದಿ : ಭಾರತ್‌ ಬ್ಯಾಂಕ್‌ ಘಾಟ್ಕೋಪರ್ ಪಶ್ಚಿಮ ಶಾಖೆ: 43ನೇ ಸಂಸ್ಥಾಪನ ದಿನಾಚರಣೆ

Advertisement

Udayavani is now on Telegram. Click here to join our channel and stay updated with the latest news.

Next