Advertisement

ರಂಗಭೂಮಿ ಉಳಿಸಿ ಬೆಳೆಸಿ: ಡಾ|ಎಂ. ಗಣೇಶ್‌

12:27 PM Jul 15, 2019 | Team Udayavani |

ಶಿವಮೊಗ್ಗ: ರಂಗಭೂಮಿ ಒಂದು ರೀತಿಯಲ್ಲಿ ರೈತ ಇದ್ದ ಹಾಗೆ. ಸೊಸೈಟಿ ಎಂಬ ಮಳೆಯೊಂದಿಗೆ ರಂಗಭೂಮಿಯನ್ನು ಬಿತ್ತುವ ಕೆಲಸವನ್ನು ನಿರ್ದೇಶಕರು ಹಾಗೂ ರಂಗತಂಡಗಳು ಮಾಡುತ್ತಿವೆ ಎಂದು ರಂಗಾಯಣ ನಿರ್ದೇಶಕ ಡಾ| ಎಂ. ಗಣೇಶ್‌ ಹೇಳಿದರು.

Advertisement

ನಗರದ ಡಿವಿಎಸ್‌ ರಂಗ ಮಂದಿರದಲ್ಲಿ ಭಾನುವಾರ ಕಲಾವಿದರು ಸಂಘದಿಂದ ಆಯೋಜಿಸಿದ್ದ ರಂಗ ಕಲಾವಿದರಿಗೆ ರಂಗಭೂಮಿ ಏಕೆ? ಹೇಗೆ? ಪುನರ್‌ಮನನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಲಾವಿದರ ಒಕ್ಕೂಟ ಚಟುವಟಿಕೆಯಿಂದ ಕೆಲಸ ಮಾಡುತ್ತಿದೆ. ಹೊಸ ದಿಕ್ಕನ್ನು ತೋರಿಸುವ ಆಶಾಭಾವನೆಯನ್ನು ಹೊಂದಿದೆ. ರಂಗಭೂಮಿ ಸದಾ ಚಟುವಟಿಕೆಯಿಂದ ಕೂಡಿರುವ ಜಿಲ್ಲೆ ಶಿವಮೊಗ್ಗ ಆಗಿದ್ದು, ಜಿಲ್ಲೆಯು ಎಲ್ಲಾ ಕ್ಷೇತ್ರದಲ್ಲಿಯೂ ತನ್ನನ್ನು ತಾನೂ ಗುರುತಿಸಿಕೊಂಡಿದೆ ಎಂದರು.

ಹಿಂದೆ ಇದ್ದ ರಂಗಭೂಮಿ ಇಂದು ಇಲ್ಲ. ಬೇರೆ ಬೇರೆ ಕವಲನ್ನು ರಂಗಭೂಮಿ ಹಾಗೂ ಜನರು ಆಪೇಕ್ಷಿಸುತ್ತಿದ್ದಾರೆ. ಭೂತಕಾಲ, ವರ್ತಮಾನ, ಭವಿಷ್ಯತ್‌ ಕಾಲದ ಒಟ್ಟೊಟ್ಟಿಗೆ ರಂಭೂಮಿ ಕೆಲಸ ಮಾಡುತ್ತಿದೆ ಎಂದ ಅವರು, ಎಲ್ಲರನ್ನು ಒಳಗೊಂಡು ರಂಗಭೂಮಿಯನ್ನು ಬೆಳೆಸೋಣ. ಈ ರೀತಿಯ ಕೆಲಸಕ್ಕೆ ರಂಗಭೂಮಿ ಸದಾ ನಿಮ್ಮೊಂದಿಗೆ ಇರುತ್ತದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿದ್ದ ಶಿರಸಿಯ ರಂಗ ನಿರ್ದೇಶಕ ಡಾ| ಶ್ರೀಪಾದ್‌ ಭಟ್ ಮಾತನಾಡಿ, ಯಾವುದೇ ವಿಶ್ವವಿದ್ಯಾಲಯಗಳು ಕಲಿಸದ ವಿದ್ಯೆಯನ್ನು ರಂಗಭೂಮಿ ಕಲಿಸುತ್ತಿದೆ. ನಾಟಕ ಎಂದರೆ ಆನಂದ ಮತ್ತು ಅರಿವು. ಜ್ಞಾನಕ್ಕೂ ಮತ್ತು ಆನಂದಕ್ಕೂ ಇರುವೇ ಸಂಪರ್ಕ ರಂಗಭೂಮಿಯಾಗಿದೆ ಎಂದರು.

ರಂಗಭೂಮಿ ದೇಹವೇ ದೇಗುಲವಾಗುವ ಬಹುದೊಡ್ಡ ಸಾಧನ. ಆನಂದದ ಮೂಲಕ ಅರಿವನ್ನು ಮೂಡಿಸುವುದೇ ರಂಗಭೂಮಿ. ದೇಹವನ್ನು ಪ್ರೀತಿಸುವುದಕ್ಕೆ ದೇಹವನ್ನು ದೇಗುಲ ಮಾಡಿಕೊಳ್ಳುವುದಕ್ಕೆ ರಂಗಭೂಮಿ ಅತ್ಯಗತ್ಯ ಎಂದು ಹೇಳಿದರು.

Advertisement

ಪ್ರಭುತ್ವಕ್ಕೆ ವಿದ್ರೋಹ ಮಾಡುವುದನ್ನು ಕಲಿಸುವುದೇ ನಾಟಕ. ಹಾಗಾಗಿ ಅನೇಕರು ನಾಟಕಗಾರರನ್ನು ಒಪ್ಪುವುದಿಲ್ಲ. ಪ್ರತಿಭಟಿಸುವ ಗುಣವನ್ನು ರಂಗಭೂಮಿ ಕಲಿಸುತ್ತದೆ. ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಬಾರಿ ನಿಷೇಧಕ್ಕೆ ಒಳಪಟ್ಟಿದ್ದು ರಂಗಭೂಮಿ. ಜಗತ್ತಿನಲ್ಲಿ ಎಷ್ಟು ಜ್ಞಾನಶಾಖೆ ಮಾತುಗಳಿವೆಯೋ ಅವೆಲ್ಲವೂ ರಂಗಭೂಮಿಯಲ್ಲಿ ಅಡಕವಾಗಿದೆ ಎಂದರು.

ರಂಗ ನಿರ್ದೇಶಕ ಕೊಟ್ರಪ್ಪ ಜಿ. ಹಿರೇಮಾಗಡಿ, ಬೆಂಗಳೂರಿನ ರಂಗಕರ್ಮಿ ಚನ್ನಕೇಶವ, ಕಲಾವಿದರು ಸಂಘದ ಜಿ.ಆರ್‌. ಲವ ಮತ್ತಿತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next