Advertisement

Shivamogga; ಮನೆಯಲ್ಲೇ ಗಾಂಜಾ ಬೆಳೆದ ಖತರ್ನಾಕ್ ವಿದ್ಯಾರ್ಥಿಗಳು!!

08:39 PM Jun 24, 2023 | Team Udayavani |

ಶಿವಮೊಗ್ಗ: ಹೊಲದಲ್ಲಿ, ಕಾಡಲ್ಲಿ ಗಾಂಜಾ ಬೆಳೆದು ಮಾರುತ್ತಿದ್ದ ಕಾಲ ಈಗ ಮುಗಿದಿದೆ. ಮೆಡಿಕಲ್ ವಿದ್ಯಾರ್ಥಿಗಳು ಮಾಡಿದ್ದ ಖತರ್ನಾಕ್ ಐಡಿಯಾ ಈಗ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ.

Advertisement

ತಮಿಳುನಾಡು, ಕೇರಳದ ಮೂವರು ವಿದ್ಯಾರ್ಥಿಗಳು ಮನೆಯಲ್ಲೆ ಹೈಟೆಕ್ ಫಾರ್ಮಿಂಗ್ ಮೂಲಕ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದರು. ಶಿವಮೊಗ್ಗದಂಥ ನಗರದಲ್ಲೂ ಈಗ ಗಾಂಜಾ ದಂದೆಯ ಹೊಸ ರೂಪ ಅನಾವರಣಗೊಂಡಿದೆ.

ತಮಿಳುನಾಡು ಕೃಷ್ಣಗಿರಿಯ ವಿಘ್ನರಾಜ್ (28) ಎಂಬಾತ ಇಲ್ಲಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದು ಶಿವಗಂಗಾ ಲೇಔಟ್‌ನಲ್ಲಿ ಮನೆ ಮಾಡಿಕೊಂಡಿದ್ದ. ಇಲ್ಲಿ ಮನೆ ಮಾಲಕರ ಗಮನಕ್ಕೆ ಬಾರದಂತೆ ಮನೆಯೊಳಗೆ ಕೃತಕ ವಾತಾವರಣ ಸೃಷ್ಟಿಸಿ (ಸ್ಪೈಡರ್ ಫಾರ್ಮಿಂಗ್) ಪಾಟ್‌ಗಳಲ್ಲಿ ಗಾಂಜಾ ಬೆಳೆದು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದಾಗ ತಿಳಿದುಬಂದಿದೆ. ಮೂರುವರೆ ತಿಂಗಳಿನಿಂದ ಈ ದಂದೆಯಲ್ಲಿ ತೊಡಗಿಕೊಂಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು ಇದರಲ್ಲಿ ಯರ‍್ಯಾರು ಭಾಗಿಯಾಗಿದ್ದಾರೆ ಎಂದು ತನಿಖೆ ನಡೆಲಾಗುತ್ತಿದೆ. ಕೇರಳ ಇಡುಕ್ಕಿಯ ವಿನೋದ್ ಕುಮಾರ್ (27), ತಮಿಳುನಾಡು ಧರ್ಮಪುರಿಯ ಪಾಂಡಿದೊರೈ (27) ಎಂಬುವರು ಗಾಂಜಾ ಖರೀದಿಗೆ ಬಂದಿದ್ದು ಅವರನ್ನು ಸಹ ಬಂಧಿಸಲಾಗಿದೆ.

ಆರೋಪಿಗಳಿಂದ 227 ಗ್ರಾಂ ಗಾಂಜಾ, 1.53 ಕೆ.ಜಿ ಹಸಿ ಗಾಂಜಾ, 10 ಗ್ರಾಂ ಚರಸ್, ಗಾಂಜಾ ಬೀಜಗಳಿದ್ದ ಚಿಕ್ಕ ಬಾಟಲ್, 3 ಕೆನಾಬಿಲ್ ಆಯಿಲ್ ಸಿರಂಜ್, ಗಾಂಜಾಪುಡಿ ಮಾಡಲು ಬಳಸುತ್ತಿದ್ದ ಎರಡು ಡಬ್ಬಿಗಳು, 1 ಎಲೆಕ್ಟ್ರಾನಿಕ್ ತೂಕದ ಯಂತ್ರ, 1 ಎಕ್ಸಿಟ್ ಫ್ಯಾನ್, 6 ಟೇಬಲ್ ಫ್ಯಾನ್, 2 ಸ್ಟೆಬಲೈಸರ್, 3 ಎಲ್‌ಇಡಿ ಲೈಟ್, ರೋಲಿಂಗ್ ಪೇಪರ್, 2 ಹುಕ್ಕಾ ಕೊಳವೆ, 4 ಹುಕ್ಕಾ ಕ್ಯಾಪ್, ಗಾಂಜಾ ಗಿಡದ ಕಾಂಡ, 19 ಸಾವಿರ ರೂ. ನಗದು ವಶಪಡಿಸಿಕೊಂಡು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಒಟ್ಟು ಆರು ಲಕ್ಷ ರೂ. ಗಾಂಜಾ ಬೆಳೆಯಲು ವಿನಿಯೋಗಿಸಿದ್ದ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next