Advertisement
ಜಿಲ್ಲೆಯಲ್ಲಿ ಒಟ್ಟು ವಾರ್ಷಿಕ ಮಳೆ 2237 ಮಿಮೀ ಆಗಿದ್ದು, ಈ ಸಾಲಿನ ಸರಾಸರಿ ಮಳೆಯು ಜುಲೈ 19ರ ವರೆಗೆ 675 ಮಿಲಿ ಮೀಟರ್ ಆಗಿದೆ. ಈ ವೇಳೆಗೆ 1071 ಮಿಮೀ ಮಳೆಯಾಗಬೇಕಿತ್ತು. ಇಲ್ಲಿಯವರೆಗೂ 64 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಆಗಿದೆ.
Related Articles
Advertisement
ರೈತರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಿಸಾನ್ ಸಮ್ಮಾನ್ ಯೋಜನೆ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ಈ ಯೋಜನೆಯು ಅರ್ಹ ರೈತ ಫಲಾನುಭವಿ ಕುಟುಂಬಗಳಿಗೆ ಮೂರು ಕಂತುಗಳಲ್ಲಿ ವಾರ್ಷಿಕ 6 ಸಾವಿರ ರೂಗಳನ್ನು ನೀಡುವ ಯೋಜನೆಯಾಗಿದೆ. ಕಿಸಾನ್ ಸಮ್ಮಾನ್ ಯೋಜನೆಗೆ ಹೆಸರು ನೋಂದಾಯಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಇದುವರೆಗೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಆನ್‌ಲೈನ್‌ನಲ್ಲಿ ನೋಂದಣಿಗೊಂಡ ರೈತರ ಅಂಕಿ-ಅಂಶಗಳು ಹೀಗಿದೆ. ಶಿವಮೊಗ್ಗ 21,114, ಭದ್ರಾವತಿ 21,617, ತೀರ್ಥಹಳ್ಳಿ 15,515, ಸಾಗರ 19001, ಹೊಸನಗರ 12,019, ಶಿಕಾರಿಪುರ 26,936, ಸೊರಬ 26,852 ಜಿಲ್ಲೆಯಲ್ಲಿ ಒಟ್ಟು ಸಲ್ಲಿಸಲಾದ ಅರ್ಜಿಗಳ ಸಂಖ್ಯೆ 14,43,054 ಆಗಿರುತ್ತದೆ.
ಕಿಸಾನ್ ಸಮ್ಮಾನ್ರೈತರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಿಸಾನ್ ಸಮ್ಮಾನ್ ಯೋಜನೆ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ಈ ಯೋಜನೆಯು ಅರ್ಹ ರೈತ ಫಲಾನುಭವಿ ಕುಟುಂಬಗಳಿಗೆ ಮೂರು ಕಂತುಗಳಲ್ಲಿ ವಾರ್ಷಿಕ 6 ಸಾವಿರ ರೂಗಳನ್ನು ನೀಡುವ ಯೋಜನೆಯಾಗಿದೆ. ಕಿಸಾನ್ ಸಮ್ಮಾನ್ ಯೋಜನೆಗೆ ಹೆಸರು ನೋಂದಾಯಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಇದುವರೆಗೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಆನ್‌ಲೈನ್‌ನಲ್ಲಿ ನೋಂದಣಿಗೊಂಡ ರೈತರ ಅಂಕಿ-ಅಂಶಗಳು ಹೀಗಿದೆ. ಶಿವಮೊಗ್ಗ 21,114, ಭದ್ರಾವತಿ 21,617, ತೀರ್ಥಹಳ್ಳಿ 15,515, ಸಾಗರ 19001, ಹೊಸನಗರ 12,019, ಶಿಕಾರಿಪುರ 26,936, ಸೊರಬ 26,852 ಜಿಲ್ಲೆಯಲ್ಲಿ ಒಟ್ಟು ಸಲ್ಲಿಸಲಾದ ಅರ್ಜಿಗಳ ಸಂಖ್ಯೆ 14,43,054 ಆಗಿರುತ್ತದೆ. ಫಸಲ್ ಬಿಮಾ ಯೋಜನೆ
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ಬೆಳೆ ಸಾಲ ಪಡೆಯಲು ಬೆಳೆ ವಿಮೆ ಕಡ್ಡಾಯವಾಗಿದ್ದು ರೈತರು ಹತ್ತಿರದ ಸೇವಾಕೇಂದ್ರಗಳಲ್ಲಿ (ಸಿಎಸ್‌ಸಿ), ಡಿಸಿಸಿ ಮತ್ತು ಇತರೆ ಬ್ಯಾಂಕ್‌ಗಳಲ್ಲಿ ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ. ಬೆಳೆ ವಿಮೆ ನೋಂದಾಯಿಸಲು ಕೊನೆಯ ದಿನಾಂಕ ಆ. 14 ಆಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣಕುಮಾರ್ ತಿಳಿಸಿದ್ದಾರೆ.