Advertisement

ಬೈಕ್ ಗಳ ನಡುವೆ ಅಪಘಾತ : ರಾಷ್ಟ್ರೀಯ ಖೋ-ಖೋ ಆಟಗಾರ ಸಾವು, ಇನ್ನೋರ್ವ ಗಂಭೀರ

04:30 PM Aug 31, 2021 | Team Udayavani |

ಶಿವಮೊಗ್ಗ : ಎರಡು ಬೈಕ್ ಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ರಾಷ್ಟ್ರೀಯ ಖೋ ಖೋ ಆಟಗಾರ ಸಾವನ್ನಪ್ಪಿ ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಶಿವಮೊಗ್ಗ ನಗರದ ದ್ರೌಪದಮ್ಮ ವೃತ್ತದ ಬಳಿ ಸೋಮವಾರ ತಡರಾತ್ರಿ ಸಂಭವಿಸಿದೆ.

Advertisement

ಶಿವಮೊಗ್ಗದ ಆಶೋಕ ನಗರದ ನಿವಾಸಿಯಾದ ನವೀನ್ (29) ಮೃತ ದುರ್ದೈವಿ.

ಇನ್ನೋರ್ವ ಬೈಕ್ ಸವಾರನಾದ ಗೋಪಾಳದ ಶ್ರೀರಾಮನಗರದ ನಿವಾಸಿಯಾಗಿರುವ ನವೀನ್ (32) ಗಂಭೀರ ಗಾಯಗೊಂಡಿದ್ದು ಆತನನ್ನು ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಷ್ಟ್ರೀಯ ಮಟ್ಟದ ಖೋ ಖೋ ಆಟಗಾರ :
ಅಪಘಾತದಲ್ಲಿ ಮೃತಪಟ್ಟ ನವೀನ್ 10 ಕ್ಕೂ ಹೆಚ್ಚು ಬಾರಿ ರಾಷ್ಟ್ರ ಮಟ್ಟದ ಖೋಖೋ ಪಂದ್ಯಾವಳಿ ಯಲ್ಲಿ ಭಾಗವಹಿಸಿದ್ದ ಎನ್ನಲಾಗಿದೆ.

ಶಿವಮೊಗ್ಗದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Advertisement

ಇದನ್ನೂ ಓದಿ :ತೆಲಂಗಾಣದಲ್ಲಿ ಭಾರೀ ಪ್ರವಾಹ : ನವವಧು ಸೇರಿ ಏಳು ಮಂದಿ ಸಾವು

Advertisement

Udayavani is now on Telegram. Click here to join our channel and stay updated with the latest news.

Next