Advertisement

ಶಿವಮೊಗ್ಗದಲ್ಲಿ ರಾತ್ರೋರಾತ್ರಿ ಕರ್ತವ್ಯಕ್ಕೆ‌ ಹಾಜರಾದ ನೂತನ ಎಎಸ್ ಪಿ, ಡಿವೈಎಸ್ ಪಿ?

11:05 AM May 20, 2020 | sudhir |

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಗೆ ಮಂಗಳವಾರ ರಾತ್ರಿ ನೂತನ ಎಎಸ್ ಪಿ, ನಾಲ್ವರು ಡಿವೈಎಸ್ ಪಿ ಹಾಗೂ ಏಳು ಮಂದಿ ಸಿಪಿಐ ಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ, ಕಾರಣ ಇಷ್ಟೇ ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವುದರಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗರು ಕ್ವಾರಂಟೈನ್ ನಲ್ಲಿ ಇರುವ ಕಾರಣ ಬೆಂಗಳೂರಿನಿಂದ ತಾತ್ಕಾಲಿಕವಾಗಿ ನೂತನ ಅಧಿಕಾರಿಗಳನ್ನು ನೇಮಿಸಲಾಗಿದೆ.

Advertisement

ಹಸಿರು ವಲಯದಲ್ಲಿದ್ದ ಸಿಎಂ ತವರು ಜಿಲ್ಲೆ ಶಿವಮೊಗ್ಗಕ್ಕೆ ಕೋವಿಡ್ ಮಹಾಮಾರಿ ವೇಗವನ್ನು ಪಡೆಯುತ್ತಿದ್ದು ಇದೀಗ ಪೊಲೀಸ್ ಇಲಾಖೆಯನ್ನು ಅಲ್ಲೋಲ ಕಲ್ಲೋಲ ಮಾಡಿದೆ.

ದಿನೇದಿನೇ ಕೋವಿಡ್ ಪ್ರಕರಣ ಹೆಚ್ಚು ವೇಗ ಪಡೆಯುತ್ತಿದು ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 24 ಪ್ರಕರಣ ದಾಖಲಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next