Advertisement
ಸಭೆಯ ಬಳಿಕ ಮಾತನಾಡಿದ ಸಚಿವರು, ಈವರೆಗೆ ಜಿಲ್ಲೆಯ ಜನರು ನಿರೀಕ್ಷೆಗೂ ಮೀರಿ ಸಹಕಾರ ನೀಡಿದ್ದಾರೆ. ಇದೀಗ ಸಾಮಾಜಿಕ ಅಂತರ ಕಾಯ್ದು ಕೊಂಡು ಆಯಾ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Related Articles
Advertisement
ನಿಯಮ ಉಲ್ಲಂಘಿಸಿದ್ದಲ್ಲಿ ಶಿಸ್ತು ಕ್ರಮ
ಕಲ್ಯಾಣ ಮಂದಿರ ಹಾಗೂ ಸವಿತಾ ಸಮಾಜದವರಿಗೆಅವಕಾಶ ನೀಡಿಲ್ಲ. ಷರತ್ತು ಉಲ್ಲಂಘಿಸಿದ ಅಂಗಡಿ, ಮುಂಗಟ್ಟಿಗೆ ಬೀಗ ಹಾಕಿ, ಕ್ರಮ ತೆಗೆದುಕೊಳ್ಳುತ್ತೇವೆ. ಶಿಸ್ತು ಕ್ರಮಕ್ಕೆ ಅವಕಾಶ ನೀಡಬೇಡಿ. ಈ ಎಲ್ಲಾ ನಿರ್ಧಾರ ಜುಲೈ 5ರ ತನಕ ಅನ್ವಯವಾಗುತ್ತದೆ. ಅಷ್ಟರೊಳಗೆ ಪಾಸಿಟಿವಿಟಿ ರೇಟ್ ಶೇ.5ರೊಳಗೆ ಬಂದರೆ ಇನ್ನೂ ಸ್ವಲ್ಪ ಅನ್ ಲಾಕ್ ಮಾಡ್ತೇತ್ತೇವೆ ಎಮದು ಅವರು ಹೇಳಿದ್ದಾರೆ.
ಇನ್ನು, ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕೈಗಾರಿಕೆ, ಕಲ್ಯಾಣ ಮಂದಿರ, ಹಾಪ್ ಕಾಮ್ಸ್, ಸವಿತಾ ಸಮಾಜ, ಸಗಟು ತರಕಾರಿ, ಸಗಟು ದಿನಸಿ, ಪಾತ್ರೆ, ಗಿರವಿ, ಫುಟ್ಪಾತ್ ವರ್ತಕರು, ಟೈಲರ್, ಛಾಯಾಗ್ರಾಹಕರು ಮತ್ತಿತರ ವ್ಯಾಪಾರಸ್ಥರು ಹಾಗೂ ಪ್ರತಿನಿಧಿಗಳ ಸಭೆಯಲ್ಲಿ ಭಾಗಿಯಾಗಿ ಸಚಿವರ ಮುಂದೆ ತಮ್ಮ ತಮ್ಮ ಕ್ಷೇತ್ರದ ಸಮಸ್ಯೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : ಧಾರವಾಡ : ಅನ್ ಲಾಕ್ ಮಾಡುವಂತೆ ಜಗದೀಶ್ ಶೆಟ್ಟರ್ ಗೆ ಮನವಿ