ಶಿವಮೊಗ್ಗ: ವಿಮಾನ ನಿಲ್ದಾಣ ಕಾಮಗಾರಿಪೂರ್ಣವಾಗುವ ಹಂತಕ್ಕೆ ಬಂದಿದ್ದು, ಡಿಸೆಂಬರ್‌ನಿಂದ ವಿಮಾನ ಹಾರಾಟ ಆರಂಭವಾಗಲಿದೆ ಎಂದುಸಂಸದ ಬಿ.ವೈ. ರಾಘವೇಂದ್ರ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ,ಜೂನ್ ಒಳಗೆ ರನ್ ವೇ ಕಾರ್ಯ ಪೂರ್ಣವಾಗಲಿದ್ದು,ಜುಲೈನಲ್ಲಿ ಟರ್ಮಿನಲ್ ಪೂರ್ಣಗೊಳ್ಳುವ ನಿರೀಕ್ಷೆಇದೆ.
ಡಿಸೆಂಬರ್ ಕೊನೆಯೊಳಗೆ ವಿಮಾನ ಸಂಚಾರಆರಂಭವಾಗಲಿದೆ ಎಂದರು.ಕೇಂದ್ರ ನಾಗರಿಕ ವಿಮಾನಯಾನ ಸಚಿವರನ್ನುಭೇಟಿಯಾಗಿ ಚರ್ಚೆ ನಡೆಸಿದ್ದೇನೆ. ವಿಮಾನಗಳಮಾರ್ಗ ಕುರಿತು ಪಟ್ಟಿಯನ್ನು ಸಿದ್ಧಪಡಿಸಿಕೊಟ್ಟಿದ್ದೇನೆ.ಇದರಿಂದ ಜಿಲ್ಲೆಯ ಜನತೆಗೆ ಮತ್ತುಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗಲಿದೆ.ವಿಮಾನಗಳ ಹಾರಾಟದ ಮಾರ್ಗಗಳು ಕೂಡಶೀಘ್ರ ನಿರ್ಧಾರವಾಗಲಿದ್ದು, ಈ ಸಂಬಂಧ ಟೆಂಡರ್‌ಪ್ರಕ್ರಿಯೆ ಹಂತದಲ್ಲಿದೆ ಎಂದರು.
ಕೇಂದ್ರ ಸಚಿವರು ತಕ್ಷಣ ದೂರವಾಣಿ ಮೂಲಕರಾಜ್ಯದ ಅ ಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದು,ವಿಮಾನ ನಿಲ್ದಾಣದ ನಿರ್ವಹಣೆ ಕುರಿತು ಚರ್ಚೆನಡೆಯುತ್ತಿದೆ. ನಿರ್ವಹಣೆ ಜವಾಬ್ದಾರಿಯನ್ನುರಾಜ್ಯ ಸರ್ಕಾರ ಹೊತ್ತುಕೊಳ್ಳಬೇಕೋಅಥವಾ ವಿಮಾನ ನಿಲ್ದಾಣ ಪ್ರಾ ಧಿಕಾರವಹಿಸಿಕೊಳ್ಳಬೇಕೆನ್ನುವ ಕುರಿತು ಚರ್ಚೆನಡೆದಿದೆ.
ಮುಂದಿನ ವಾರ ಈ ಸಂಬಂಧಡ್ರಾಫ್ಟ್ ಸಿದ್ಧವಾಗಲಿದೆ ಎಂದರು.2022 -23 ನೇ ಸಾಲಿನ ಕೇಂದ್ರ ಬಜೆಟ್‌ಪ್ರಧಾನಿ ಮೋದಿ ಅವರ “ಸಬ್ ಕಾ ಸಾಥ್ ಸಬ್ ಕಾವಿಕಾಸ್’ ಘೋಷವಾಕ್ಯದಡಿ ದೇಶದ ಸವಾಂìಗೀಣಅಭಿವೃದ್ಧಿಗೆ ಪೂರಕವಾದ ಹಾಗೂ ಮುಂದಿನ25 ವರ್ಷಗಳ ಭವಿಷ್ಯ ದೃಷ್ಟಿಯಲ್ಲಿಟ್ಟುಕೊಂಡುನೀಲನಕ್ಷೆ ಸಿದ್ಧಪಡಿಸಿ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಅವರು ಈ ಬಾರಿಯ ಬಜೆಟ್‌ನ್ನುಮಂಡಿಸಿದ್ದಾರೆ ಎಂದು ಹೇಳಿದರು.ದೇಶದ ಆರ್ಥಿಕ ಭದ್ರತೆಗೆ ಭದ್ರ ಬುನಾದಿಯನ್ನುಈ ಬಜೆಟ್ ಹಾಕಲಿದ್ದು, 36.5 ಲಕ್ಷ ಕೋಟಿ ರೂ.ಗಾತ್ರದ ಬಜೆಟ್ ಮಂಡನೆ ಮಾಡಲಾಗಿದೆ.
ಅತ್ಯಂತದೂರದೃಷ್ಟಿಯುಳ್ಳ ಬಜೆಟ್ ಇದಾಗಿದ್ದು, ರೈತರು,ಮಧ್ಯಮ ವರ್ಗದವರು ಸೇರಿದಂತೆ ಎಲ್ಲಾ ವಲಯಕ್ಕೆಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ ಎಂದರು.ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆಮಾಡಿಲ್ಲ. ಅಲ್ಲದೆ ಹೆಚ್ಚಿನ ಹೊರೆಯನ್ನು ಕೂಡವಿ ಧಿಸಿಲ್ಲ. ಬಂಡವಾಳ ವೆಚ್ಚದಲ್ಲಿ ಶೇ. 35.4ರಷ್ಟು ಏರಿಕೆಯಾಗಿದೆ. ಕೋವಿಡ್‌ನಂತಹಸಂಕಷ್ಟದ ಸಂದರ್ಭದಲ್ಲಿ ಆರ್ಥಿಕತೆಚೇತರಿಸಿಕೊಳ್ಳುವ ನಿಟ್ಟಿನಲ್ಲಿ ಬಜೆಟ್ ಮಂಡನೆಅತ್ಯಂತ ಸ್ವಾಗತಾರ್ಹವಾಗಿದೆ ಎಂದರು