ಶಿವಮೊಗ್ಗ: ಶೀಘ್ರದಲ್ಲಿ ಆರಂಭಗೊಳ್ಳಲಿರುವ ಸೋಗಾನೆವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸುವಪೂರ್ವದಲ್ಲಿ ಶಿವಮೊಗ್ಗದಿಂದ ದೇಶದ ಬೇರೆ-ಬೇರೆವಿಮಾನ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಸಂಬಂಧವಿಮಾನ ಸಂಚಾರಕ್ಕೆ ಅನುಕೂಲವಾಗುವಂತೆ ಕೂಡಲೇಟೆಂಡರ್ ಪ್ರಕ್ರಿಯೆಯನ್ನು ಆರಂಭಗೊಳಿಸುವಂತೆಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ನಾಗರಿಕವಿಮಾನಯಾನ ಖಾತೆ ಸಚಿವ ಜ್ಯೋತಿರಾದಿ ತ್ಯ ಸಿಂಧ್ಯಾಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣ ಸದ್ಯದಲ್ಲೇ ಲೋಕಾರ್ಪಣೆಗೊಳ್ಳಲಿದೆ. ಇದು ಬೆಂಗಳೂರುಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ರಾಜ್ಯದಎರಡನೇ ಅತಿ ಉದ್ದವಿರುವ ರನ್‌ವೇ ಹೊಂದಿದ್ದು, ಶಿವಮೊಗ್ಗ ಜಿಲ್ಲೆ ಕರ್ನಾಟಕ ಭೂಪಟದ ಮಧ್ಯಭಾಗದಲ್ಲಿಇರುತ್ತದೆ.
ಆದ್ದರಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆಆದಷ್ಟು ಬೇಗ ಮಲ್ಟಿ ಡಿಸಿಪ್ಲಿನರಿ ಟೀಮ್ ಕೂಡಲೇಕಳುಹಿಸಿಕೊಡುವುದು, ಎಲೆಕ್ಟ್ರಿಕ್ ಇಕ್ಯೂಪೆ¾ಂಟ್‌ಫಂಡಿಂಗ್ ಹಾಗೂ ಆರ್‌ಸಿಎಸ್ ಉಡಾನ್ 4.2ಯೋಜನೆ ಅಡಿ ಶಿವಮೊಗ್ಗ ಜಿಲ್ಲೆ ಹಾಗೂ ನೆರೆಯಜಿಲ್ಲೆಗಳ ಜನರಿಗೆ ದೇಶದ ಮಹಾನಗರಗಳಿಗೆ ಹೋಗಿಬರಲು ಮತ್ತು ವ್ಯಾಪಾರ ಹಾಗೂ ಪ್ರವಾಸೋದ್ಯಮಸಲುವಾಗಿ ಬರುವ ಪ್ರಯಾಣಿಕರಿಗೆ ಉತ್ತೇಜನ ನೀಡುವಸಲುವಾಗಿ ಶಿವಮೊಗ್ಗ ವಿಮಾನ ನಿಲ್ದಾಣ ಮೂಲಕದೇಶದ 11 ಪ್ರಮುಖ ನಗರಗಳ ವಿಮಾನ ನಿಲ್ದಾಣಕ್ಕೆಜೋಡಣೆ ಮಾಡುವ ಮಾರ್ಗಗಳಾದ ಮುಂಬಯಿ-ಶಿವಮೊಗ್ಗ- ಮುಂಬಯಿ, ಮುಂಬಯಿ – ಶಿವಮೊಗ್ಗ-ಮಂಗಳೂರು, ಮುಂಬಯಿ- ಶಿವಮೊಗ್ಗ- ಚೆನ್ನೈ,ಮುಂಬಯಿ- ಶಿವಮೊಗ್ಗ- ತಿರುಪತಿ, ಶಿವಮೊಗ್ಗ-ಗುಲ್ಬರ್ಗಾ- ಹೈದ್ರಾಬಾದ್, ಶಿವಮೊಗ್ಗ- ಗುಲ್ಬರ್ಗಾ-ದೆಹಲಿ, ಬೆಂಗಳೂರು- ಶಿವಮೊಗ್ಗ- ಬೆಳಗಾವಿ,ಬೆಂಗಳೂರು-ಶಿವಮೊಗ್ಗ-ದೆಹಲಿ ಮತ್ತು ಬೆಂಗಳೂರು-ಶಿವಮೊಗ್ಗ-ಗೋವಾ ಹಾಗೂ ಹೈದ್ರಾಬಾದ್-ಶಿವಮೊಗ್ಗ- ಕೊಚ್ಚಿನ್ ಮಾರ್ಗಗಳ ವಿಮಾನ ಸಂಚಾರಕ್ಕೆಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಸಚಿವರನ್ನುಒತ್ತಾಯಿಸಿದರು.