ಶಿವಮೊಗ್ಗ: ಪದವಿ, ಸ್ನಾತಕೋತ್ತರ ಮುಗಿಸಿದ ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಾಗಿದ್ದ ಘಟಿಕೋತ್ಸವ ಪ್ರಮಾಣ ಪತ್ರ ನೀಡಲು ಕುವೆಂಪು ವಿವಿ ಇನ್ನೂತಿಣುಕಾಡುತ್ತಿದೆ. ಪದವಿ ಮುಗಿಸಿ ವರ್ಷ ಕಳೆದರೂ ಘಟಿಕೋತ್ಸವ ನಡೆದಿಲ್ಲ. ಹೀಗಾಗಿ ಕೆಲಸ ಸಿಕ್ಕವರು,ವಿದೇಶದಿಂದ ಓದಲು ಬಂದವರು, ವಿದೇಶಕ್ಕೆಓದಲು ಹೋಗಬೇಕಾದವರು ಪ್ರಮಾಣಪತ್ರ ಇಲ್ಲದೆಪರದಾಡುತ್ತಿದ್ದಾರೆ.2020ರ ಜುಲೈನಲ್ಲಿ ಕುವೆಂಪು ವಿವಿ ಘಟಿಕೋತ್ಸವನಡೆಸಿತ್ತು.
ಕೋವಿಡ್ ಹಿನ್ನೆಲೆಯಲ್ಲಿ ಆನ್‌ಲೈನ್‌ಕಾರ್ಯಕ್ರಮ ನಡೆಸಿ ಬೆರಳೆಣಿಕೆ ರ್‍ಯಾಂಕ್ ವಿಜೇತರಿಗೆ ವೇದಿಕೆಯಲ್ಲಿ ಪದವಿ ಪ್ರದಾನ ಮಾಡಲಾಗಿತ್ತು.ಆದರೆ 2021ನೇ ಸಾಲಿಗೆ ಅಕ್ಟೋಬರ್‌ನಲ್ಲಿಘಟಿಕೋತ್ಸವ ನಡೆಸಲು ತೀರ್ಮಾನ ಮಾಡಲಾಗಿತ್ತು.ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಂಗಳಕೊನೆಗೆ ಬರುವುದಾಗಿ ಭರವಸೆ ನೀಡಿದ್ದರು.
ಜನವರಿ ಮುಗಿದರೂ ಅವರ ಸಮಯ ಸಿಕ್ಕಿಲ್ಲ. ಆದರೆ ನಿರ್ಮಲಾರನ್ನು ಕರೆಸಲೇಬೇಕೆಂಬ ಹಠ ತೊಟ್ಟಿರುವವಿವಿ ಘಟಿಕೋತ್ಸವ ಮುಂದೂಡತ್ತ ಬಂದಿದೆ. ಕೇಂದ್ರ ಬಜೆಟ್ ಸಮಯವಾಗಿದ್ದ ಜನವರಿಯಲ್ಲಿ ಸಚಿವರುಬರುವುದು ಖಂಡಿತ ಸಾಧ್ಯವಿರಲಿಲ್ಲ.
ಆದರೆಈಗ ಬಜೆಟ್ ಮುಗಿದಿದ್ದು ಇನ್ನಾದರೂ ಸಚಿವರುಬಂದು ಘಟಿಕೋತ್ಸವ ನಡೆಯಲಿದೆಯೇ ಎಂದುವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಪದವಿ ಮುಗಿಸಿದರೂಪ್ರಮಾಣಪತ್ರಕ್ಕೆ ಇನ್ನೂ ಎಷ್ಟು ದಿನ ಕಾಯಬೇಕುಎಂಬುದು ವಿದ್ಯಾರ್ಥಿಗಳ ಪ್ರಶ್ನೆ.
ಶರತ್ ಭದ್ರಾವತಿ