Advertisement

ಗ್ರಾಮಗಳಲ್ಲಿ ರೈತರನ್ನು ಸಂಘಟಿಸುವ ಸಂಸ್ಥೆ ರಚಿಸಿ

01:36 PM Jan 30, 2022 | Adarsha |

ಶಿವಮೊಗ್ಗ: ರೈತರು ದೇಶದ ಶಕ್ತಿ. ರೈತರ ಜೀವನಸುಧಾರಿಸುವ ಅಭಿವೃದ್ಧಿ ಆಗುವ ಯೋಜನೆಗಳನ್ನುಪ್ರತಿಯೊಂದು ಗ್ರಾಮಗಳಿಗೂ ತಲುಪಿಸುವ ಕೆಲಸಆಗಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಶಿವಮೊಗ್ಗ ತಾಲೂಕಿನ ಮತ್ತೂರಿನಲ್ಲಿ ರಾಷ್ಟ್ರೀಯಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌, ಚೈತನ್ಯರೂರಲ್‌ ಡೆವಲಪ್‌ಮೆಂಟ್‌ ಸೊಸೈಟಿ ಸಹಯೋಗದಲ್ಲಿಆಯೋಜಿಸಿದ್ದ ಸಂಜೀವಿನಿ ಮತ್ತೂರು ರೈತ ಉತ್ಪಾದಕಕಂಪನಿ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಗ್ರಾಮಗಳಲ್ಲಿ ರೈತರನ್ನು ಸಂಘಟಿಸುವ ಸಂಸ್ಥೆಗಳರಚನೆ ಆಗಬೇಕು. ರೈತರ ಆದಾಯ ಹೆಚ್ಚಿಸುವಜತೆಯಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳುವಂತಹಕಾರ್ಯಕ್ರಮಗಳನ್ನು ಎಲ್ಲ ರೈತರಿಗೂ ತಲುಪಿಸಬೇಕು.ಗ್ರಾಮಗಳ ಅಭಿವೃದ್ಧಿ, ರೈತರ ಅಭಿವೃದ್ಧಿಯಿಂದ ದೇಶದಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.

ಚೈತನ್ಯ ರೂರಲ್‌ ಡೆವಲಪ್‌ಮೆಂಟ್‌ ಸೊಸೈಟಿಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಬಿ.ಟಿ. ಬದ್ರೀಶ್‌ಮಾತನಾಡಿ, ರೈತ ಉತ್ಪಾದಕ ಸಂಸ್ಥೆಯ ಮುಖಾಂತರರೈತರಿಗೆ ನೆರವಾಗುವ ಕೆಲಸ ಮಾಡಲಾಗುತ್ತಿದೆ.ಶಿಕಾರಿಪುರ, ಸೊರಬದಲ್ಲಿ ಈಗಾಗಲೇ ರೈತ ಉತ್ಪಾದಕಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ.

ಇದೀಗಸಂಜೀವಿನಿ ಹೆಸರಿನಲ್ಲಿ ಮತ್ತೂರಿನಲ್ಲಿ ರೈತ ಉತ್ಪಾದಕಕಂಪನಿ ಆರಂಭಿಸಲಾಗುತ್ತಿದೆ ಎಂದು ಹೇಳಿದರು.ಗೋವುಗಳ ರಕ್ಷಣೆ ಮಾಡುವುದು ಮೊದಲಆದ್ಯತೆಯಾಗಿದೆ. ಆರೋಗ್ಯವಾದ ಗೋವುಗಳಿಂದಆರೋಗ್ಯಕರ ಹಾಲು ಉತ್ಪಾದನೆ ಮಾಡಬೇಕೆನ್ನುವುದುಆಶಯವಾಗಿದೆ.

Advertisement

ಕೃಷಿಗೆ ಪೂರಕವಾದ ಪರಿಕರಗಳುರೈತರಿಗೆ ನೇರವಾಗಿ ಸಿಗುವಂತೆ ಸೌಲಭ್ಯಕಲ್ಪಿಸಬೇಕೆನ್ನುವುದು ಮತ್ತೂಂದು ಆಶಯ ಎಂದುತಿಳಿಸಿದರು.ರೈತ ಉತ್ಪಾದಕ ಕಂಪನಿಗಳಿಂದ ಪ್ರತಿಗ್ರಾಮಗಳಲ್ಲಿಯೂ ರೈತ ಸಂಘಟನೆ ಬಲಿಷ್ಠವಾಗುತ್ತದೆ.ರೈತ ಉತ್ಪಾದಕ ಕಂಪನಿಗಳಿಂದ ವ್ಯವಸ್ಥಿತವಾಗಿಕಾರ್ಯಕ್ರಮಗಳು ಅನುಷ್ಠಾನಗೊಳ್ಳುತ್ತವೆ.

ರೈತರಜೀವನಕ್ಕೆ ಕಂಪನಿಗಳು ಸಹಕಾರಿ ಆಗುತ್ತವೆ ಎಂದುಅಭಿಪ್ರಾಯಪಟ್ಟರು. ಸಂಜೀವಿನಿ ಮತ್ತೂರು ರೈತಉತ್ಪಾದಕ ಕಂಪನಿ ನಿರ್ದೇಶಕ ಜೆ.ಶಿವನಂಜಪ್ಪಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕಸಂಘದ ದಕ್ಷಿಣ ಸಹ ಪ್ರಾಂತ ಕಾರ್ಯವಾಹಪಟ್ಟಾಭಿರಾಮ್‌, ವಿಧಾನ ಪರಿಷತ್‌ ಮಾಜಿ ಸದಸ್ಯಎಂ.ಬಿ. ಭಾನುಪ್ರಕಾಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next