Advertisement

473 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ

09:46 PM Jan 19, 2022 | Adarsha |

ಶಿವಮೊಗ್ಗ: ಶಿವಮೊಗ್ಗ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ473 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ನಗರವನ್ನುಸ್ವತ್ಛ ಹಾಗೂ ಸುಂದರವಾಗಿ ರೂಪಿಸಲಾಗುವುದುಎಂದು ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.ಸ್ಮಾರ್ಟ್‌ ಸಿಟಿ ಕಾಮಗಾರಿ ವೀಕ್ಷಿಸಿದ ನಂತರಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ. 61ರಷ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿವೆ.

Advertisement

ಇನ್ನುಳಿದ ಕಾಮಗಾರಿಗಳನ್ನು ಕಾಲಮಿತಿಯಲ್ಲಿಪೂರ್ಣಗೊಳಿಸುವುದಾಗಿ ಹೇಳಿದರು.ಕುವೆಂಪು ರಸ್ತೆ ಕಾಮಗಾರಿ ಕೂಡಪ್ರಗತಿಯಲ್ಲಿದ್ದು, ಇನ್ನು 10 ದಿನಗಳಲ್ಲಿ ಆ ಕೆಲಸಕೂಡ ಮುಕ್ತಾಯವಾಗಲಿದೆ. ಈಗಾಗಲೇಅಭಿವೃದ್ಧಿಪಡಿಸಿರುವ ಪಾರ್ಕ್‌ಗಳು ಕೂಡ ಅತ್ಯಂತಸುಂದರವಾಗಿ ನಿರ್ಮಾಣವಾಗಿವೆ.

ಅವುಗಳನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿತಿಳಿಸಿದರು. ರಾಜ್ಯದಲ್ಲಿ ಶಿವಮೊಗ್ಗ ನಗರಅಭಿವೃದ್ಧಿಯಲ್ಲಿ 14 ನೇ ಸ್ಥಾನದಲ್ಲಿದೆ. 100ಬಸ್‌ ಶೆಲ್ಟರ್‌ ನಿರ್ಮಿಸಲು ಉದ್ದೇಶಿಸಿದ್ದು,46 ಪೂರ್ಣಗೊಂಡಿವೆ. 26 ಕಾಮಗಾರಿಗಳುಮುಗಿದಿದ್ದು, ಕೆಲವು ಕಾಮಗಾರಿಗಳುಅಂತಿಮ ಹಂತದಲ್ಲಿವೆ. ಇವುಗಳನ್ನು ತ್ವರಿತವಾಗಿಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.ನಗರದ ವಿವಿಧ ಕಡೆ ರಸ್ತೆ, ಚರಂಡಿ, ಫುಟ್‌ ಪಾತ್‌ಸೇರಿದಂತೆ ವಿವಿಧ ಕಡೆ ಕಾಮಗಾರಿ ಪರಿಶೀಲನೆನಡೆಸಿದ ಸಚಿವರು ಕಾಮಗಾರಿಯಲ್ಲಿ ಗುಣಮಟ್ಟಕಾಯ್ದುಕೊಳ್ಳಬೇಕೆಂದು ಸೂಚಿಸಿದರು.

ಕೆಲವೆಡೆಕಾಮಗಾರಿ ವಿಳಂಬ ಲೋಪ ಕಂಡು ಬಂದಹಿನ್ನಲೆಯಲ್ಲಿ ಅಧಿ ಕಾರಿಗಳನ್ನು ತರಾಟೆಗೆತೆಗೆದುಕೊಂಡರು. ಸಚಿವರು ಅಶೋಕ ವೃತ್ತದಿಂದಆಲ್ಕೊಳ ವೃತ್ತದವರೆಗೆ ರಸ್ತೆ, ಸುವರ್ಣ ಸಂಸƒRತಿಭವನ, ಶಿವಶಂಕರ್‌ ಗ್ಯಾರೇಜ್‌ ಹಿಂಭಾಗದಕನ್ಸರ್‌ ವೆನ್ಸಿ, ಕುವೆಂಪು ರಸ್ತೆ ಸೇರಿದಂತೆ ಇತರಕಡೆ ಕಾಮಗಾರಿ ಪರಿಶೀಲಿಸಿದರು. ಮೇಯರ್‌ಸುನಿತಾ ಅಣ್ಣಪ್ಪ, ಆಡಳಿತ ಪಕ್ಷದ ನಾಯಕಎಸ್‌.ಎನ್‌. ಚನ್ನಬಸಪ್ಪ, ಜ್ಞಾನೇಶ್ವರ್‌, ಆಯುಕ್ತಚಿದಾನಂದ ವಠಾರೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next