Advertisement

ಶಿಮುಲ್‌ಗೆ ಶ್ರೀಪಾದ ಹೆಗಡೆ ನೂತನ ಸಾರಥಿ

05:29 PM Jan 02, 2022 | Adarsha |

ಶಿವಮೊಗ್ಗ: ಶಿಮುಲ್‌ (ಶಿವಮೊಗ್ಗ, ದಾವಣಗೆರೆ,ಚಿತ್ರದುರ್ಗ) ಹಾಲು ಒಕ್ಕೂಟದ ನೂತನಅಧ್ಯಕ್ಷರಾಗಿ ಶ್ರೀಪಾದ ಹೆಗಡೆ ನಿಸರಾಣಿ ಅವಿರೋಧಆಯ್ಕೆಯಾಗಿದ್ದಾರೆ.14 ಮಂದಿ ನಿರ್ದೇಶಕರಿರುವ ಶಿಮಲ್‌ನಲ್ಲಿಡಿ.ಆನಂದ್‌ ಪದಚ್ಯುತಿಯಿಂದ ತೆರವಾಗಿದ್ದ ಅಧ್ಯಕ್ಷಸ್ಥಾನಕ್ಕೆ ಸೊರಬದ ಶ್ರೀಪಾದ ಹೆಗಡೆ ಹಾಗೂಚಿತ್ರದುರ್ಗದ ತಿಪ್ಪೇಸ್ವಾಮಿ ನಾಮಪತ್ರ ಸಲ್ಲಿಸಿದ್ದರು.ಅಂತಿಮವಾಗಿ ತಿಪ್ಪೇಸ್ವಾಮಿಗೆ ಬೆಂಬಲ ಸಿಗದ ಕಾರಣನಾಮಪತ್ರ ಹಿಂಪಡೆದರು.

Advertisement

ಈ ಮೂಲಕ ಶ್ರೀಪಾದಹೆಗಡೆಯವರು 21 ವರ್ಷದ ನಂತರ ಎರಡನೇ ಬಾರಿಶಿಮುಲ್‌ ಅಧ್ಯಕ್ಷರಾದರು. 2000ನೇ ಇಸವಿಯಲ್ಲಿಶ್ರೀಪಾದ ಹೆಗಡೆಯವರು 11 ತಿಂಗಳ ಕಾಲಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.ಕೊನೆಗೂ ಬಿತ್ತು ತೆರೆ: ನ.20ರಂದು ಅಧ್ಯಕ್ಷ ಸ್ಥಾನಕ್ಕೆದಿನಾಂಕ ನಿಗದಿಯಾಗಿತ್ತು.

ಆದರೆ ನ.19ರಂದುಎಂಎಲ್‌ಸಿ ಚುನಾವಣೆ ನೆಪ ಹೇಳಿ ಚುನಾವಣೆಮುಂದೂಡಲಾಗಿತ್ತು. ಆದರೆ ವಾಸ್ತವದಲ್ಲಿ ಅಧ್ಯಕ್ಷಸ್ಥಾನದ ಆಕಾಂಕ್ಷಿಯೊಬ್ಬರು ಡಿಸಿಸಿ ಬ್ಯಾಂಕ್‌ಪ್ರಕರಣದಲ್ಲಿ ಅಮಾನತುಗೊಂಡಿದ್ದ ಪರಿಣಾಮಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿರಲಿಲ್ಲ.ಕೊನೆಗೆ ಚುನಾವಣೆ ಮುಂದೂಡಲುಯಶಸ್ವಿಯಾದರು. ಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆಸಿಕ್ಕಿದ್ದರಿಂದ ಅಧ್ಯಕ್ಷರಾಗುವ ಕನಸು ನನಸಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಅಡ್ಡಿಯಾಗಿದ್ದ ಇಬ್ಬರುನಿರ್ದೇಶಕರನ್ನು ಬೇರೆ ಕಾರಣ ನೀಡಿಅಮಾನತುಗೊಳಿಸಲಾಗಿದೆ ಎಂಬ ಆರೋಪಗಳುಕೇಳಿಬಂದಿದ್ದು ಇಬ್ಬರು ನಿರ್ದೇಶಕರು ಆಕ್ರೋಶಹೊರಹಾಕಿದ್ದಾರೆ. ಒಟ್ಟಾರೆ ಆರು ತಿಂಗಳಿನಿಂದನಡೆಯುತ್ತಿದ್ದ ಹೈಡ್ರಾಮಾಕ್ಕೆ ತೆರೆಬಿದ್ದಿದ್ದು ನÐದಲ್ಲಿರುÊ ‌r ‌ಒಕ್ಕೂಟ ಮೇಲೇಳುವುದೇ? ಬಿಜೆಪಿ ಬೆಂಬಲಿತಅಧ್ಯಕ್ಷರಿಂದ ನೂರಾರು ಕೋಟಿ ಯೋಜನೆಗಳಿಗೆಸರಕಾರದ ನೆರವು ಸಿಗುವುದೇ ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next