Advertisement

ಅಡಕೆ ಬೆಳೆಗಾರರ ಸಮಸ್ಯೆಗೆ ಫೈಬರ್‌ ದೋಟಿ ವರ: ಆರಗ

03:35 PM Dec 29, 2021 | Adarsha |

ಶಿವಮೊಗ್ಗ: ರೈತರು ಎದುರಿಸುತ್ತಿರುವ, ಅಡಕೆಕೊನೆ ತೆಗೆಯುವ ಸಮಸ್ಯೆಗೆ ಕಾರ್ಬನ್‌ ಫೈಬರ್‌ದೋಟಿ ವರವಾಗಲಿದೆ ಎಂದು ಗೃಹ ಸಚಿವಆರಗ ಜ್ಞಾನೇಂದ್ರ ಹೇಳಿದರು.ಮಂಗಳವಾರ ಮಲೆನಾಡು ಕೃಷಿಕರಸಮುದಾಯ, ಕೆಳದಿ ಶಿವಪ್ಪ ನಾಯಕ ಕೃಷಿಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ,ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘದಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಬನ್‌ ಫೈಬರ್‌ದೋಟಿಯಲ್ಲಿ ಅಡಕೆ ಕೊನೆ ಕೊಯ್ಯುವ ತರಬೇತಿಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿಅವರು ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ರೈತರು ಅಡಕೆಕೊನೆ ಕೀಳುವ ವಿಚಾರದಲ್ಲಿ ಬಹಳ ಸಮಸ್ಯೆಎದುರಿಸುತ್ತಿದ್ದಾರೆ.

Advertisement

ಕೊನೆ ಕೀಳುವ ಕಾಯಕದಲ್ಲಿಹಲವು ಕಾರ್ಮಿಕರು ಆಕಸ್ಮಿಕವಾಗಿ ಮರದಮೇಲಿನಿಂದ ಬಿದ್ದು ಅಮೂಲ್ಯ ಪ್ರಾಣಕಳೆದುಕೊಂಡಿದ್ದಾರೆ. ಇದಕ್ಕೆಲ್ಲವರದಾನವೆಂಬಂತೆ ಅತ್ಯಂತ ಹಗುರವಾದಹಾಗೂ ಬಹಳ ಉಪಯೋಗವಾಗುವಕಾರ್ಬನ್‌ ದೋಟಿಯ ಆವಿಷ್ಕಾರ ಆಗಿದೆಎಂದರು. ಹಾಗೂ ಇದಕ್ಕಾಗಿ ಶ್ರಮಿಸಿದ ಯುವಸಂಶೋಧನಾಕಾರರು ಅಭಿನಂದನೀಯರುಎಂದರು.ಸಾಮಾನ್ಯ ರೈತರೂ ಈ ವಿನೂತನ ದೋಟಿಪಡೆಯಲು ಅನುಕೂಲವಾಗುವಂತೆ ಕೃಷಿಹಾಗೂ ತೋಟಗಾರಿಕೆ ಇಲಾಖೆಯಿಂದರಿಯಾಯಿತಿ ದರದಲ್ಲಿ ಮಾರಾಟ ಮಾಡಲುವ್ಯವಸ್ಥೆ ಮಾಡಲಾಗುವುದು ಎಂದೂ ಸಚಿವರುತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಅಡಕೆಯಿಂದಹತ್ತು ಹಲವು ಇತರ ಉತ್ಪನ್ನಗಳು ಹೊರಬರುತ್ತಿರುವುದು ಅತ್ಯಂತ ಸಂತೋಷದ ವಿಚಾರ.ಕೃಷಿಕರ ಬದುಕನ್ನು ಸಹನೀಯ ಗೊಳಿಸಲುಹಲವಾರು ವ್ಯಕ್ತಿಗಳು ಹಾಗೂ ಸಂಸ್ಥೆಗಳುಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.ಈ ಸಂದರ್ಭದಲ್ಲಿ ಕೂಳೂರುಸತ್ಯನಾರಾಯಣ್‌ ರಾವ್‌, ಖ್ಯಾತ ಸಾಹಿತಿ ಮತ್ತುಛಾಯಾಚಿತ್ರ ಗ್ರಾಹಕ ಪಡ್ರೆ, ಆಡಿ ರವಿಕುಮಾರ್‌ಹಾಗೂ ಇತರರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next