ಶಿವಮೊಗ್ಗ: ಆನೆ ಕಾರಿಡಾರ್ ಬ್ರೇಕ್ ಆದ ನಂತರ 15ಕ್ಕೂ ಹೆಚ್ಚುಕಾಡಾನೆಗಳು ಶಿವಮೊಗ್ಗ ಸುತ್ತಮುತ್ತ ಬೀಡುಬಿಟ್ಟಿದ್ದು ರೈತರಿಗೆಸಂಕಷ್ಟ ಎದುರಾಗಿದೆ.ಮಲೆನಾಡು ಭಾಗದಲ್ಲಿ ಕಾಡಾನೆ ಕಾಟ ಹೆಚ್ಚಾಗಿದ್ದು ರೈತರಿಗೆಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ.
ಜಲಾಶಯಗಳುರೈತರಿಗೆ ವರದಾನವೂ ಹೌದು, ಶಾಪವೂ ಹೌದು ಎಂಬುದಕ್ಕೆಈ ಕಥೆ ಉದಾಹರಣೆ. ಭದ್ರಾ ಜಲಾಶಯ ಡಿಸೆಂಬರ್‌ನಲ್ಲೂಭರ್ತಿಯಾಗಿರುವುದು, ಬಯಲು ಸೀಮೆಗೆ ತುಂಗಾದಿಂದನೀರು ಕೊಂಡೊಯ್ಯುವುದು ಆ ಭಾಗದ ಜನರಿಗೆ ಸಂತಸದವಿಷಯವಾಗಿದೆ. ಆದರೆ ಈ ಯೋಜನೆಗಳಿಂದ ಕಾಡಾನೆಗಳುಕಾರಿಡಾರ್ ತಲುಪಲಾಗದೆ ಜನರಿಗೆ ಉಪಟಳ ನೀಡುತ್ತಿವೆ.ಬೆಂಗಳೂರಿನ ಬನ್ನೇರುಘಟ್ಟದಿಂದ ದಾಂಡೇಲಿವರೆಗೂ ಆನೆಕಾರಿಡಾರ್ ಗುರುತಿಸಲಾಗಿದ್ದು ಈ ಭಾಗದಲ್ಲಿ ಪ್ರತಿ ವರ್ಷಸಂಚರಿಸುತ್ತವೆ.
ಈ ಕಾರಿಡಾರ್‌ನಲ್ಲಿ ಕೊಂಚ ವ್ಯತ್ಯಾಸವಾದರೂಅವು ಗ್ರಾಮಗಳಿಗೆ ನುಗ್ಗುತ್ತವೆ. ಆನೆಗಳ ತ್ರಿಶಂಕು ಪರಿಸ್ಥಿತಿಗೆಅಭಿವೃದ್ಧಿ ಯೋಜನೆಗಳೇ ಕಾರಣ.ಆನೆಗಳು ಓಡಾಡಲು ಅವಕಾಶವಿದ್ದ ಮಾರ್ಗಗಳುಈಗ ಬಂದ್ ಆಗಿವೆ. ಡಿಸೆಂಬರ್‌ನಲ್ಲೂ ಜಲಾಶಯತುಂಬಿರುವುದರಿಂದ ದಾಟಿ ಕಾರಿಡಾರ್ ಸೇರಲು ಆಗುತ್ತಿಲ್ಲ.ಎನ್.ಆರ್. ಪುರ ಮೂಲಕ ಹೋಗಲು ಅವಕಾಶವಿದ್ದರೂ ಮುದ್ದಿನ ಕೊಪ್ಪದಲ್ಲಿ ತುಂಗಾದಿಂದ ಭದ್ರಾಗೆ ನೀರು ತುಂಬಿಸುವಯೋಜನೆ ಕಾಲುವೆ ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದಆನೆಗಳು ಎನ್.ಆರ್. ಪುರ ತಲುಪಲು ತೊಂದರೆಯಾಗುತ್ತಿದೆ.ಸೋಲಾರ್ ಬೇಲಿ, ಟ್ರಂಚ್‌ಗಳು ಹಾಳಾಗಿರುವುದರಿಂದಗ್ರಾಮಗಳಿಗೆ ನುಗ್ಗುತ್ತಿವೆ.
ಭದ್ರಾ ಅಭಯಾರಣ್ಯದಲ್ಲಿಬೀಡುಬಿಟ್ಟಿರುವ 15ಕ್ಕೂ ಹೆಚ್ಚು ಆನೆಗಳು ಈಗ ಕಾಡಂಚಿನಗ್ರಾಮಗಳಿಗೆ ಲಗ್ಗೆ ಇಡುತ್ತಿವೆ. ರಾತ್ರಿ ಹೊತ್ತು ದಾಳಿ ಮಾಡುವಕಾಡಾನೆಗಳು ಕಬ್ಬು, ಭತ್ತ, ಅಡಕೆ, ಬಾಳೆ ತೋಟಗಳನ್ನುನುಂಗಿ ನೀರು ಕುಡಿಯುತ್ತಿವೆ. ಇದರಿಂದ ರೊಚ್ಚಿಗೆದ್ದ ರೈತರುಪ್ರತಿಭಟನೆ ನಡೆಸಿದರೂ ಅರಣ್ಯ ಇಲಾಖೆ ಕೈಕಟ್ಟಿ ಕುಳಿತಿದೆ.ಒತ್ತಡ ಹೆಚ್ಚಾದಾಗ ಪಟಾಕಿ ಹೊಡೆದು ಓಡಿಸಿದರೆ ಒಂದೆರೆಡುದಿನ ಬಿಟ್ಟು ಮತ್ತೆ ಅಲ್ಲಿಗೆ ಬರುತ್ತಿವೆ. ಇದಕ್ಕೆ ಮುಖ್ಯ ಕಾರಣಜಲಾಶಯ ದಾಟುವ ಮಾರ್ಗ ಬಂದ್ ಆಗಿರುವುದು.
ಶರತ್ ಭದ್ರಾವತಿ