Advertisement

ಮುಪ್ಪಾನೆ ಪ್ರಕೃತಿ ಶಿಬಿರದಲ್ಲಿ ಕಪ್ಪೆ ಹಬ್ಬ: ನಾಗರಾಜ್‌

08:16 PM Dec 16, 2021 | Adarsha |

ಶಿವಮೊಗ್ಗ: ಪಶ್ಚಿಮಘಟ್ಟದ ವಿಶಿಷ್ಟ ಜೀವಪ್ರಬೇಧವಾದಕಪ್ಪೆಗಳ ಕುರಿತು ಹೊಸ ತಲೆಮಾರಿನಲ್ಲಿ ಅರಿವು ಮತ್ತುಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿವಮೊಗ್ಗ ವನ್ಯಜೀವಿವಿಭಾಗದ ವತಿಯಿಂದ ಇದೇ ಮೊದಲ ಬಾರಿಗೆ ಕಪ್ಪೆಹಬ್ಬ ಆಯೋಜಿಸಲಾಗಿದೆ ಎಂದು ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾ ಧಿಕಾರಿಐ.ಎಂ. ನಾಗರಾಜ್‌ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯದಲ್ಲೇ ಮೊದಲ ಬಾರಿಗೆ ಕಪ್ಪೆಗಳ ಕುರಿತು ಕಪ್ಪೆಹಬ್ಬವನ್ನು ಶಿವಮೊಗ್ಗ ವನ್ಯಜೀವಿ ವಿಭಾಗವು ಸಾಗರತಾಲೂಕಿನ ಕಾರ್ಗಲ್‌ ನ ಮುಪ್ಪಾನೆ ಪ್ರಕೃತಿ ಶಿಬಿರದಲ್ಲಿಡಿ.18 ಮತ್ತು 19ರಂದು ಆಯೋಜಿಸಲಾಗಿದೆ. ಕಪ್ಪೆಹಬ್ಬದಲ್ಲಿ ಉಭಯವಾಸಿಗಳ ಕುರಿತು ಪರಿಣಿತರವಿಚಾರ ಮಂಡನೆ, ಸಂವಾದ, ಸಾಕ್ಷÂಚಿತ್ರ ಮತ್ತುಛಾಯಾಚಿತ್ರ ಪ್ರದರ್ಶನ,

ಫ್ರಾಗ್‌ ವಾಕ್‌ ಮುಂತಾದಚಟುವಟಿಕೆಗಳು ನಡೆಯಲಿವೆ ಎಂದರು.ಜಗತ್ತಿನ ಅಪರೂಪದ ಕಪ್ಪೆ ಪ್ರಭೇದಗಳ ನೆಲೆವೀಡುಶರಾವತಿ ಕಣಿವೆಯಲ್ಲಿಯೇ ಈ ಹಬ್ಬವನ್ನುನಡೆಸುತ್ತಿರುವ ಮುಖ್ಯ ಉದ್ದೇಶ ಸ್ಥಳೀಯ ಜನರಿಗೆಕಪ್ಪೆಗಳ ಸಂತತಿಯ ವೈವಿಧ್ಯತೆ, ಒಟ್ಟಾರೆ ಜೀವ ವೈವಿಧ್ಯಸರಪಳಿಯಲ್ಲಿ ಅವುಗಳ ಮಹತ್ವ, ಜೀವ ವೈವಿಧ್ಯಸಮತೋಲನ ಕಾಪಾಡುವಲ್ಲಿ ಅವುಗಳ ಪಾತ್ರ ಮತ್ತುಅವುಗಳ ಪರಿಸರದ ಕೊಡುಗೆಯನ್ನು ತಿಳಿಸಿಕೊಡುವಮೂಲಕ ಕಪ್ಪೆಗಳ ಸಂತತಿ ಸಂರಕ್ಷಣೆಯ ನಿಟ್ಟಿನಲ್ಲಿಸ್ಥಳೀಯರನ್ನೂ ಒಳಗೊಳ್ಳುವುದಾಗಿದೆ ಎಂದರು.

ಮುಖ್ಯವಾಗಿ ಕೃಷಿಯಲ್ಲಿ ರಾಸಾಯನಿಕ ಬಳಕೆ,ಕಾಡು ನಾಶ, ಕಾಡಿನೊಳಗೆ ಮಾನವ ಹಸ್ತಕ್ಷೇಪ,ಹವಾಮಾನ ವೈಪರೀತ್ಯದಂತಹ ಕಾರಣಗಳಿಂದಾಗಿಪಶ್ಚಿಮಘಟ್ಟದ ಎಲ್ಲೆಡೆಯಂತೆ ಶರಾವತಿ ಕಣಿವೆಯಲ್ಲಿಕೂಡ ಉಭಯವಾಸಿಗಳ ಅಪರೂಪದ ಪ್ರಭೇದಗಳುಅಳಿವಿನಂಚಿಲ್ಲಿವೆ. ಪರಿಸರದ ಆರೋಗ್ಯ ಸೂಚಕಜೀವಿಗಳು ಎಂದು ಗುರುತಿಸಲಾಗುವ ಕಪ್ಪೆಗಳಅವಸಾನ ನಿಜಕ್ಕೂ ಆತಂಕದ ಬೆಳವಣಿಗೆ. ಆಹಿನ್ನೆಲೆಯಲ್ಲಿ ಆ ವಿಶಿಷ್ಟ ಜೀವಿಯ ಸಂರಕ್ಷಣೆಮತ್ತು ಅದರ ಜೀವ ವೈವಿಧ್ಯದ ಮಹತ್ವದಕುರಿತು ಜನಜಾಗೃತಿಯ ಪ್ರಯತ್ನವಾಗಿ ಕಪ್ಪೆ ಹಬ್ಬಆಯೋಜಿಸಲಾಗಿದೆ ಎಂದರು.

ಈ ಹಬ್ಬದಲ್ಲಿ ಅಂತಾರಾಷ್ಟ್ರೀಯ ಮಟ್ಟದಉಭಯವಾಸಿ ಸಂಶೋಧಕ ವಿಜ್ಞಾನಿ ಡಾ|ಕೆ.ವಿ.ಗುರುರಾಜ್‌, ಉಭಯವಾಸಿ ಸಂರಕ್ಷಣಾತಜ್ಞ ಓಂಕಾರ್‌ ಪೈ, ಡಾ| ಪ್ರೀತಿ ಹೆಬ್ಟಾರ್‌, ಡಾ|ಶೇಷಾದ್ರಿ ಕೆ.ಎಸ್‌, ಡಿಸಿಎಫ್‌ ಬಿ.ಎಂ. ರವೀಂದ್ರಕುಮಾರ್‌, ಡಾ| ವಿನೀತ್‌ಕುಮಾರ್‌ ಮತ್ತಿತರ ತಜ್ಞರುಉಭಯವಾಸಿಗಳ ಕುರಿತ ವಿವಿಧ ಅಧ್ಯಯನಗಳ ಬಗ್ಗೆಮಾತನಾಡಲಿದ್ದಾರೆ. ಅಲ್ಲದೆ, ಅರಣ್ಯ ಇಲಾಖೆ ಮತ್ತುಸಾರ್ವಜನಿಕರ ನಡುವಿನ ವಿವಿಧ ಸಂಶೋಧಕರುಕೂಡ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ ಎಂದರು.

Advertisement

ಡಿ.18ರಂದು ಬೆಳಗ್ಗೆ 11ಗಂಟೆಗೆ ಕಪ್ಪೆ ಹಬ್ಬವನ್ನುರಾಜ್ಯ ಅರಣ್ಯ ಪಡೆಯ ಮುಖ್ಯಸ್ಥರಾದ ಪಿಸಿಸಿಎಫ್‌ಸಂಜಯ್‌ ಮೋಹನ್‌ ಉದ್ಘಾಟಿಸಲಿದ್ದು, ಪಿಸಿಸಿಎಫ್‌(ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗ) ರೀತು ಕಕ್ಕರ್‌ಉಪಸ್ಥಿತರಿರಲಿದ್ದಾರೆ. ಡಿ.19ರ ಮಧ್ಯಾಹ್ನ 12ಗಂಟೆಗೆಸಮಾರೋಪ ಸಮಾರಂಭ ನಡೆಯಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಕಾರ್ಗಲ್‌ನ ಸಹಾಯಕಅರಣ್ಯ ಸಂರಕ್ಷಣಾ ಧಿಕಾರಿ ಪ್ರಕಾಶ್‌, ಶಶಿ ಸಂಪಳ್ಳಿ,ಕಾರ್ತಿಕ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next