Advertisement

ರಾವತ್‌ ಸಾವಿಗೆ ಸಂಭ್ರಮಿಸಿದವರು ಅಯೋಗ್ಯರು

03:56 PM Dec 12, 2021 | Adarsha |

ಶಿವಮೊಗ್ಗ: ಸಿಡಿಎಸ್‌ ಬಿಪಿನ್‌ ರಾವತ್‌ ಸಾವನ್ನುಕೆಲವರು ಸಂಭ್ರಮಿಸಿದ ವಿಚಾರ ಖಂಡನೀಯ.ಕೆಲವರು ವಿಕೃತವಾಗಿ ಸಂಭ್ರಮಿಸುವುದುನೋಡಿದರೆ, ದೇಶದಲ್ಲಿ ಇರೋಕೆಅವರು ಆಯೋಗ್ಯರು ಎಂದು ಸಚಿವಕೆ.ಎಸ್‌.ಈಶ್ವರಪ್ಪ ಹೇಳಿದರು.ಭಾರತ ಮಾತ್ರವಲ್ಲ ಇಡೀವಿಶ್ವವೇ ಇಂದು ದುಖಃದಲ್ಲಿದೆ.

Advertisement

13ಜನ ರಾಷ್ಟ್ರಭಕ್ತರ ಸಾವಿನ ಪ್ರಕರಣತನಿಖೆಯಲ್ಲಿದೆ. ಈ ಸಂದರ್ಭ ಊಹಾಪೋಹಸರಿಯಲ್ಲ. ಆದರೆ ಇದನ್ನು ಸಂಭ್ರಮಿಸುವದೇಶದ್ರೋಹಿಗಳ ವಿರುದ್ಧ ಬಿಗಿಯಾದಕ್ರಮಕೈಗೊಳ್ಳುವ ದಿನ ಬರುತ್ತದೆ. ರಾಜ್ಯದಸಿಎಂ ಬೊಮ್ಮಾಯಿ ಕೂಡ ಬಿಗಿಯಾದಕ್ರಮಕ್ಕೆ ತೀರ್ಮಾನ ಕೈಗೊಂಡಿದ್ದಾರೆ.

ಕೇಂದ್ರತನಿಖೆಯ ಜತೆಗೆ ದೇಶದ್ರೋಹಿಗಳ ವಿರುದ್ಧಕ್ರಮ ಕೈಗೊಳ್ಳಲಾಗುತ್ತದೆ ಎಂದರು.ಚಳಿಗಾಲದ ಅಧಿ ವೇಶನ ವೇಳೆ ಹಲವುಸಂಘಟನೆಗಳಿಂದ ಹೋರಾಟ ನಡೆಯುವವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದಅವರು, ದೇಶದಲ್ಲಿ ಎಲ್ಲರೂ ಹೋರಾಟಮಾಡಲಿಕ್ಕೆ ಸ್ವಾತಂತ್ರ ಇದೆ. ಬೇಡಿಕೆಈಡೇರಿಸಿಕೊಳ್ಳಲು ವ್ಯವಸ್ಥಿತ ಸ್ವಾತಂತ್ರಇದ್ದು, ಅದನ್ನು ಬಳಸಿಕೊಳ್ಳಿ. ಅದಕ್ಕೂಮುನ್ನ ಸಂಬಂಧಪಟ್ಟ ಇಲಾಖೆಯ ಸಚಿವರ ಗಮನಕ್ಕೆ ತಂದು ಚರ್ಚೆಮಾಡಲಿ. ಆಗಲೂ ಅದುಬಗೆಹರಿಯದಿದ್ದರೆ ಹೋರಾಟಮಾಡುವುದು ಸೂಕ್ತ ಎಂದರು.

ಪರಿಷತ್‌ ಕ್ಷೇತ್ರದಲ್ಲಿ ನೂರಕ್ಕೆ ನೂರು ನಾವುಗೆಲ್ಲುತ್ತೇವೆ. ಪಕ್ಷ ಮರೆತು, ಪ್ರತಿ ಮತದಾರನಬಳಿ ತೆರಳಿ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಕಾಯ್ದೆ ಜಾರಿಗೆ ತರಲು ಬೆಂಬಲಬೇಕೆಂದು ಮನವಿ ಮಾಡಿದ್ದೇವೆ. ಕಾಂಗ್ರೆಸ್‌,ಜೆಡಿಎಸ್‌ನವರು ಬೆಂಬಲ ನೀಡಿದ್ದಾರೆ.ಮುಸಲ್ಮಾನರು, ಹಿಂದುಳಿದವರು, ದಲಿತರುಬಿಜೆಪಿಗೆ ಬೆಂಬಲ ಕೊಟ್ಟಿದ್ದಾರೆ. ರಾಜ್ಯದಲ್ಲಿಕನಿಷ್ಠ 15 ಸ್ಥಾನದಲ್ಲಿ ನಾವು ಗೆಲೆ¤àವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next