ಶಿವಮೊಗ್ಗ: ವಿವಿಧ ಇಲಾಖೆಗಳಕಾಮಗಾರಿ ಗುತ್ತಿಗೆಯಲ್ಲಿ ಶೇ. 40 ರಷ್ಟುಕಮಿಷನ್ ಪಡೆಯಲಾಗುತ್ತಿದೆ ಎಂಬಚರ್ಚೆ ನಡೆಯುತ್ತಿದ್ದು, ಮಾಜಿ ಸಿಎಂಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ,ಬಿ.ಎಸ್.ಯಡಿಯೂರಪ್ಪ, ಹಾಗೂಹಾಲಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರ ಆಡಳಿತದಲ್ಲಿ ನಡೆದಎಲ್ಲಾ ಕಾಮಗಾರಿಗಳ ಬಗ್ಗೆ ಸಂಪೂರ್ಣತನಿಖೆಯಾಗಬೇಕೆಂದು ಸೋಷಿಯಲ್‌ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್.ಡಿ.ಪಿ.ಐ.) ಜಿಲ್ಲಾ ಶಾಖೆಒತ್ತಾಯಿಸಿದೆ.ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿಎಸ್.ಡಿ.ಪಿ.ಐ. ಜಿಲ್ಲಾ ಪ್ರಧಾನಕಾರ್ಯದರ್ಶಿ ಅಬ್ದುಲ್ ಮಜೀದ್‌ಮಾತನಾಡಿ, ಈ ತನಿಖೆಯನ್ನು ಹೈಕೋರ್ಟ್‌ಹಾಲಿ ನ್ಯಾಯಾಧಿಧೀಶರ ನೇತೃತ್ವದಲ್ಲಿಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು.ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾಮಗಾರಿ ಗುತ್ತಿಗೆಯಲ್ಲಿ ಶೇ. 40 ರಷ್ಟುಕಮಿಷನ್ ಪಡೆಯಲಾಗುತ್ತಿದೆ ಎಂದು ರಾಜ್ಯಗುತ್ತಿಗೆದಾರರ ಸಂಘ ಪ್ರಧಾನ ಮಂತ್ರಿಗೆಪತ್ರ ಬರೆದಿರುವುದು ಬಹಿರಂಗಗೊಂಡಿದೆ.ಅಲ್ಲದೇ, ಟೆಂಡರ್ ಅನುಮೋದನೆಗೆಮುಂಚಿತವಾಗಿ ಶೇ. 5 ರಷ್ಟು ಕಮಿಷನ್‌ಕೊಡಲು ಬಿಜೆಪಿ ಸರ್ಕಾರದ ಸಚಿವರುಒತ್ತಡ ಹಾಕುತ್ತಿದ್ದಾರೆ ಎಂದು ಗಂಭೀರಆರೋಪ ಮಾಡಲಾಗಿದೆ.
ಆದ್ದರಿಂದ ಈಬಗ್ಗೆ ಸಂಪೂರ್ಣ ತನಿಖೆಯಾಗಬೇಕುಎಂದು ಆಗ್ರಹಿಸಿದರು.ಅಂಗನವಾಡಿ ಮತ್ತು ಶಾಲೆಗಳಲ್ಲಿವಿದ್ಯಾರ್ಥಿಗಳಿಗೆ ಮೊಟ್ಟೆ ಕೊಡಬಾರದುಎಂದು ಮೇಲ್ವರ್ಗದ ಸಂಘಟನೆಗಳು ಮತ್ತುಸಂಘ ಪರಿವಾರದ ಸಂಘಟನೆಗಳು ವಿರೋಧವ್ಯಕ್ತಪಡಿಸುತ್ತಿರುವುದು ಖಂಡನೀಯ.ಒಂದು ವೇಳೆ ಮೊಟ್ಟೆ ನೀಡುವ ನಿರ್ಧಾರವನ್ನುಹಿಂಪಡೆದುಕೊಂಡರೆ ರಾಜ್ಯಾದ್ಯಂತ ತಳಸಮುದಾಯಗಳ ಜೊತೆಗೂಡಿ ಕಾನೂನುಹೋರಾಟ ನಡೆಸಲಾಗುವುದು ಎಂದರು.
ರಾಜ್ಯದಲ್ಲಿ ವ್ಯಾಪಕ ಮಳೆಯಿಂದಾಗಿಬೆಳೆಹಾನಿ, ಕೆಲವು ಕಡೆ ಮನೆಗಳುಕುಸಿದುಬಿದ್ದು ರೈತರು ಹಾಗೂ ಜನಬೀದಿಪಾಲಾಗಿದ್ದಾರೆ. ಇಷ್ಟು ದೊಡ್ಡಅನಾಹುತಕ್ಕೆ ಸರ್ಕಾರ ಕೇವಲ 418 ಕೋಟಿರೂ. ಪರಿಹಾರ ಘೋಷಣೆ ಮಾಡಿರುವುದುಅವೈಜ್ಞಾನಿಕವಾಗಿದೆ. ಆದ್ದರಿಂದ ಕೂಡಲೇನಷ್ಟದ ಸಂಪೂರ್ಣ ಪರಿಹಾರ ನೀಡಬೇಕು.
ಶಿವಮೊಗ್ಗದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿ ವಿಳಂಬ ಮತ್ತುಭ್ರಷ್ಟಾಚಾರದ ಬಗ್ಗೆ ತನಿಖೆಯಾಗಬೇಕುಎಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷಇಮ್ರಾನ್, ದೇವೇಂದ್ರ ಪಾಟೀಲ್,ಕಲೀಂವುಲ್ಲಾ, ಅಲ್ಲಾ ಭಕ್ಷ ಉಪಸ್ಥಿತರಿದ್ದರು.