Advertisement

ಮಲೆನಾಡಿನಲ್ಲಿ ವಾಡಿಕೆಗಿಂತ ಶೇ.300ರಷ್ಟು ಅಧಿಕ ಮಳೆ!

06:22 PM Nov 17, 2021 | Adarsha |

ಶಿವಮೊಗ್ಗ: ಮಲೆನಾಡಿನಲ್ಲಿ ಮುಂಗಾರುಅವ ಧಿಯಲ್ಲಿ ಭಾರೀ ಮಳೆಯಾದರೆ ಉಳಿದಸಮಯದಲ್ಲಿ ಸಾಮಾನ್ಯ ಮಳೆಯಾಗುತ್ತದೆ. ಆದರೆಈ ವರ್ಷ ಚಳಿಗಾಲದ ಅವಧಿಯಲ್ಲೂ ಭಾರೀಮಳೆಯಾಗುತ್ತಿದ್ದು ಭತ್ತ, ಮೆಕ್ಕೆಜೋಳದ ಬೆಳೆದರೈತರು ಕಟಾವು ಮಾಡಲಾಗದೇ ಹೈರಾಣಾಗಿದ್ದಾರೆ.

Advertisement

ಮುಂಗಾರು ಅವ ಧಿಯಲ್ಲಿ ಬಿತ್ತನೆ ಮಾಡಿದ್ದಫಸಲು ನವೆಂಬರ್‌ ಎರಡನೇ ವಾರದಿಂದ ಕಟಾವಿಗೆಬರುತ್ತದೆ. ಜಿಲ್ಲೆಯಾದ್ಯಂತ ಈ ಬಾರಿ 78616 ಹೆಕ್ಟೇರ್‌ನಲ್ಲಿ ಭತ್ತ, 51251 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, 396ಹೆಕ್ಟೇರ್‌ ಹತ್ತಿ, 183 ಹೆಕ್ಟೇರ್‌ ತೊಗರಿ, 433 ಹೆಕ್ಟೇರ್‌ತೊಗರಿ, 101 ಹೆಕ್ಟೇರ್‌ ಅಲಸಂದೆ, 57 ಹೆಕ್ಟೇರ್‌ಶೇಂಗಾ, 880 ಹೆಕ್ಟೇರ್‌ ಕಬ್ಬು ಬಿತ್ತನೆ ಮಾಡಲಾಗಿದೆ.ಈಗ ಭತ್ತ ಹಾಗೂ ಮೆಕ್ಕೆಜೋಳ ಕಟಾವಿಗೆ ಬಂದಿದ್ದುರೈತರು ಮಳೆ ನಿಲ್ಲುವುದನ್ನೇ ಕಾಯುತ್ತಿದ್ದಾರೆ.ಈಗಾಗಲೇ ತಮಿಳುನಾಡಿನಿಂದ ನೂರಾರು ಭತ್ತಕಟಾವು ಯಂತ್ರಗಳು ಬಂದಿದ್ದು ಕೆಲಸವಿಲ್ಲದೇ ನಿಂತಿವೆ.

ಬೆಳಗ್ಗೆ ಬಿಸಿಲು ಸಂಜೆಯಾಗುತ್ತಿದ್ದಂತೆಭಾರೀ ಮಳೆಯಾಗುತ್ತಿದ್ದು ಹೊಲ, ಗದ್ದೆಗಳುಜಲಾವೃತಗೊಳ್ಳುತ್ತಿವೆ. ಹೀಗಾಗಿ ಕಟಾವು ಯಂತ್ರಇಳಿಸಲು ತೊಂದರೆಯಾಗುತ್ತಿದೆ. ಭತ್ತ ಹಣ್ಣಾಗಿದ್ದುಕೈಯಲ್ಲಿ ಮುಟ್ಟಿದರೂ ಭತ್ತ ಉದುರುತ್ತಿದೆ.ಕೊರೊನಾ ಸಂಕಷ್ಟ, ಬೆಲೆ ಸಿಗದೆ ಒದ್ದಾಡುತ್ತಿದ್ದರೈತನಿಗೆ ಈ ವರ್ಷ ಉತ್ತಮ ಬೆಳೆ ಬಂದಿದ್ದರೂಕಟಾವಿಗೆ ಮಳೆ ಬಿಡುತ್ತಿಲ್ಲ.ಶೇ.300 ರಷ್ಟು ಹೆಚ್ಚು ಮಳೆ: ನವೆಂಬರ್‌ ತಿಂಗಳಲ್ಲಿಇಷ್ಟು ಮಳೆಯಾಗಿರುವುದು ತೀರಾ ಅಪರೂಪ.ನ.1ರಿಂದ ನ.15ರವರೆಗೆ ಜಿಲ್ಲೆಯಲ್ಲಿ 25 ಮಿಮೀವಾಡಿಕೆಗೆ 98 ಮಿಮೀ ಮಳೆಯಾಗಿದೆ.

ಅಂದರೆ ಶೇ.291ರಷ್ಟು ಹೆಚ್ಚು. ಭದ್ರಾವತಿ 26 ಮಿಮೀವಾಡಿಕೆಗೆ 206 ಮಿಮೀ, ಹೊಸನಗರ 23 ಮಿಮೀಬದಲು 117 ಮಿಮೀ, ಸಾಗರ 26 ಮಿಮೀ ಬದಲು88 ಮಿಮೀ, ಶಿಕಾರಿಪುರ 21 ಮಿಮೀ ಬದಲಿಗೆ58 ಮಿಮೀ, ಶಿವಮೊಗ್ಗ 21 ಮಿಮೀ ಬದಲಿಗೆ116 ಮಿಮೀ, ಸೊರಬ 22 ಮಿಮೀ ವಾಡಿಕೆಗೆ 57ಮಿಮೀ, ತೀರ್ಥಹಳ್ಳಿ 22 ಮಿಮೀ ವಾಡಿಕೆಗೆ 139ಮಿಮೀ ಮಳೆಯಾಗಿದೆ.ಮಳೆ ಹಾನಿ: ಮಳೆಯಿಂದ ಭತ್ತ ಹಾಗೂಮೆಕ್ಕೆಜೋಳ, ರಾಗಿ ಬೆಳೆಗೆ ನೀರು ನುಗ್ಗಿದ್ದು ಭಾಗಶಃಹಾನಿಯಾಗಿದೆ. ಕೃಷಿ ಇಲಾಖೆ ಮಾಹಿತಿ ಪ್ರಕಾರಭತ್ತ 45 ಹೆಕ್ಟೇರ್‌, ಮೆಕ್ಕೆಜೋಳ 9 ಹೆಕ್ಟೇರ್‌, ರಾಗಿ 2ಹೆಕ್ಟೇರ್‌ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next