Advertisement

ಪುರಸಭೆ ವ್ಯಾಪ್ತಿಯಲ್ಲಿ ಜಮೀನು ಮಂಜೂರು ಮಾಡಲು ಆಗ್ರಹ

10:58 PM Jun 23, 2021 | Shreeraj Acharya |

ಸೊರಬ: ಪುರಸಭೆ ವ್ಯಾಪ್ತಿಯಲ್ಲಿ ಜಮೀನು ಮಂಜೂರು ಮಾಡುವಂತೆ ಒತ್ತಾಯಿಸಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಮಠಾಧಿ  àಶರ ನಿಯೋಗ ಮಂಗಳವಾರ ಪಟ್ಟಣದಲ್ಲಿ ಮಂಗಳವಾರ ಶಾಸಕ ಎಸ್‌. ಕುಮಾರ್‌ ಬಂಗಾರಪ್ಪ ಅವರನ್ನು ಭೇಟಿ ನೀಡಿ ಮನವಿ ನೀಡಿತು.

Advertisement

ಜಡೆ ಸಂಸ್ಥಾನ ಮಠದ ಡಾ| ಮಹಾಂತ ಸ್ವಾಮೀಜಿ ಮಾತನಾಡಿ, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು ಒಂದು ಲಕ್ಷ ಜನಸಂಖ್ಯೆ ಇರುವ ಪ್ರಬಲ ಸಮುದಾಯವಾಗಿರುವ ವೀರಶೈವ ಲಿಂಗಾಯತ ಸಮುದಾಯ ಅಭಿವೃದ್ಧಿಗಾಗಿ, ಪುರಸಭೆ ವ್ಯಾಪ್ತಿಯಲ್ಲಿ 5 ಎಕರೆ ಜಾಗವನ್ನು ಮಂಜೂರು ಮಾಡಬೇಕು. ಸಮುದಾಯದ ಅಭಿವೃದ್ಧಿಗಾಗಿ ಸಭಾಭವನ, ವಿದ್ಯಾರ್ಥಿ ನಿಲಯ, ಸಾಂಸ್ಕೃತಿಕ ಕೇಂದ್ರಗಳನ್ನು ಕೇಂದ್ರಗಳನ್ನು ಹಾಗೂ ಶಿಕ್ಷಣಕ್ಕೆ ಸಂಬಂ  ಧಿಸಿದಂತೆ ಅಭಿವೃದ್ಧಿ ಗೊಳಿಸಲು ಯಾವುದೇ ವಿಸ್ತಾರವಾದ ಜಾಗವಿಲ್ಲ ಎಂದು ಶಾಸಕರ ಗಮನಕ್ಕೆ ತಂದರು.

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಜಿಲ್ಲಾಧ್ಯಕ್ಷ ಸಿ.ಪಿ. ಈರೇಶ ಗೌಡ ಮಾತನಾಡಿ, ಸಮುದಾಯದ ಅಭಿವೃದ್ಧಿಗೆ ವಿಸ್ತಾರವಾದ ಜಾಗದ ಅವಶ್ಯಕತೆ ಇದೆ. ಶಿಕ್ಷಣ ಸಂಬಂ ಧಿಸಿದಂತೆ ವಿದ್ಯಾರ್ಥಿ ನಿಲಯ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ವೀರಶೈವ ಲಿಂಗಾಯತ ಸಂಘಟನೆಗಳಿಗೆ ಜಾಗದ ಅಗತ್ಯವಿದೆ. ಈ ನಿಟ್ಟಿನಲ್ಲಿ ಜಾಗವನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು.

ನಂತರ ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ಮಂಜೂರಾತಿಗೆ ಒತ್ತಾಯಿಸಿ ಪಟ್ಟಣದ ತಹಶೀಲ್ದಾರ್‌ ಕಚೇರಿಗೆ ತೆರಳಿ ತಹಶೀಲ್ದಾರ್‌ ಶಿವಾನಂದ ಪಿ. ರಾಣೆ ಅವರಿಗೆ ಮನವಿ ಸಲ್ಲಿಸಲಾಯಿತು. ದುಗ್ಲಿ ಸುಕ್ಷೇತ್ರ ಮತ್ತು ಕಡೇನಂದಿಹಳ್ಳಿ ತಪೋಕ್ಷೇತ್ರದ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಾರನಹಳ್ಳಿ ಚೌಕಿಮಠದ ಶ್ರೀ ನೀಲಕಂಠ ಸ್ವಾಮೀಜಿ, ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ತಾಲೂಕು ಅಧ್ಯಕ್ಷ ಸಂದೀಪ ಗೌಡ, ಜಿಲ್ಲಾ ಸಂಚಾಲಕ ನಂದೀಶ ಬಿಳವಾಣಿ, ಜಿಲ್ಲಾ ವಕ್ತಾರ ವಿನಯ ಪಾಟೀಲ್‌, ತಾಲೂಕು ಉಪಾಧ್ಯಕ್ಷ ನಾಗರಾಜ ಗುತ್ತಿ, ಟೌನ್‌ ಅಧ್ಯಕ್ಷ ಲಿಂಗರಾಜ ಧೂಪದ ಮಠ, ಪುರಸಭೆ ಸದಸ್ಯೆ ನಟರಾಜ ಉಪ್ಪಿನ, ಎಂ. ನಾಗಪ್ಪ ವಕೀಲ, ಕೊಟ್ರೇಶಗೌಡ ಚಿಕ್ಕಸವಿ, ಸದಾನಂದಗೌಡ ಕಡಸೂರು, ಚಂದ್ರಶೇಖರ ನಿಜಗುಣ, ಗದಿಗೆಪ್ಪ ಗೇರುಕೊಪ್ಪ, ಸಿ.ಪಿ. ನಾಗರಾಜ ಗೌಡ, ಕೆ.ಬಿ. ಆಶೀಕ್‌ ನಾಗಪ್ಪ, ಸೂರಿ ಕುಮ್ಮೂರು ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next