Advertisement

ಸರ್ಕಾರದಿಂದ ಕುಡಿಯುವ ನೀರೂ ಮಾರಾಟ: ಆರೋಪ-ವಿರೋಧ

07:35 PM Oct 28, 2021 | Adarsha |

ಶಿವಮೊಗ್ಗ: ಕರ್ನಾಟಕ ಸರ್ಕಾರ ಮತ್ತು ಕೇಂದ್ರಸರ್ಕಾರದ ಸಹಭಾಗಿತ್ವದಲ್ಲಿ ಗ್ರಾಮೀಣಪ್ರದೇಶದ ಜನರಿಗೆ ಕುಡಿಯುವ ನೀರುಒದಗಿಸುವ ಮಹತ್ವಕಾಂಕ್ಷಿಯ ಯೋಜನೆಯಾದ”ಜಲಜೀವನ್‌ ಮಿಷನ್‌’ ಯೋಜನೆ ಉತ್ತಮ ಯೋಜನೆಯಾಗಿದ್ದರೂ ಈ ಯೋಜನೆಯಡಿ ಕುಡಿಯುವ ನೀರನ್ನೂ ಮಾರಾಟ ಮಾಡಲುಮುಂದಾಗಿರುವ ಸರ್ಕಾರದ ಕ್ರಮವನ್ನುಖಂಡಿಸಿ ಶಿವಮೊಗ್ಗ ಗ್ರಾಮಾಂತರ ಯುವಕಾಂಗ್ರೆಸ್‌ನಿಂದ ತಹಶೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

Advertisement

ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಮೂಲಭೂತಅವಶ್ಯಕತೆಯಾದ ಶುದ್ಧ ನೀರು, ಗಾಳಿ ಹಾಗೂಬೆಳಕು ಒದಗಿಸುವುದು ಸರ್ಕಾರದ ಕರ್ತವ್ಯ.ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಜನರಿಗೆಶುದ್ಧ ಕುಡಿಯುವ ನೀರು ಒದಗಿಸುವಸರ್ಕಾರದ ಈ ಯೋಜನೆ ಉತ್ತಮವಾಗಿದ್ದರೂಕೊಳಾಯಿಗಳಿಗೆ ಮೀಟರ್‌ ಅಳವಡಿಸುವಮೂಲಕ ನೀರನ್ನೂ ಮಾರಾಟ ಮಾಡಲುಮುಂದಾಗಿರುವ ಸರ್ಕಾರದ ಕ್ರಮಖಂಡನೀಯ ಎಂದು ತಿಳಿಸಿದರು.ಪ್ರತಿ ಗ್ರಾಪಂಗಳಲ್ಲೂ ಬೇರೆ ಬೇರೆ ಆದಾಯದಮೂಲಗಳಿರುತ್ತವೆ.

ಆದರೆ, ಪ್ರತಿ ವ್ಯಕ್ತಿಗೆದಿನಕ್ಕೆ 55 ಲೀಟರ್‌ ನೀರು ಒದಗಿಸುವುದಾಗಿಹೇಳುತ್ತಾ ಅದಕ್ಕೂ ಶುಲ್ಕ ಪಡೆಯುವ ಈಕ್ರಮ ಸರಿಯಲ್ಲ. ಇದು ಮುಂದಿನ ದಿನಗಳಲ್ಲಿಎಲ್ಲ ಕ್ಷೇತ್ರಗಳಲ್ಲೂ ಖಾಸಗೀಕರಣ ಹಾಸುಹೊಕ್ಕಾಗಿರುವಂತೆ ನೀರಿನ ಪೂರೈೆಯನ್ನೂಖಾಸಗೀಕರಣ ಮಾಡುವ ಹುನ್ನಾರವಾಗಿದೆ.ಆದ್ದರಿಂದ ಕೂಡಲೇ ಗ್ರಾಮೀಣ ಪ್ರದೇಶದಜನರಿಗೆ ನೀರು ಒದಗಿಸುವ ಜಲಜೀವನ್‌ಮಿಷನ್‌ನ ಕೊಳಾಯಿ ಸಂಪರ್ಕಗಳಿಗೆಮೀಟರ್‌ ಅಳವಡಿಸುವುದನ್ನು ಕೈಬಿಡಬೇಕು.ಈಗ ಜಾರಿಯಲ್ಲಿರುವಂತೆ ಕನಿಷ್ಠ ನೀರಿನಕಂದಾಯ ಮಾತ್ರ ವಸೂಲು ಮಾಡಬೇಕುಎಂದು ಆಗ್ರಹಿಸಿದರು.

ರಾಜ್ಯಪಾಲರು ಗ್ರಾಮೀಣ ಪ್ರದೇಶದಲ್ಲಿನೀರಿನ ಮೀಟರ್‌ ಅಳವಡಿಕೆ ಕೈಬಿಡುವಂತೆಸರ್ಕಾರಕ್ಕೆ ಸೂಚನೆ ನೀಡಬೇಕು. ಕೂಡಲೇಜಲಜೀವನ್‌ ಮಿಷನ್‌ ಯೋಜನೆಯಡಿನೀರಿನ ಕೊಳಾಯಿಗಳಿಗೆ ಮೀಟರ್‌ಅಳವಡಿಸುವುದನ್ನು ಕೈ ಬಿಡದಿದ್ದಲ್ಲಿ, ಯುವಕಾಂಗ್ರೆಸ್‌ನಿಂದ ತೀವ್ರ ಹೋರಾಟ ನಡೆಸುವುದುಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಶಿವಮೊಗ್ಗ ಗ್ರಾಮಾಂತರ ಯುವ ಕಾಂಗ್ರೆಸ್‌ಅಧ್ಯಕ್ಷ ಮನು , ಎಸ್‌ಸಿ ಘಟಕದ ಅಧ್ಯಕ್ಷೆಪಲ್ಲವಿ, ಅಲ್ಪಸಂಖ್ಯಾತ ಕಾಂಗ್ರೆಸ್‌ ನಾಯಕರಾದಮುಜೀಬ್‌, ಅಕºರ್‌ ಯುವ ಕಾಂಗ್ರೆಸ್‌ ರಾಜ್ಯಕಾರ್ಯದರ್ಶಿ ಚೇತನ್‌, ಯುವ ಕಾಂಗ್ರೆಸ್‌ಮುಖಂಡ ಮಧುಸೂದನ್‌, ಹೊಳೆಹೊನ್ನೂರುಬ್ಲಾಕ್‌ ಯುವ ಕಾಂಗ್ರೆಸ್‌ನ ಮಲ್ಲೇಶ್‌,ಭರತ್‌, ಯುವ ಕಾಂಗ್ರೆಸ್‌ನ ಜಿಲ್ಲಾ ಪ್ರಧಾನಕಾರ್ಯದರ್ಶಿ ಪುರಲೆ ಮಂಜು, ಅಬ್ದುಲ್ಲಾ,ಶಿವು ಮಲವಗೊಪ್ಪ, ಸದ್ದಾಮ್‌, ದಕ್ಷಿಣ ಬ್ಲಾಕ್‌ಅಧ್ಯಕ್ಷ ವಿನಯ್‌ , ಗಿರೀಶ್‌ ಉತ್ತರ ಬ್ಲಾಕ್‌,ಗ್ರಾಮಾಂತರ ಬ್ಲಾಕ್‌ ಯುವ ಕಾಂಗ್ರೆಸ್‌ನಸಂದೀಪ, ನಾಗೇಂದ್ರ, ಚಂದ್ರು, ವಿಜಯ್‌,ರವಿ ಕಟ್ಟಿಕೆರೆ, ಆಕಾಶ್‌, ಚಂದ್ರೋಜಿ ರಾವ್‌,ಅರುಣ್‌ ಡಿ.ಕೆ., ಅನಿಲ್‌ ಕುಮಾರ್‌, ಅನಿಲ್‌,ಪ್ರತಾಪ್‌, ಮುಬಾಸಿರ್‌, ವಿಕ್ರಂ, ಕಿರಣ್‌ ಹಾಗೂನೂರಾರು ಕಾರ್ಯಕರ್ತರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next