Advertisement

ಕಪ್ಪು ಪಟ್ಟಿ ಧರಿಸಿ ಶಿಕ್ಷಕರಿಂದ ಸಚಿವರಿಗೆ ಮನವಿ

02:05 PM Oct 26, 2021 | Adarsha |

ಶಿವಮೊಗ್ಗ: ಪದವೀಧರ ಶಿಕ್ಷಕರ ಸಮಸ್ಯೆ, ವೃಂದನೇಮಕಾತಿ ತಿದ್ದುಪಡಿ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಶಾಖೆ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರು ಮಲವಗೊಪ್ಪ ಸರ್ಕಾರಿಪ್ರಾಥಮಿಕ ಶಾಲೆಗೆ ಭೇಟಿ ನೀಡಿದಾಗ ಕಪ್ಪು ಪಟ್ಟಿಧರಿಸಿದ್ದ ಶಿಕ್ಷಕರು ಸಚಿವರಿಗೆ ಮನವಿ ಸಲ್ಲಿಸಿದರು.

Advertisement

ಮಕ್ಕಳೊಂದಿಗಿದ್ದು, ಕರ್ತವ್ಯ ನಿರ್ವಹಿಸುತ್ತಲೇಶಾಂತಿಯುತವಾಗಿ ಪ್ರಾಥಮಿಕ ಶಾಲಾಶಿಕ್ಷಕರು ನಿರಂತರವಾಗಿ ಹೋರಾಟ ನಡೆಸುತ್ತಾಬಂದಿದ್ದಾರೆ. ಮೂರು ತಿಂಗಳ ಹಿಂದೆಯೇಈ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆವಿನಂತಿಸಲಾಗಿತ್ತು. ಬೇಡಿಕೆ ಈಡೇರಿಸದಿದ್ದರೆಅನಿವಾರ್ಯ ಹೋರಾಟಕ್ಕೆ ಸಂಘಟನೆಯಿಂದತೀರ್ಮಾನ ಕೈಗೊಳ್ಳಲಾಗಿತ್ತು. ವಿಶೇಷವಾಗಿ ಶಿಕ್ಷಕರ ಸಂಘಟನೆ ಮಕ್ಕಳೊಂದಿಗಿದ್ದು, ಅಸಹಕಾರ ಚಳವಳಿಗಳ ಮೂಲಕ ಸರ್ಕಾರದ ಗಮನಸೆಳೆಯುವ ಐತಿಹಾಸಿಕ ನಿರ್ಧಾರ ತೆಗೆದುಕೊಂಡುಕಾರ್ಯಕಾರಿ ಸಮಿತಿ ತೀರ್ಮಾನದಂತೆರೂಪುರೇಷೆಗಳನ್ನು ಸಿದ್ಧಪಡಿಸಿತ್ತು ಎಂದರು.

ಹಿಂಬಡ್ತಿ ವಿಚಾರ, ಪದವೀಧರ ಶಿಕ್ಷಕರಸಮಸ್ಯೆ, ವೃಂದ ಮತ್ತು ನೇಮಕಾತಿ ನಿಯಮಗಳತಿದ್ದುಪಡಿ, ಸೇವಾವ ಧಿಯಲ್ಲಿ ಶಿಕ್ಷಕರು ಬಯಸುವಜಿಲ್ಲೆಗೆ ಒಂದು ಬಾರಿ ವರ್ಗಾವಣೆ, ಮುಖ್ಯಗುರುಗಳಿಗೆ 15, 20, 25 ವರ್ಷಗಳ ವೇತನಬಡ್ತಿ, ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ,ದೈಹಿಕ ಶಿಕ್ಷಕರ ಸಮಸ್ಯೆ, ಬೇಸಿಗೆ ರಜಾ ಅವಧಿಯಲ್ಲಿ ಬಿಎಲ್‌ಒ ಆಗಿ ಚುನಾವಣೆ ಕರ್ತವ್ಯ ನಿರ್ವಹಿಸಿದ ಶಿಕ್ಷಕರಿಗೆ ಗಳಿಕೆ ರಜೆ ನೀಡದಿರುವಸಮಸ್ಯೆ ಬಗ್ಗೆ ಕೂಡಲೇ ಸರ್ಕಾರ ಗಮನ ಹರಿಸಿಸಮಸ್ಯೆ ಬಗೆಹರಿಸಬೇಕೆಂದು ಸಚಿವರಿಗೆ ಮನವಿ ನೀಡಲಾಯಿತು.

ಬೇಡಿಕೆ ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿತರಗತಿ ಬಹಿಷ್ಕಾರ ಮತ್ತು ಶಾಲಾ ಬಹಿಷ್ಕಾರದಂತಹಅಂತಿಮ ಹೋರಾಟಕ್ಕೆ ಸಂಘಟನೆಯಿಂದನಿರ್ಧಾರ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕುಅಧ್ಯಕ್ಷ ಎಂ. ರವಿ, ಪ್ರಧಾನ ಕಾರ್ಯದರ್ಶಿ ರಾಜುಎಂ. ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next