ಶಿವಮೊಗ್ಗ: ಲಾಕ್‌ಡೌನ್ ಸಡಿಲಿಕೆ ಆರಂಭವಾಗುತ್ತಿದ್ದಂತೆ ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಜನಸಾಗರ ಹರಿದುಬಂದಿದ್ದರೆ, ಕೊರೊನಾ ಸೋಂಕನ್ನು ಲೆಕ್ಕಿಸದೆ, ಸಾಮಾಜಿಕ ಅಂತರವನ್ನು ಮರೆತು ಕೆಲವರು ಖರೀದಿಯಲ್ಲಿ ತೊಡಗಿರುವುದು ಕಂಡು ಬಂದಿತು. ಕೆಲವೆಡೆ ಭಾರೀ ಸಂಖ್ಯೆಯಲ್ಲಿ ಜನ ಬೀದಿಗೆ ಬಂದಿದ್ದರು. ಪರಿಣಾಮ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಅಧಿ ಕವಾಗಿದ್ದರೆ, ಕೆಳಗಡೆ ಭಾರೀ ಟ್ರಾಕ್ ಜಾಮ್ ಉಂಟಾಗಿತ್ತು. ದ್ವಿಚಕ್ರ ವಾಹನ, ಕಾರುಗಳು ಭಾರೀ ಸಂಖ್ಯೆಯಲ್ಲಿ ರಸ್ತೆಗಿಳಿದಿರುವುದು ಕಂಡು ಬಂದಿತು. ನಗರದ ನೆಹರು ರಸ್ತೆ, ಬಿ. ಎಚ್. ರಸ್ತೆ, ದುರ್ಗಿಗುಡಿ, ಸಾಗರ ರಸ್ತೆ, ಸವಳಂಗ ರಸ್ತೆ, ಓ.ಟಿ. ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಅಧಿಕವಾಗಿತ್ತು. ಪ್ರಮುಖ ವೃತ್ತಗಳಲ್ಲಿ ವಾಹನ ದಟ್ಟನೆ ಇತ್ತು. ಅಂಗಡಿ- ಮುಂಗಟ್ಟುಗಳು ಬೆಳಗ್ಗೆ 6 ರಿಂದ 2 ಗಂಟೆಯವರೆಗೆ ತೆರೆದಿದ್ದು, ಜನ ಮೈಮರೆತು ವ್ಯಾಪಾರ-ವಹಿವಾಟಿನಲ್ಲಿ ತೊಡಗಿಸಿಕೊಂಡಂತೆ ಕಂಡುಬಂದಿತು. ಬೆಳಗ್ಗೆ 6 ಗಂಟೆಯಿಂದಲೇ ವ್ಯಾಪಾರಿಗಳು ತಮ್ಮ ಅಂಗಡಿ- ಮುಂಗಟ್ಟುಗಳನ್ನು ತೆರೆಯಲು ಆರಂಭಿಸಿದರು.
ಅಷ್ಟರೊಳಗೆ ಜನರು ಖರೀದಿಗೆಂದು ವಿವಿಧ ಭಾಗಗಳಿಂದ ನಗರಕ್ಕೆ ಆಗಮಿಸುತ್ತಿದ್ದ ದೃಶ್ಯ ಕಂಡುಬಂದಿತು. ನಗರದ ಹೊರಭಾಗದಲ್ಲಿ ವಾಹನ ದಟ್ಟಣೆ ಇತ್ತು. ಬಟ್ಟೆ ಮತ್ತು ಚಿನ್ನ-ಬೆಳ್ಳಿ ಅಂಗಡಿಗಳನ್ನುಹೊರತುಪಡಿಸಿ ಉಳಿದೆಲ್ಲ ವಹಿವಾಟುಗಳು ಆರಂಭವಾದವು. ತರಕಾರಿ ಹೋಲ್‌ಸೇಲ… ಮಾರಾಟಕ್ಕೆ ಬೆಳಗ್ಗೆ ಅವಕಾಶ ನೀಡಲಾಗಿತ್ತು. ಉಳಿದಂತೆ ಹಾಡ್ ìವೇರ್ ಶಾಪ್, ಕೃಷಿ ಪರಿಕರ ಸೇರಿದಂತೆ ಹಲವಾರು ಅಂಗಡಿಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡಲಾಗಿತ್ತು. ಕಳೆದ 2 ತಿಂಗಳಿಂದ ಮನೆಯಲ್ಲಿಯೇ ಕುಳಿತಿದ್ದ ಜನ ಒಮ್ಮೆಗೇ ರಸ್ತೆಗೆ ಇಳಿದಂತೆ ಕಂಡುಬಂದಿತು. ಗಾಂ ಧಿ ಬಜಾರ್‌ನಲ್ಲಂತೂ ಜಾತ್ರೆಯ ರೀತಿಯಲ್ಲಿ ಜನ ಸೇರಿದ್ದರು.
ಸಾಕಷ್ಟು ಅಂಗಡಿಗಳು ಸಾಮಾಜಿಕ ಅಂತರದ ಕಡೆ ಗಮನ ನೀಡಿದ್ದರೂ, ಗಾಂ ಧಿಬಜಾರ್ ನಲ್ಲಿ ಜನಸಾಗರವೇ ಕಂಡು ಬಂದಿದ್ದು, ನಾಮುಂದು ತಾಮುಂದು ಎಂಬಂತೆ ಖರೀದಿ ಪ್ರಕ್ರಿಯೆಯಲ್ಲಿ ಜನತೆ ತೊಡಗಿದ್ದರು. ಸಮಾಧಾನದ ವಿಷಯವೆಂದರೆ ಬಹುತೇಕರು ಮಾಸ್ಕ್ ಧರಿಸಿದ್ದು ಕಂಡುಬಂದಿತು. ರಸ್ತೆಗಿಳಿದ ಕೆಎಸ್‌ಆರ್‌ಟಿಸಿ : ಹಲವು ದಿನಗಳ ಬಳಿಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಸಂಚಾರ ಪುನರಾರಂಭಿಸಿವೆ. ಪ್ರಮುಖವಾಗಿ ಬೆಂಗಳೂರು, ಹಾಸನ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹುಬ್ಬಳ್ಳಿ ಸೇರಿದಂತೆ ಶಿವಮೊಗ್ಗದಿಂದ ಬೀದಿಗೆ ಸಂಚಾರ ಆರಂಭಿಸಿವೆ. ಶಿವಮೊಗ್ಗ- ಭದ್ರಾವತಿ ನಡುವೆಯೂ ಕೆಎಸ್‌ಆರ್ಟಿಸಿ ಸೇವೆ ಪ್ರಯಾಣಿಕರಿಗೆ ದೊರಕಿದೆ. ಖಾಸಗಿ ಬಸ್ ಸಂಚಾರಕ್ಕೆ ಅವಕಾಶ ನೀಡಿಲ್ಲ. ತಾಲೂಕು ಕೇಂದ್ರಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸೇವೆಗಿಂತ ಖಾಸಗಿ ಬಸ್ಸುಗಳ ಸೇವೆ ಹೆಚ್ಚಿನ ಸಂಖ್ಯೆಯಲ್ಲಿ ಇದೆ. ತೀರ್ಥಹಳ್ಳಿ, ಶಿಕಾರಿಪುರ, ಹೊಸನಗರ, ಸಾಗರ, ಸೊರಬ ಈ ಭಾಗಗಳಿಗೆ ಖಾಸಗಿ ಬಸ್ ಸೇವೆಯನ್ನು ಪ್ರಯಾಣಿಕರು ಅವಲಂಬಿಸಿದ್ದಾರೆ.
ಅಲ್ಲದೆ, ಶಿವಮೊಗ್ಗದಿಂದ ಎನ್.ಆರ್. ಪುರ, ಶೃಂಗೇರಿ, ಕೊಪ್ಪ ಮಾರ್ಗಗಳಿಗೂ ಖಾಸಗಿ ಬಸ್ ಸೇವೆ ಪ್ರಮುಖವಾಗಿದೆ. ಆದರೆ ಖಾಸಗಿ ಬಸ್ಸುಗಳ ಸಂಚಾರಕ್ಕೆ ಅನುಮತಿ ನೀಡದ ಕಾರಣ ಪ್ರಯಾಣಿಕರಿಗೆ ತೊಡಕುಂಟಾಗಿದೆ. ಮುಖ್ಯವಾಗಿ ಸರ್ಕಾರಿ ಶಾಲಾ ಶಿಕ್ಷಕರು ಹಾಗೂ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವವರು ಶಿವಮೊಗ್ಗದಿಂದ ತಾಲೂಕು ಕೇಂದ್ರಗಳಿಗೆ ತೆರಳಲು ಖಾಸಗಿ ಬಸ್ ಸೇವೆಯನ್ನು ಅವಲಂಬಿಸಿ¨ªಾರೆ. ಆದರೆ ಖಾಸಗಿ ಬಸ್ ಸಂಚಾರಕ್ಕೆ ಅನುಮತಿ ಇಲ್ಲದ ಕಾರಣ ಸರ್ಕಾರಿ ಉದ್ಯೋಗಿಗಳು ಸೇರಿದಂತೆ ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆ ಉಂಟಾಗಿರುವುದು ಸುಳ್ಳಲ್ಲ. ಗ್ರಾಮೀಣ ಪ್ರದೇಶ ದಿಂದ ಸಾಕಷ್ಟು ಸಂಖ್ಯೆಯಲ್ಲಿ ಉದ್ಯೋಗಿಗಳು ನಗರಕ್ಕೆ ಕೆಲಸಕ್ಕೆಂದು ಆಗಮಿಸುತ್ತಾರೆ. ಖಾಸಗಿ ಬಸ್ ಸೇವೆ ಲಭ್ಯವಿರದ ಕಾರಣ ಇವರು ತೊಂದರೆಗೆ ಸಿಲುಕಿದ್ದಾರೆ.