Advertisement

ಸಿದ್ದು ಅಲ್ಪಸಂಖ್ಯಾತರಿಗೆ ಉತ್ತರ ನೀಡಲಿ: ಎಚ್ಡಿಕೆ

01:57 PM Oct 17, 2021 | Adarsha |

ಶಿವಮೊಗ್ಗ: ಸಿದ್ದರಾಮಯ್ಯ ಯಾವ ರೀತಿಅಲ್ಪಸಂಖ್ಯಾತರಿಗೆ ಗೌರವ ಕೊಟ್ಟು ಕೊಂಡುಬಂದಿದ್ದಾರೆ. ಯಾವ ರೀತಿ ನಡೆದುಕೊಂಡಿದ್ದಾರೆಎಂಬ ಬಗ್ಗೆ ಐದಾರು ವಿಷಯ ಪ್ರಸ್ತಾಪ ಮಾಡಿದ್ದೇನೆ.ಅದಕ್ಕೆ ಅವರು ಅಲ್ಪಸಂಖ್ಯಾತರಿಗೆ ಉತ್ತರ ಕೊಡಲಿಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿಸವಾಲು ಹಾಕಿದರು.

Advertisement

ಭದ್ರಾವತಿಯಲ್ಲಿ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಟ್ವೀಟ್‌ ಮಾಡಿರುವುದರಲ್ಲಿವಿಶೇಷ ಏನೂ ಇಲ್ಲ. ಚುನಾವಣಾ ಸಂದರ್ಭದಲ್ಲಿಸಿದ್ದರಾಮಯ್ಯ ಅವರು ಪ್ರತಿನಿತ್ಯ ಜೆಡಿಎಸ್‌ ಬಗ್ಗೆತೆಗೆದುಕೊಳ್ಳುವ ನಿರ್ಧಾರದ ಬಗ್ಗೆ, ಅಭ್ಯರ್ಥಿಗಳಚುನಾವಣೆಗೆ ನಿಲ್ಲಿಸುವ ಬಗ್ಗೆ ಚರ್ಚೆ ಮಾಡುತ್ತಾರೆ.ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿ ಹಾಕಿದಾಗಕಾಂಗ್ರೆಸ್‌ ಸೋಲಿಸುವ ಸಲುವಾಗಿಯೇ ಅಭ್ಯರ್ಥಿಹಾಕ್ತಾರೆ ಎಂದು ಟೀಕೆ ಮಾಡ್ತಾರೆ.

ಅದಕ್ಕಾಗಿ ಕೆಲವುಘಟನೆಗಳನ್ನು ಅವರಿಗೆ ನೆನಪು ಮಾಡಿ ಕೊಟ್ಟಿದ್ದೇನೆ.ಅವರೇ ಶಾಸಕಾಂಗ ಪಕ್ಷದ ನಾಯಕರಾಗಿದ್ದಾಗನಡೆದ ಘಟನೆಗೆ ಸಂಬಂಧಿ ಸಿದ ವಿಷಯ ಪ್ರಸ್ತಾಪಮಾಡಿದ್ದೇನೆ ಎಂದರು.ನನ್ನ ಇರುವಿಕೆ ಈಗಾಗಲೇ ನಾಡಿನಮೂಲೆ-ಮೂಲೆಯ ಜನರಿಗೆ ಪರಿಚಯಇದೆ. ಈ ರೀತಿ ಹೇಳಿಕೆ ಕೊಟ್ಟು ನನ್ನ ಇರುವಿಕೆತೋರಿಸಿಕೊಳ್ಳಬೇಕಾಗಿಲ್ಲ. ಜನತೆಗೆ ನಾನುಈಗಾಗಲೇ ಹತ್ತಿರದಲ್ಲಿ ಇರುವವನೇ. ನಾನೇನು ಜನತೆಯಿಂದ ದೂರ ಇರುವವನಲ್ಲ.

ಕೆಲವರುನಮ್ಮನ್ನು ಕೆದಕುವವರಿಗೆ ಪ್ರಶ್ನೆ ಕೇಳಿದ್ದೇನೆ. ಪದೇ ಪದೇನಮ್ಮ ಪಕ್ಷದ ಬಗ್ಗೆ ಚರ್ಚೆ ಮಾಡುವ ಹಿನ್ನೆಲೆಯಲ್ಲಿಅವರ ವಿಷಯ ಪ್ರಸ್ತಾಪ ಮಾಡಿದ್ದೇನೆ. ಅದನ್ನುಹೊರತುಪಡಿಸಿ ದ್ವೇಷಕ್ಕೋ, ಅಸೂಯೆಗೋ,ಮತ್ತೂಂದಕ್ಕೋ ಹೇಳಿರುವ ಪದಗಳಲ್ಲ.ಸಿದ್ದರಾಮಯ್ಯ ಅವರು ಪದೇ ಪದೇ ನಮ್ಮ ವಿಷಯಪ್ರಸ್ತಾಪ ಮಾಡಿದ್ದಕ್ಕೆ ಹೇಳಿದ್ದೀನಿ. ಅವರು ಇಲ್ಲಿಗೆನಿಲ್ಲಿಸುತ್ತಾರೆ ಅಂದ್ರೆ ನಾನು ನಿಲ್ಲಿಸುತ್ತೇನೆ ಎಂದರು.ಪಾರದರ್ಶಕತೆ ಇದ್ದರೆ ಲೆಕ್ಕ ಕೊಡಲಿ:ರಾಮ ಮಂದಿರ ಹಣ ಸಂಗ್ರಹ ವಿಚಾರದಲ್ಲಿಪಾರದರ್ಶಕತೆ ಇದ್ದರೆ ಲೆಕ್ಕ ಕೊಡಲಿಕ್ಕೆ ಏನಾಗುತ್ತೆ?1989-91ರವರೆಗೆ ಮೊದಲ ಹಂತದಲ್ಲಿ ಆಡ್ವಾಣಿಅವರ ರಥಯಾತ್ರೆ ಸಂದರ್ಭದಲ್ಲಿ ದೇಶದಾದ್ಯಂತಕಲೆಕ್ಷನ್‌ ಆಗಿರುವ ಲೆಕ್ಕ ಯಾರು ಇಟ್ಟಿದ್ದಾರೆ.

ಲೆಕ್ಕ ಇಟ್ಟಿದ್ದರೆ ಕೊಡಲಿಕ್ಕೆ ಏನು ಸಮಸ್ಯೆ. ಜನತೆಮುಂದೆ ಇಡಲಿಕ್ಕೆ ಏನು? ಜನರನ್ನು ದಾರಿತಪ್ಪಿಸೋದು ಒಳ್ಳೆಯದ್ದಲ್ಲ. ನೀವು ನಿಷ್ಠೆ ಬಗ್ಗೆಹೇಳುತ್ತೀರಾ, ಪಾರದರ್ಶಕತೆ ಬಗ್ಗೆ ಹೇಳುತ್ತಿರಲ್ಲಾ.ಪಾರದರ್ಶಕತೆಯಲ್ಲಿ ಏನು ತೊಂದರೆ ಇಲ್ಲ ಅಂದ್ರೆಜನತೆ ಮುಂದೆ ಲೆಕ್ಕ ಇಡಲು ಏನು ತೊಂದರೆಎಂದು ಪ್ರಶ್ನಿಸಿದರು.ಆರ್‌ಎಸ್‌ಎಸ್‌ ಬಗ್ಗೆ ನಾನು ತಪ್ಪು ಏನು ಹೇಳಿದ್ದೀನಿ.ಇರುವಂತಹ ವಿಷಯ ಹೇಳಿದ್ದೀನಿ. ನಾನು ಊಹೆಮಾಡಿಕೊಂಡು ಮಾತನಾಡಿರುವ ವಿಷಯವಲ್ಲ.

Advertisement

ಅವರ ಪ್ರಚಾರಕರುಗಳು ಹೇಳಿರುವಂತಹದ್ದು.ಒಬ್ಬರು ಪುಸ್ತಕದಲ್ಲಿ ಅವರೇ ಪ್ರಸ್ತಾಪ ಮಾಡಿರೋದು.ಆ ಪ್ರಸ್ತಾಪದ ವಿಷಯವನ್ನು ಜನತೆ ಮುಂದೆ ಚರ್ಚೆಗೆಇಟ್ಟಿದ್ದೇನೆ. ನಾನು ವೈಯಕ್ತಿಕವಾಗಿ ಸೃಷ್ಟಿ ಮಾಡಿರುವವಿಷಯವಲ್ಲ ಅದು. ಪ್ರಚಾರಕರು ಏನು ಹೇಳಿದ್ದಾರೆ,ಲೇಖಕರು ಪುಸ್ತಕದಲ್ಲಿ ಏನು ಹೇಳಿದ್ದಾರೆ ಅದನ್ನುಜನತೆಯ ಮುಂದೆ ಇಟ್ಟಿದ್ದೇನೆ ಎಂದರು.

ಉಪ ಚುನಾವಣೆ ಇರುವ ಸಿಂದಗಿಯಲ್ಲಿದೇವೇಗೌಡರು ಭಾನುವಾರದಿಂದ 10 ದಿನಗಳಕಾಲ ಅಲ್ಲಿಯೇ ಪ್ರವಾಸದಲ್ಲಿ ಇರುತ್ತಾರೆ. ಅವರಆರೋಗ್ಯದ ದೃಷ್ಟಿಯಿಂದ ಬೇಡ ಅಂದರೂ ಈಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರಮಾಡಲು ಸಂಪೂರ್ಣ ಸಮಯ ಮೀಸಲಿಡುತ್ತೇನೆಎಂದಿದ್ದಾರೆ. 19ರಿಂದ 23ರವರೆಗೆ ಐದು ದಿನಮೊದಲ ಹಂತದಲ್ಲಿ ಹಾನಗಲ್‌ ಹಾಗು ಸಿಂದಗಿಯಲ್ಲಿ ಪ್ರಚಾರದಲ್ಲಿ ತೊಡಗುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next