ಶಿಕಾರಿಪುರ: ಸ್ವಂತ ಕಾರಿನಲ್ಲಿ ರಾಜ್ಯ ಸಂಚಾರಮಾಡಿ ಮುಂದಿನ ಚುನಾವಣೆಯಲ್ಲಿಬಿಜೆಪಿ ಅಧಿ ಕಾರಕ್ಕೆ ತರಲು ಪಣ ತೊಟ್ಟಿದ್ದೇನೆಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಪಟ್ಟಣದ 138ನೇ ಬೂತ್‌ನಲ್ಲಿ ನಡೆದ”ಸೇವೆ ಮತ್ತು ಸಮರ್ಪಣಾ’ ಕಾರ್ಯಕ್ರಮದಸಮಾರೋಪ ಸಮಾರಂಭದಲ್ಲಿ ಭಾಗವಹಿಸಿಅವರು ಮಾತನಾಡಿದರು. ದೇಶದಲ್ಲಿ ಒಂದು ಕಾನೂನು, ಎರಡುಧ್ವಜ ಇರಬಾರದು ಎಂದು ಶಾಮ್‌ಪ್ರಕಾಶ್‌ಮುಖರ್ಜಿ ಹೇಳಿದ್ದರು. ಅದನ್ನು ಮೋದಿಸರ್ಕಾರ ಜಮ್ಮು- ಕಾಶ್ಮೀರಕ್ಕಿದ್ದ 370 ನೇವಿಧಿ ರದ್ದು ಮಾಡುವ ಮೂಲಕ ಸಾಧಿಸಿತೋರಿಸಿದೆ ಎಂದರು.
ಇಡೀ ಜಗತುಭಾರತದ ಕಡೆ ನೋಡುತ್ತಿದೆ. ಅಮೆರಿಕಾ,ಯುಎನ್‌ಒ ವಿಶ್ವಸಂಸ್ಥೆ ಎಲ್ಲಾ ಕಡೆಗಳಲ್ಲೂಮೆಚ್ಚುಗೆ ವ್ಯಕ್ತವಾಗಿದೆ. ಇಡೀ ವಿಶ್ವಮಾದರಿಯ ನಾಯಕರಾಗಿ ಮೋದಿ ಅವರುಮುನ್ನಡೆಯುತ್ತಿದ್ದಾರೆ. ಏಳು ವರ್ಷದಅ ಧಿಕಾರದಲ್ಲಿ ನಾವೆಲ್ಲ ಹೆಮ್ಮೆ ಪಡುವಆಡಳಿತವನ್ನು ಅವರು ನೀಡಿದ್ದು ಆರ್ಥಿಕವಾಗಿವಿಶ್ವದಲ್ಲೇ 6 ನೇ ಶಕ್ತ ರಾಷ್ಟ್ರವಾಗಿ ಭಾರತಬೆಳೆದಿದೆ ಎಂದರು.
ಪೋಸ್ಟ್ ಕಾರ್ಡ್ ಅಭಿಯಾನ: ಪ್ರಧಾನಿಮೋದಿ ಅವರ ಜನ್ಮದಿನದ ಪ್ರಯುಕ್ತಶಿಕಾರಿಪುರದ ಕಚೇರಿಯಲ್ಲಿ ನಿವೃತ್ತಯೋಧರು. ಶಿಕ್ಷಕರ ಸಂಘದ ಸದಸ್ಯರು.ರಾಜಕೀಯ ಮುಖಂಡರು, ವ್ಯಾಪಾರಿಗಳುಮೋದಿಯವರಿಗೆ ಶುಭಾಶಯ ಕೋರಿಪತ್ರ ಬರೆದು ಯಡಿಯೂರಪ್ಪನವರಿಗೆ ಹಸ್ತಾಂತರಿಸಿದರು.
ಸಂಸದ ಬಿ.ವೈ.ರಾಘವೇಂದ್ರ, ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಅರಣ್ಯ ಅಭಿವೃದ್ಧಿ ನಿಗಮದರೇವಣಪ್ಪ, ತಾಲೂಕು ಬಿಜೆಪಿ ಅಧ್ಯಕ್ಷವೀರೇಂದ್ರ ಪಾಟೀಲ್, ಡಿಸಿಸಿ ಬ್ಯಾಂಕ್ ಅಧ್ಯಕ್ಷಚನ್ನವೀರಪ್ಪ ಟಿ., ಪುರಸಭೆ ಅಧ್ಯಕ್ಷೆ ಲಕ್ಷ್ಮೀಮಹಲಿಂಗಪ್ಪ, ರೇಣುಕಾ ಸ್ವಾಮಿ ಇದ್ದರು.