Advertisement

ಮೋದಿ ಆಡಳಿತದಿಂದ ದೇಶಕ್ಕೆ ಹೊಸ ಶಕ್ತಿ: ರಾಘವೇಂದ್ರ

05:35 PM Oct 06, 2021 | Adarsha |

ಶಿವಮೊಗ್ಗ: ಸ್ವಾತಂತ್ರ್ಯ ಬಂದು 65 ವರ್ಷಗಳವರೆಗೆದೇಶ ಆಳಿದ ಸರ್ಕಾರಗಳು ನಮ್ಮದು ಎಂದುಅನ್ನಿಸಿಲ್ಲ. ಆದರೆ, ಮೋದಿ ನೇತೃತ್ವದ ಸರ್ಕಾರ7 ವರ್ಷಗಳಲ್ಲಿ ನಡೆಸಿದ ಅಭಿವೃದ್ಧಿ ಪರ ಆಡಳಿತ ದೇಶದ ಜನರಲ್ಲಿ ದೇಶ ಪ್ರೇಮವನ್ನು ಬೆಳೆಸುವುದರ ಜೊತೆಗೆ ಶಕ್ತಿ ತುಂಬಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ನಗರದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿಶಿವಮೊಗ್ಗ ಜಿಲ್ಲಾ ಬಿಜೆಪಿ ಮೂರು ದಿನಗಳ ಕಾಲಹಮ್ಮಿಕೊಂಡಿರುವ ಸೇವೆ ಮತ್ತು ಸಮರ್ಪಣಾಅಭಿಯಾನದ ಸಮಾರೋಪದ ಅಂಗವಾಗಿನವಭಾರತ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಕೊರೊನಾದಂತಹ ಸಂಕಷ್ಟದಸ್ಥಿತಿಯಲ್ಲೂ ಕೂಡ ಆರ್ಥಿಕ, ಸಾಮಾಜಿಕಬಲವರ್ಧನೆಗೆ ಮೋದಿ ನೇತೃತ್ವದ ಸರ್ಕಾರಅನೇಕ ಕೊಡುಗೆ ನೀಡಿದೆ. ವಿವಿಧ ಕ್ಷೇತ್ರಗಳಲ್ಲಿ17 ಕೋಟಿ ಗೂ ಹೆಚ್ಚು ಉದ್ಯೋಗ ಸೃಷ್ಠಿಸಿಯುವಶಕ್ತಿಗೆ ಸ್ವಾಭಿಮಾನದ ಬದುಕುಕಲ್ಪಿಸುವಲ್ಲಿ ಸಹಕಾರ ನೀಡಿದೆ. ಕಾಂಗ್ರೆಸ್‌ನವರು ಏನೇ ಆರೋಪ ಮಾಡಲಿ. ಆದರೆ,ಅಂಕಿ, ಅಂಶ ಗಮನಿಸಿದಾಗ, ಈ ಬಗ್ಗೆ ಮಾಹಿತಿಲಭ್ಯವಾಗುತ್ತದೆ. ಯುವಸಮೂಹಕ್ಕೆ ಕೇಂದ್ರಸರ್ಕಾರ ಸ್ವ ಉದ್ಯೋಗದ ಅವಕಾಶ ಕಲ್ಪಿಸಿದೆ.

ಅಸಂಘಟಿತ ಕಾರ್ಮಿಕರ ರಕ್ಷಣೆಗೆ ಮತ್ತುಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ. ದೇಶದಭದ್ರತೆಗೆ ಸಂಬಂ ಧಿಸಿದಂತೆ ಅನೇಕ ಕಠಿಣಸವಾಲುಗಳು ಎದುರಾದರೂ ಸಮರ್ಥವಾಗಿಎದುರಿಸಲಾಗಿದೆ ಎಂದರು.ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಧ್ಯಕ್ಷ ಸ್ಥಾನಸಿಕ್ಕಿದ್ದು, ಅಲ್ಲಿ ತಮ್ಮ ಪ್ರತಿಭೆಯಿಂದ ದೈತ್ಯರಾಷ್ಟ್ರಗಳಾದ ಅಮೆರಿಕ ಮತ್ತು ಚೀನಾವನ್ನುಒಂದೇ ವೇದಿಕೆಯಲ್ಲಿ ತಂದು ಅವರಿಗೂಸಲಹೆ ನೀಡುವಂತಹ ಕೆಲಸ ಮಾಡಿ ಅವರಭಿನ್ನಾಭಿಪ್ರಾಯವನ್ನು ಶಮನ ಮಾಡುವನಿಟ್ಟಿನಲ್ಲಿ ಮೋದಿ ಅವರ ಚತುರತೆ ಮತ್ತುಅವರ ಆಡಳಿತ ವೈಖರಿ ವಿಶ್ವದಲ್ಲೇ ಅವರಿಗೆಮೊದಲ ಸ್ಥಾನ ತಂದಿದೆ.

ಮುಂದಿನ ದಿನಗಳಲ್ಲಿವಿಶ್ವದ ಆಡಳಿತವನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುವಸೂಚನೆಯನ್ನು ಮೋದಿ ಅವರ ಆಡಳಿತ ನೀಡಿದೆ ಎಂದರು.

Advertisement

ಈ ಸಮಾರಂಭದಲ್ಲಿ ಆತ್ಮನಿರ್ಭರ್‌ ಭಾರತದ ವಸ್ತು ಪ್ರದರ್ಶನ ಮತ್ತು ಮಾರಾಟ,ನವ ಭಾರತದ ನಿರ್ಮಾಣದ ಕುರಿತಾದ ವಿಚಾರಗೋಷ್ಠಿಗಳು, ಶರವೇಗದ ಅಭಿವೃದ್ಧಿಯಪರಿವರ್ತನೆಯ ಪರಿಚಯದ ಪ್ರದರ್ಶಿನಿದೇಶಭಕ್ತಿಯನ್ನು ಉದ್ದೀಪನಗೊಳಿಸುವಚಲನಚಿತ್ರ ಪ್ರದರ್ಶನ, ಸಾಂಸ್ಕೃತಿಕ ಸ್ಪರ್ಧೆ ಮತ್ತುಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸುಶಾಸನಎಂಬ ವಿಷಯದ ಬಗ್ಗೆ ಸಂವಾದ ನಡೆಯಿತು.ಮಾಜಿ ಸಚಿವ ಎಸ್‌. ಸುರೇಶ್‌ ಕುಮಾರ್‌ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷಟಿ.ಡಿ. ಮೇಘರಾಜ್‌ ಪ್ರಾಸ್ತಾವಿಕವಾಗಿಮಾತನಾಡಿದರು.

ಶಾಸಕ ಆಯನೂರುಮಂಜುನಾಥ್‌, ಮೇಯರ್‌ ಸುನಿತಾ ಅಣ್ಣಪ್ಪ,ಪ್ರಮುಖರಾದ ಎಂ.ಬಿ. ಭಾನುಪ್ರಕಾಶ್‌,ಗಿರೀಶ್‌ ಪಟೇಲ್‌, ಧನಿಕ್‌ ಗೌಡ, ಯುವಮೋರ್ಚಾ ಜಿಲ್ಲಾಧ್ಯಕ್ಷ ಹರಿಕೃಷ್ಣ, ಡಿ.ಎಸ್‌.ಅರುಣ್‌ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next